ವಿಎಚ್ಪಿ, ಬಜರಂಗದಳದವರಿಂದ ರಕ್ಷಾ ಬಂಧನ
ಕ.ಪ್ರ.ವಾರ್ತೆ , ಸಕಲೇಶಪುರ , ಆ. 21
ತಾಲೂಕು ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ತಾಲೂಕಿನ ನಾನಾ ಗ್ರಾಮಗಳು ಹಾಗೂ ಪಟ್ಟಣದ ನಾನಾ ಬಡಾವಣೆಗಳಲ್ಲಿ ಸೋಮವಾರ ರಕ್ಷಾ ಬಂಧನ ಆಚರಿಸಲಾಯಿತು.
ಪಟ್ಟಣದ ಕೌಡಳ್ಳಿಯಲ್ಲಿರುವ ಬಂಧಿಖಾನೆಯಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್ ಮಾತನಾಡಿ, ರಕ್ಷಾ ಬಂಧನವನ್ನು ಆಚರಿಸುವುದು ವಿಶ್ವ ಭ್ರಾತೃತ್ವಕ್ಕೆ ವಿಶಿಷ್ಟ ಕೊಡುಗೆ ಎಂದರು.
ಈಗಿನ ಕಾಲದಲ್ಲಿ ಯುವ ಜನತೆ ಪ್ರೇಮಿಗಳ ದಿನ, ಅಪ್ಪಂದಿರ ದಿನ, ಅಮ್ಮಂದಿರ ದಿನ ಎಂದು ಆಚರಿಸುತ್ತಾರೆ. ಇದೆಲ್ಲಾ ವಿದೇಶಿ ಆಚರಣೆಗಳಾಗಿವೆ. ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಹೇಳಿದ ವಿಶ್ವ ಭ್ರಾತೃತ್ವ ಕಲ್ಪನೆ ಇರುವುದು ನಮ್ಮ ದೇಶದಲ್ಲಿ ಮಾತ್ರ. ಯುವ ಜನತೆ ಈ ರಕ್ಷಾ ಬಂಧನವನ್ನು ಆಚರಿಸುವಾಗ ಸಂಭ್ರಮ ಪಡಬೇಕು. ರಕ್ಷಾ ಬಂಧನ ಆಚರಣೆ ಸಹೋದರ ಸಹೋದರಿಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ಜೈಲಿನಲ್ಲಿರುವ ನಮ್ಮ ಸಹೋದರರು ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಜೈಲಿಗೆ ಬರುವಂತಾಗಿದ್ದು, ರಕ್ಷಾ ಬಂಧನದ ಈ ಸಂದರ್ಭದಲ್ಲಿ ನಾವೆಲ್ಲ ರಕ್ಷೆ ಧರಿಸಿ ಭಾರತ ಮಾತೆಯ ರಕ್ಷಣೆಗೆ ನಮ್ಮ ಮುಂದಿನ ಜೀವನವನ್ನು ಮೀಸಲಾಗಿರಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಇದೇ ವೇಳೆ ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿರುವ ಮಿಲಿಟರಿ ಕ್ಯಾಂಪ್ನಲ್ಲಿ ಹಾಗೂ ಪಟ್ಟಣದ ನಾನಾ ಸರ್ಕಾರಿ ಕಚೇರಿಗಳಲ್ಲಿ ಸಹ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಘು, ಶಿವಪ್ರಸಾದ್, ಕಾರ್ತೀಕ್, ಸಂತೋಷ್, ಕುಶಾಲನಗರ ರಾಜಣ್ಣ ಹಾಗೂ ಇನ್ನು ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

