ಆಡಂಬರ ಜೀವನದಿಂದ ನಮ್ಮತನ ಮರೆಯುವಿಕೆ: ಶಿವಲಿಂಗ ಶಾಸ್ತ್ರಿ ವಿಷಾದ
ಹಾಸನ: ಪ್ರಸ್ತುತದಲ್ಲಿ ಆಡಂಬರ ಜೀವನ ಹೆಚ್ಚು ಕಂಡು ಬಂದು ನಮ್ಮತನವನ್ನು ಮರೆಯಲಾಗುತ್ತಿದೆ ಎಂದು ವಿಶ್ವ ವೀರಶೈವ ಲಿಂಗಾಯತ ವೇದಿಕೆ ರಾಜ್ಯಾಧ್ಯಕ್ಷ ಶಿವಲಿಂಗ ಶಾಸ್ತ್ರಿ ವಿಷಾದಿಸಿದ್ದಾರೆ.
ನಗರದ ಜವೇನಹಳ್ಳಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 151ನೇ ಸದ್ಭಾವ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಟ್ಟಿನಿಂದ ದೊಡ್ಡವನಾಗುವವರೆಗೂ ಸಾಕಿ ಬೆಳೆಸಿದ ತಂದೆ-ತಾಯಿ ಮಕ್ಕಳಿಗೆ ಭಾರವಾಗಿ ವೃದ್ಧಾಶ್ರಮಕ್ಕೆ ಬಿಟ್ಟು ಬರುವಂತಹ ಸನ್ನಿವೇಶ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮನುಷ್ಯನ ಈ ಕ್ರೌರ್ಯಕ್ಕೆ ನೈತಿಕ ಮೌಲ್ಯದ ಕುಸಿತ ಕಂಡುಬರುತ್ತಿದೆ. ಆಧ್ಯಾತ್ಮಿಕ ಚಿಂತನೆಯು ಕಡಿಮೆ ಆಗುತ್ತಿದ್ದು, ಪಂಚೇಂದ್ರಿಯದ ಹಿಡಿತದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಗೋಶಾಲೆ ತೆರೆಯದಿದ್ದರೆ ಹೋರಾಟ: ರೈತ ಸಂಘ ಜಿಲ್ಲಾ ಸಂಚಾಲಕ ಎಚ್ಚರಿಕೆ
ಅರಸೀಕೆರೆ: ತಾಲೂಕಿನ ಹಾರನಹಳ್ಳಿಯಲ್ಲಿ ಕೂಡಲೇ ಗೋಶಾಲೆ ತೆರೆಯದಿದ್ದರೆ ಹೋರಾಟ ಆರಂಭಿಸುವುದಾಗಿ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಎಚ್ಚರಿಸಿದ್ದಾರೆ. ಶಾಸಕರು ಹಾಗೂ ಇನ್ನಿತರ ಅಧಿಕಾರಿಗಳ ಮನವಿಗೆ ಸ್ಪಂದಿಸಿ ಸಂಘದಿಂದ ಕೈಗೊಂಡಿದ್ದ ಆಮರಣಾಂತ ಉಪವಾಸ ಸ್ಥಗಿತಗೊಳಿಸಲಾಗಿತ್ತು. ಶಾಸಕರು ಭರವಸೆ ನೀಡಿ ಹಲವು ದಿನಗಳೇ ಕಳೆದರೂ ಗೋಶಾಲೆ ತೆರೆಯುವ ಸಂಬಂಧ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಸಂಬಂಧಿಸಿದ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು. ಜಿಲ್ಲಾಧಿಕಾರಿಗಳು ಈಗಾಗಲೇ ಗೋಶಾಲೆ ತೆರೆಯಲು ಸರ್ಕಾರದಿಂದ ಅನುದಾನ ಲಭ್ಯವಿದೆ ಎಂದು ಘೋಷಿಸಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಮೀನಮೇಷ ಎಣಿಸುತ್ತಿರುವುದು ಅಚ್ಚರಿಯ ಸಂಗತಿ. ಕೂಡಲೇ ಗೋಶಾಲೆ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

