ಹಾಸನ

ಉದ್ಯೋಗ ವಂಚನೆ: ವ್ಯಕ್ತಿಗೆ ಗೂಸಾ

Published On :

ಅರಸೀಕೆರೆ: ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರನ್ನು ವಂಚಿಸಿ ಉಚಿತ ಉದ್ಯೋಗ ನೋಂದಣಿ ಸಹಾಯವಾಣಿ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಲು ಮುಂದಾಗಿದ್ದ ಬೆಂಗಳೂರಿನ ಕೃಷಿ ಫೌಂಡೇಷನ್‌ವೊಂದರ ವ್ಯಕ್ತಿಯೊಬ್ಬನಿಗೆ ನಿರುದ್ಯೋಗಿಗಳೇ ಗೂಸಾ ಕೊಟ್ಟ ಪ್ರಸಂಗ ಸೋಮವಾರ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದಿದೆ.
ಆ.3ರಂದು ಪಟ್ಟಣದ ಹಳೆಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಜೆ.ಬಿ.ಡಿ. ಕೃಷಿ ಫೌಂಡೇಷನ್ ಹೆಸರಿನ ಪದಾಧಿಕಾರಿಗಳು ಉದ್ಯೋಗ ನೀಡುವುದಾಗಿ ಅರ್ಜಿ ವಿತರಿಸಿ ನಂತರ ದೂರವಾಣಿ ಮೂಲಕ ಆಸಕ್ತ ಅಭ್ಯರ್ಥಿಗಳನ್ನು ಸಂಪರ್ಕಿಸಿ ಉದ್ಯೋಗ ನೀಡಲು ಪರೀಕ್ಷೆ ಹಾಗೂ ಇನ್ನಿತರೆ ಖರ್ಚಿಗೆ ಹಣ ನೀಡುವಂತೆ ಒತ್ತಾಯಿಸಿದ್ದಲ್ಲದೆ ಬೆಂಗಳೂರಿಗೆ ಕರೆದೊಯ್ದು ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸೋಮವಾರ ಒಂದೆಡೆ ಸೇರಿದ ಯುವಕ-ಯುವತಿಯರು ಸಂಸ್ಥೆಯ ಶಿವಾನಂದ್ ಹಾಗೂ ವಿಠಲ್ ಎಂಬುವರನ್ನು ಭೇಟಿ ಮಾಡಿ ಅಗತ್ಯ ದಾಖಲೆ ನೀಡಿದ್ದಾರೆ. ಆದರೆ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆತನನ್ನು ಹಿಡಿದು ಶಾಸಕರಿಗೆ ಒಪ್ಪಿಸಿದರು.
ಸಮಸ್ಯೆಯ ಆಳ ಅರಿತ ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಥಳಕ್ಕಾಗಮಿಸಿ ಕಂಪನಿಯ ದಾಖಲೆಗಳನ್ನು ಪ್ರದರ್ಶಿಸುವಂತೆ ಸೂಚಿಸಿದ ವೇಳೆ ಪದಾಧಿಕಾರಿಗಳು ತಬ್ಬಿಬ್ಬಾದರು. ಇದರಿಂದ ಸಿಟ್ಟಿಗೆದ್ದ ಶಾಸಕರು ಬಡವರು, ಅಮಾಯಕರನ್ನು ವಂಚಿಸುವುದು ತರವಲ್ಲ. ತಮ್ಮ ತಪ್ಪು ತಿದ್ದಿಕೊಳ್ಳಬೇಕು. ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಗದರಿದರು. ಕುಪಿತರಾಗಿದ್ದ ಯುವಕರ ಗುಂಪು ಪದಾಧಿಕಾರಿಗಳಿಗೆ ಗೂಸಾ ನೀಡಿತು.
ನಂತರ ಮಾತನಾಡಿದ ಶಾಸಕರು ಉದ್ಯೋಗ ಮೇಳಕ್ಕೂ, ಇವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಅವರ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಇಂತಹ ನಯವಂಚಕರು ಎಲ್ಲೆಡೆಯು ಇರುತ್ತಾರೆ. ಈ ಬಗ್ಗೆ ವಿದ್ಯಾವಂತರು ಜಾಗೃತಿ ವಹಿಸಬೇಕೆಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.