ಯಗಚಿ ಜಲಾಶಯದಿಂದ ನೀರು ಕಲ್ಪಿಸಲು ಒತ್ತಾಯ
ಕ.ಪ್ರ.ವಾರ್ತೆ , ಬೇಲೂರು , ಆ.19
ಹೆಬ್ಬಾಳು ತಾಪಂ ಕ್ಷೇತ್ರ ವ್ಯಾಪ್ತಿಯ ಅಂದಾಜು 30 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದ್ದು, ಯಗಚಿ ಜಲಾಶಯದಿಂದ ಕುಡಿಯುವ ನೀರು ಕಲ್ಪಿಸಬೇಕು ಎಂದು ತಾಪಂ ಸದಸ್ಯ ಪರ್ವತಯ್ಯ ಒತ್ತಾಯಿಸಿದರು.
ಹೆಬ್ಬಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬ್ಯಾಡಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 3 ಲಕ್ಷದ ಹೈಟೆಕ್ ಅಡುಗೆ ಕೋಣೆಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದ ಅವರು ಸದ್ಯ ಗ್ರಾಮಗಳಲ್ಲಿನ ಕುಡಿಯುವ ನೀರು ಕೆಲವು ಕಡೆಯಲ್ಲಿ ಪ್ಲೋರೈಡ್ ಅಂಶದಿಂದ ಕೂಡಿದ್ದು, ಮಕ್ಕಳ ಹಲ್ಲುಗಳ ಸವೆತ ಮತ್ತು ಜನರು ಹಲವು ರೋಗಳಿಂದ ದಿನ ನಿತ್ಯ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕರು ಮತ್ತು ಜಿಲ್ಲಾ ಉಸ್ತವಾರಿ ಸಚಿವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಲ್ಲನಹಳ್ಳಿ ಮತ್ತು ಹನಿಕೆ ಸುಮಾರು 8 ಕಿಮೀ ರಸ್ತೆ ಹಾಳಾಗಿದೆ. ಸಾರ್ವಜನಿಕರು ಮತ್ತು ವಾಹನಗಳಿಗೆ ನಿತ್ಯ ನರಕ ಯಾತನೆ ಉಂಟಾಗುತ್ತಿಗೆ. ಪ್ರತಿ ಗ್ರಾಮಗಳಿಗೆ ಶೌಚಾಲಯಗಳ ಅವಶ್ಯವಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿ ಈ ಬಗ್ಗೆ ಸೂಕ್ತ ವರದಿ ನೀಡಬೇಕು ಹಾಗೂ ಅಗತ್ಯ ಇರುವ ಕಡೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.
ದೊಡ್ಡಬ್ಯಾಡಿಗೆರೆಯಲ್ಲಿ ಹೆಚ್ಚುವರಿ ಶಾಲಾ ಕಟ್ಟಡದ ಅವಶ್ಯವಿದ್ದು, ಈ ವಿಚಾರವಾಗಿ ಉನ್ನತ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಶಾಲಾ ಮುಖ್ಯಶಿಕ್ಷಕ ಗುರುಮೂರ್ತಿ ಮಾತನಾಡಿ, ಶಾಲೆ ಸುಂದರವಾದ ಸ್ಥಳದಲ್ಲಿದ್ದು, ಸುತ್ತ ಕಾಂಪೌಂಡ್ ನಿರ್ಮಾಣವಾಗಿದೆ. ಹೆಚ್ಚುವರಿ ಶಾಲಾ ಕಟ್ಟಡ ಹಾಗೂ ಸೈಕಲ್ ನಿಲ್ದಾಣ ತ್ವರಿತ ಗತಿಯಲ್ಲಿ ನಡೆಯಬೇಕಿದೆ. ಗ್ರಾಮಸ್ಥರು ಶಾಲೆಯ ಬಗ್ಗೆ ತುಂಬಾ ಕಾಳಜಿ ಇರಿಸಿಕೊಂಡಿದ್ದಾರೆ ಎಂದರು.
ಶಿಕ್ಷಕ ರಮೇಶ್, ಶಾಂತೇಗೌಡ, ಗ್ರಾಪಂ ಸದಸ್ಯ ರಂಗಸ್ವಾಮಿ, ಕರ್ಣ, ನಟರಾಜ್, ನಂದಕುಮಾರ್, ರುದ್ರಶೆಟ್ಟ, ಮಂಜಪ್ಪ, ರೇಣುಕಾ ಇನ್ನು ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

