ಹಾಸನ

ಶಾಲೆಗೊಂದು ಚುಟುಕು ಭಾಷಣ ಸ್ಪರ್ಧೆ

Published On :

ಹೊಳೆನರಸೀಪುರ: ಚುಟುಕು ಸಾಹಿತ್ಯ ಪ್ರತಿಯೊಬ್ಬನನ್ನೂ ಸಹೃದಯನನ್ನಾಗಿ ಮಾಡುವ ಸಾಹಿತ್ಯವಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಾ.ನಂ.ಲೋಕೇಶ್ ಅಭಿಪ್ರಾಯಪಟ್ಟರು.
 ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ   ಹಮ್ಮಿಕೊಳ್ಳಲಾಗಿದ್ದ ಶಾಲೆಗೊಂದು ಚುಟುಕು ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಚುಟುಕು ಸಾಹಿತ್ಯ ಕೆಲವೇ ಸಾಲುಗಳುಳ್ಳ ಆಕೃತಿಯಲ್ಲಿ ವಾಮನನಂತಿದ್ದರೂ, ಅದರ ಆಳ ಮತ್ತು ಅರಿವಿನಿಂದ ಅದು ತ್ರಿವಿಕ್ರಮನ ಎತ್ತರದ ಉನ್ನತವಾದ ಸಾಹಿತ್ಯಿಕ ಅಂಶಗಳನ್ನು ಒಳಗೊಂಡಿರುವ ಸಾಹಿತ್ಯದ ಪ್ರಕಾರವೆಂದರೂ ತಪ್ಪಿಲ್ಲ ಎಂದರು. ಉಪನ್ಯಾಸಕ ಎ.ಎಸ್.ಗಿರೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕ ಶಿವಯೋಗಿ, ಎಂ.ವಿ.ಸತ್ಯನಾರಾಯಣ, ಶಿವರಾಮು ಮೊದಲಾದವರು ಭಾಗವಹಿಸಿದ್ದರು.
 ಸ್ಪರ್ಧೆಯಲ್ಲಿ ಕಾಲೇಜಿನ ದ್ವಿತೀಯ ಪಿಯುಸಿಯ ರಮೇಶ್ ಪ್ರಥಮ, ಎಚ್.ಡಿ.ಪರಮೇಶ್ ದ್ವಿತೀಯ ಹಾಗೂ ಬಿ.ಡಿ.ರಂಜಿತ್ ತೃತೀಯ ಬಹುಮಾನ ಪಡೆದರು.
 ಚುಟುಕು ಸಾಹಿತ್ಯ ಪರಿಷತ್ ತಾ. ಅಧ್ಯಕ್ಷರಾದ ಪ್ರೇಮಾಮಂಜುನಾಥ್ ನೇತೃತ್ವ ವಹಿಸಿದ್ದರು. ಅಧ್ಯಕ್ಷತೆ ಪ್ರಾಂಶುಪಾಲ ಕೃಷ್ಣೇಗೌಡ ವಹಿಸಿದ್ದರು. ಕುಮಾರ್ ಸ್ವಾಗತಿಸಿದರು. ರಮೇಶ್ ಪ್ರಾರ್ಥಿಸಿದರು. ಉಷಾರಾಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.