ಬದುಕನ್ನು ಸವಾಲಾಗಿ ಸ್ವೀಕರಿಸುವ 'ಇಳಾ' ಕಾದಂಬರಿ: ನಿರ್ಮಲ
ಹಾಸನ: ರೈತರ ಆತ್ಮಹತ್ಯೆಯಂತಹ ವಸ್ತುವನ್ನು ಇಟ್ಟುಕೊಂಡು ಬದುಕನ್ನು ಸವಾಲಾಗಿ ಸ್ವೀಕರಿಸುವ ಕೃತಿ ಇಳಾ ಕಾದಂಬರಿ ಎಂದು ಲೇಖಕಿಯರ ಬಳಗದ ಅಧ್ಯಕ್ಷೆ ನಿರ್ಮಲಾ ಹೇಳಿದರು. ನಗರದ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಶೈಲಜಾ ಹಾಸನ್ ಅವರ ಇಳಾ ಕಾದಂಬರಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹಳ ಸುಲಭವಾಗಿ ಓದಿಸಿಕೊಂಡು ಹೋಗುವ ಶೈಲಜಾ ಅವರ ಬರವಣಿಗೆಯಲ್ಲಿ ಪ್ರಾದೇಶಿಕ ವಿವರಗಳು ದಟ್ಟವಾಗಿದ್ದು, ಮಲೆನಾಡಿನ ವಿವರಗಳು ಚೆನ್ನಾಗಿ ಮೂಡಿಬಂದಿವೆ ಎಂದು ಲೇಖಕಿ ಭಾರತಿ ಹಾದಿಗೆಯವರು ಅಭಿಪ್ರಾಯಪಟ್ಟರು.
ಸಾಹಿತ್ಯ ಪ್ರಕಾರದಲ್ಲಿರುವ ಈ ಕೃತಿಯು ವಿಶೇಷ ವಸ್ತು ಒಳಗೊಂಡಿದೆ.ಯಾವುದೇ ಸಾಹಿತ್ಯವನ್ನು ಅಸಡ್ಡೆಯಿಂದ ನೋಡುವದು ಸರಿಯಾದುದಲ್ಲ.ಜನರನ್ನು ಓದಿನ ಕಡೆಗೆ ಸೆಳೆಯುವಲ್ಲಿ ಸಾಹಿತ್ಯ ಪ್ರಕಾರದ ಪಾತ್ರ ದೊಡ್ಡದು ಎಂದು ಹಾ.ನಾ.ಪ್ರಸನ್ನ ಹೇಳಿದರು. ಸಂವಾದದಲ್ಲಿ ಜ.ಹೊ.ನಾ., ಪ್ರದೀಪ್, ದ್ಯಾವನೂರು ಮಂಜುನಾಥ್, ಲಲಿತಾ, ಸುಕನ್ಯಾ ಇದ್ದರು.
ಮಾಜಿ ಸೈನಿಕರ ಪಿಂಚಣಿ ಅದಾಲತ್
ಹಾಸನ: ರಕ್ಷಣಾ ಪಿಂಚಣಿಯ ವಿಲೇವಾರಿಯಲ್ಲಿನ ಕುಂದು ಕೊರತೆ ಅಥವಾ ತಕರಾರು ಪರಿಹರಿಸುವ ಸಲುವಾಗಿ ಸಿ.ಡಿ.ಎ. ಚೆನೈ ಇವರು ರಕ್ಷಣಾ ಅದಾಲತನ್ನು ಸೆಪ್ಟಂಬರ್ 16 ಮತ್ತು 17 ರಂದು ಬೆಳಗಾವಿಯಲ್ಲಿ ನಡೆಸಲಿದ್ದಾರೆ. ಬ್ಯಾಂಕ್ ಡಿಪಿಡಿಒ ಖಜಾನೆ ಹಾಗೂ ಇನ್ನಿತರ ಸಂಸ್ಥೆಗಳ ಮುಖಾಂತರ ಪಿಂಚಣಿ ಪಡೆಯುತ್ತಿರುವ ರಕ್ಷಣಾ ಪಿಂಚಣಿದಾರರು ಹಾಗೂ ರಕ್ಷಣಾ ಕುಟುಂಬ ಪಿಂಚಣಿದಾರರು ತಮ್ಮ ಕುಂದು ಕೊರತೆಗಳ ಅರ್ಜಿಯನ್ನು (ದ್ವಿಪ್ರತಿಯಲ್ಲಿ) ಸಂಬಂಧಿಸಿದ PPO z Corr. PPO, ಡಿಸ್ಚಾರ್ಜ್ ಪುಸ್ತಕ ಹಾಗೂ ಬ್ಯಾಂಕ್ಪಾಸ್ ಬುಕ್ನೊಂದಿಗೆ U The Adalat Officer, Ozo The Controller of Defence Accounts,
No 618, Anna Salai Teynampet, Chennai 6000018 (Tele z 044-24349980 Extn., 161) ಇವರಿಗೆ ಅರ್ಜಿ ಸಲ್ಲಿಸಲು ಆ. 20, 2013 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಹಾಸನ ಸಂಪರ್ಕಿಸಲು ಕೋರಿದ್ದಾರೆ.
ಇಂದು ಅರಸು 98ನೇ ಜನ್ಮದಿನಾಚರಣೆ
ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಸಾಮಾಜಿಕ ಕ್ರಾಂತಿಯ ನೇತಾರ, ಸಾಧನೆಗಳ ಸರದಾರ ಹಾಗೂ ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 98ನೇ ಜನ್ಮ ದಿನಾಚರಣೆಯನ್ನು ಆ. 20ರಂದು ಬೆಳಗ್ಗೆ 10 ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಪ್ರಧಾನಿ ದೇವೇಗೌಡರು ಉಪಸ್ಥಿತರಿರುವರು. ಶಾಸಕ ಎಚ್.ಎಸ್.ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ ಸವಲತ್ತು ವಿತರಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕರು, ವಿಧಾನ ಪರಿಷತ್ ಸದಸ್ಯ, ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ ಭಾಗವಹಿಸುವರು.
ರಾಜ್ಯಮಟ್ಟದ ವೇದೋಕ್ತ ಜೀವನ ಶಿಬಿರ
ಹಾಸನ: ವೇದಭಾರತಿ ವತಿಯಿಂದ ನಗರದ ಶಂಕರಮಠದ ಅಧ್ಯಾತ್ಮ ಮಂದಿರದಲ್ಲಿ ಆ. 23, 24 ಮತ್ತು 25 ರಂದು ಮೂರು ದಿನಗಳು ರಾಜ್ಯಮಟ್ಟದ ವೇದೋಕ್ತ ಜೀವನಶಿಬಿರ ಆಯೋಜಿಸಲಾಗಿದೆ. ಬೆಂಗಳೂರಿನ ವೇದಾಧ್ಯಾಯಿ ಸುಧಾಕರಶರ್ಮಾರು ಶಿಬಿರದಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಜಾತಿ, ಮತ, ಪಂಥ, ಲಿಂಗ ಭೇದವಿಲ್ಲದೆ ಎಲ್ಲರೂ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದು ವೇದಭಾರತಿ ಸಂಯೋಜಕ ಹರಿಹರಪುರ ಶ್ರೀಧರ್ ತಿಳಿಸಿದ್ದಾರೆ.
ಪರೀಕ್ಷೆ ತರಬೇತಿ ಶಿಬಿರಕ್ಕೆ ಚಾಲನೆ
ಹಾಸನ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸತತ ಪರಿಶ್ರಮ ಹಾಗೂ ಇಂಥ ಶಿಬಿರಗಳಿಂದ ಪದವೀಧರರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕ ಎಚ್.ಎಸ್. ಪ್ರಕಾಶ್ ಹೇಳಿದರು. ನಗರದ ಕೆ.ಆರ್.ಪುರಂನ ಸಂಪಿಗೆ ರಸ್ತೆಯಲ್ಲಿರುವ ಜ್ಞಾನಧಾರೆ ಕಾಲೇಜಿನಲ್ಲಿ ಬ್ಯಾಂಕಿಂಗ್ ಪರೀಕ್ಷೆಯ ಪೂರ್ವಭಾವಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಮೋಘ್ ಬ್ರಾಡ್ ಬ್ಯಾಂಡ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಕೆ.ಪಿ.ಎಸ್. ಪ್ರಮೋದ್ ಮಾತನಾಡಿ, ಉಚಿತ ಶಿಬಿರ ಏರ್ಪಡಿಸಿರುವ ಹಾಸನ ಜಿಲ್ಲಾ ಬ್ಯಾಂಕ್ ನೌಕರರ ಸಂಘವನ್ನು ಶ್ಲಾಘಿಸಿದರು ಹಾಗೂ ಬಾಲಚಂದ್ರರವರ ಪರಿಶ್ರಮಕ್ಕೆ ತಕ್ಕಂತೆ ಪದವೀಧರರು ಹೆಚ್ಚಿನ ಪರಿಶ್ರಮ ವಹಿಸಿ ಉನ್ನತ ಹುದ್ದೆ ಪಡೆಯುವ ಛಲ ರೂಢಿಸಿ ಕೊಳ್ಳಬೇಕೆಂದು ಮನವಿ ಮಾಡಿದರು. ಜ್ಞಾನಧಾರೆ ಕಾಲೇಜಿನ ಕಾರ್ಯದರ್ಶಿ ಎಸ್.ಪಿ. ಪ್ರಕಾಶ್ ಹಾಗೂ ಬಾಲಚಂದ್ರ ಶುಭ ಕೋರಿದರು. ಸಂಘದ ಅಧ್ಯಕ್ಷ ಪರಮಶಿವಯ್ಯ ಸ್ವಾಗತಿಸಿದರು. ಕುಮಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

