ಹಾಸನ

ನೀರಿನ ಸಮಸ್ಯೆ: ಗ್ರಾಪಂ ಕಚೇರಿಗೆ ಬೀಗ ಜಡಿದ ಗ್ರಾಮಸ್ಥರು

Published On :

ಕ.ಪ್ರ.ವಾರ್ತೆ ಹಳೇಬೀಡು ಆ. 31
ಇಲ್ಲಿಗೆ ಸಮೀಪ ಘಟ್ಟದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದರಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಬ್ರಾಹ್ಮಣರಹಟ್ಟಿ, ರೈತರ ಹಟ್ಟಿ ಕಾಲೋನಿ, ಸೊಪ್ಪನಹಳ್ಳಿ ಗ್ರಾಮಸ್ಥರು 2 ತಿಂಗಳಿಂದಲೂ ಕುಡಿಯುವ ನೀರು ಪೂರೈಸಿ ಎಂದು ಜನಪ್ರತಿನಿಧಿಗಳ ಗಮನಕ್ಕೆ ತಂದರೂ, ಈವರೆಗೂ ಯಾರೂ ಗಮನಹರಿಸಿಲ್ಲ. ಈ ಹಿಂದೆ ಕುಡಿಯುವ ನೀರು ಒದಗಿಸಲಿಕ್ಕಾಗಿ ಕೊಳವೆ ಬಾವಿ ಕೊರೆಸಲಾಗಿತ್ತು. ಆದರೆ, ಅದರಲ್ಲಿಯೂ ನೀರು ಬಾರದಿದ್ದಾಗ ಆಕ್ರೋಶಗೊಂಡ ಜನರು ಈ ಹಿಂದೆ ಧರಣಿ ನಡೆಸಿದ್ದರು. ಜಿಲ್ಲಾ ಪಂಚಾಯ್ತಿ ಕಿರಿಯ ಎಂಜಿನಿಯರ್ ಚನ್ನಬಸಪ್ಪ, ಗ್ರಾಪಂ ಪಿಡಿಓ,  ಎಎಸ್‌ಐ ಯಾಕ್ಕಿಗೌಡರೊಂದಿಗೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ, ಮಾಜಿ ಅಧ್ಯಕ್ಷ ಶಿವಸ್ವಾಮಿ, ರಂಗಸ್ವಾಮಿ, ರೇವಣ್ಣ ಹಾಜರಿದ್ದರು.
ಎಂಜಿನಿಯರ್ ಚನ್ನಬಸಪ್ಪ ಜಿಲ್ಲಾ ಪಂಚಾಯ್ತಿ ಅನುಮತಿ ಪಡೆದು ಕೂಡಲೇ ನೂತನ ಕೊಳವೆ ಬಾವಿ ಕೊರೆಸ ಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದು ಕೊಳ್ಳದ ಕಾರಣ ನಿವಾಸಿಗಳು ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ, ಕಚೇರಿ ಮುಂದೆ ಖಾಲಿ ಕೊಡಗಳನ್ನಿಟ್ಟು  ಪ್ರತಿಭಟನೆ ನಡೆಸಿದರು.

'ಕತ್ತಲೆಂದು ದೂಷಿಸಿದರೆ ಕತ್ತಲು ದೂರವಾಗದು'
ಹಾಸನ:
ಕತ್ತಲು ಎಂದು ದೋಷಿಸಿದರೆ ಕತ್ತಲು ದೂರವಾಗದು. ಅದರ ಬದಲು ಒಂದು ಸಣ್ಣ ದೀಪವನ್ನು ಹಚ್ಚಿಡಬೇಕು ಆಗ ಬೆಳಕು ಧರಿಸುತ್ತದೆ. ಅದೇ ರೀತಿ ಕಷ್ಟಗಳನ್ನು ಎದುರಿಸಬೇಕು, ಆಗ ನಲಿವು ಸಿಗುತ್ತದೆ ಎಂದು  ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತೆ ಕಾಂಚನಮಾಲ ತಿಳಿಸಿದರು. ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.