ಪಡುವಲಹಿಪ್ಪೆಯಲ್ಲಿ ಅಂತರಕಾಲೇಜುಗಳ ಕ್ರಾಸ್ ಕಂಟ್ರಿ ಸ್ಪರ್ಧೆ
ಹೊಳೆನರಸೀಪುರ: ತಾಲೂಕಿನ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಸೆ. 2 ರಂದು ಬೆಳಗ್ಗೆ 6 ಕ್ಕೆ ಅಂತರ ಕಾಲೇಜುಗಳ ಪುರುಷ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಸ್ಪರ್ಧೆಯನ್ನು ಪಡುವಲಹಿಪ್ಪೆಯಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಎಲ್ಲಾ ಕಾಲೇಜುಗಳ 350 ವಿದ್ಯಾರ್ಥಿಗಳು ಮತ್ತು 100 ವಿದ್ಯಾರ್ಥಿಯರನ್ನು ಒಳಗೊಂಡಂತೆ ಸುಮಾರು 450 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದಾರೆ.
ಮೈಸೂರು ವಿಶ್ವವಿದ್ಯಾನಿಲಯವ್ಯಾಪ್ತಿಯ ಸುಮಾರು 75 ಕ್ರಿಡಾಧಿಕಾರಿಗಳು ಮತ್ತು ವ್ಯವಸ್ಥಾಪಕರು ಆಗಮಿಸಲಿದ್ದಾರೆ. ಸ್ಪರ್ಧೆಯು ಗಂಡು ಮಕ್ಕಳಿಗೆ 12 ಕಿ.ಮೀ ಮತ್ತು ಹೆಣ್ಣು ಮಕ್ಕಳಿಗೆ 6 ಕಿ.ಮೀ ಆಗಿರುತ್ತದೆ. ಸ್ಪರ್ಧೆಯು ಪಡುವಲಹಿಪ್ಪೆಯ ಮುಖ್ಯ ವೃತ್ತದಿಂದ ಪ್ರಾರಂಭವಾಗಿ ಹರದೂರು, ಹರದೂರು ಪುರ, ಬಸವನಹಳ್ಳಿ ಕೊಪ್ಪಲು, ಅಂಕನಾಯ್ಕನಹಳ್ಳಿ, ಮಾರಗೌಡನಹಳ್ಳಿ ಕೊಪ್ಪಲು ಮಾರ್ಗವಾಗಿ ಸಾಗಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಮುಕ್ತಾಯವಾಗುತ್ತದೆ. ಸ್ಪರ್ಧಿಗಳಿಗೆ ಉಳಿಯುವ ವ್ಯವಸ್ಥೆಯನ್ನು ಕಾಲೇಜು ಕೊಠಡಿ, ಪಡುವಲಹಿಪ್ಪೆಯ ಸಮುದಾಯ ಭವನ ಮತ್ತು ಮಹಿಳಾ ಹಾಸ್ಟೆಲ್‌ನಲ್ಲಿ ಮಾಡಲಾಗಿದೆ.
ಸೆ.1 ರಂದು ರಾತ್ರಿ ಭೊಜನ ಮತ್ತು ಸೆ.2 ರಂದು ಬೆಳಗ್ಗೆ ಉಪಹಾರ ವ್ಯವಸ್ಥೆಯಿದೆ. ಕ್ರೀಡಾಪಟುಗಳಿಗೆ ಅವಶ್ಯಬಿದ್ದಲ್ಲಿ ಚಿಕಿತ್ಸೆ ನೀಡಲು ಸ್ಥಳೀಯ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಮತ್ತು ಆಂಬ್ಯುಲೆನ್ಸ್ ಸೇವೆ ಹಾಗೂ ಸ್ಪರ್ಧಿಗಳನ್ನು ಕರೆತರುವ ಮತ್ತು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಹೊಳೆನರಸೀಪುರ ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆ ಕೂಡಾ ಕಲ್ಪಿಸಲಾಗಿದೆ. ಸೆ.2 ರಂದು ನಡೆಯುವ ಸ್ಪರ್ಧೆಯನ್ನು ರಾಜ್ಯ ಯುವ ಮುಖಂಡ ಎಚ್.ಆರ್. ಪ್ರಜ್ವಲ್ ರೇವಣ್ಣ ಉದ್ಘಾಟಿಸುವರು. ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಸಿ.ಕೃಷ್ಣ, ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಬಸವೇಗೌಡ, ಜಿಪಂ ಸದಸ್ಯ ಎಚ್.ಎನ್. ದೇವೇಗೌಡ, ಸಂಚಾಲಕ ಜಿ.ಪಿ ಯೋಗೇಶ, ಸಮಿತಿ ಸದಸ್ಯರು, ಹಾಗೂ ಗ್ರಾಮಸ್ಥರು ಭಾಗವಹಿಸುವರು. ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭದಲ್ಲಿ ಶಾಸಕ ಎಚ್.ಡಿ.ರೇವಣ್ಣ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.
ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಪ್ರೊ. ಎಚ್.ಕೆ. ಕುಮಾರರಾಜ ಅರಸ್ ಸಮಾರೋಪ ಭಾಷಣ ಮಾಡುವರು. ಡಾ.ಸಿ.ಕೃಷ್ಣ, ಪುಷ್ಪಾ ಗೌಡೇಗೌಡ, ಲಕ್ಷ್ಮಿ ರಂಗಸ್ವಾಮಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಖೋ-ಖೋ ಆಟಗಾರರು ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ ಸಿ.ಪಿ.ಆದರ್ಶ ಅವರನ್ನು ಸನ್ಮಾನಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

