ಕನ್ನಡ ವಾಹಿನಿ ಮರುಪ್ರಸಾರಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಹಾಸನ ಡಿ. 12
ಆಮೋಘ್ ನೆಟ್ವರ್ಕ್ನಲ್ಲಿ ಕನ್ನಡದ ಖಾಸಗಿ ವಾಹಿನಿ ಪ್ರಸಾರ ಬಂದ್ ಮಾಡಲಾಗಿದ್ದು, 24 ಗಂಟೆಯೊಳಗೆ ವಾಹಿನಿ ಪ್ರಸಾರ ಪುನರಾರಂಭಿಸದಿದ್ದರೆ ಈ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅಮೋಘ ಕೇಬಲ್ ಆಪರೇಟರ್ಸ್ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಕಾರ್ಯಾಧ್ಯಕ್ಷ ಮತ್ತು ಕೇಬಲ್ ಆಪರೇಟರ್ ಸತೀಶ್, ಪಟೇಲ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೋಘ ಕೇಬಲ್ನಲ್ಲಿ ಖಾಸಗಿ ಕನ್ನಡ ಮನರಂಜನಾ ವಾಹಿನಿ ಪ್ರಸಾರ ರದ್ದಾಗಿದ್ದರೂ, ಈವರೆಗೂ ವ್ಯವಸ್ಥಾಪಕರು ಈ ಬಗ್ಗೆ ಸರಿಯಾದ ಕಾರಣ ನೀಡುತ್ತಿಲ್ಲ. ಇದರಿಂದ ಅಮೋಘ್ ಆಪರೇಟರ್ಗಳಿಗೆ ತೊಂದರೆ ಉಂಟಾಗಿದ್ದು, ಸಾರ್ವಜನಿಕರಿಂದ ಕೇಬಲ್ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಕನ್ನಡ ವಾಹಿನಿ ಕೇಬಲ್ನಲ್ಲಿ ಪ್ರಸಾರ ಮಾಡುವವರೆಗೂ ಹಣ ನೀಡುವುದಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇನ್ನೂ ಕೆಲವು ಸಾರ್ವಜನಿಕರು ಹಣ ಸಂಗ್ರಹಿಸುವ ಕೇಬಲ್ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು.
ಮಾಹಿತಿ ಇಲ್ಲ: ಇದುವರೆಗೂ ಚಾನೆಲ್ ಮರು ಪ್ರಸಾರದ ಬಗ್ಗೆ ಯಾವುದೇ ಮಾಹಿತಿಯನ್ನು ಅಮೋಘ ವ್ಯವಸ್ಥಾಪಕರು ನೀಡುತ್ತಿಲ್ಲ. ಈ ಬಗ್ಗೆ ಆಟರೇಟರ್ಗಳು ವ್ಯವಸ್ಥಾಪಕರನ್ನು ಕೇಳಿದರೆ, ತಾಂತ್ರಿಕ ದೋಷದಿಂದ ತೊಂದರೆ ಉಂಟಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ಪೊಳ್ಳು ಭರವಸೆ ನೀಡುತ್ತಿದ್ದಾರೆ. ಕೇಬಲ್ನಲ್ಲಿ ತಾಂತ್ರಿಕ ದೋಷಗಳು ಉಂಟಾದ್ದಲ್ಲಿ ಒಂದು ದಿನದೊಳಗೆ ಸರಿಪಡಿಸಬಹುದಾಗಿದೆ. ಆದರೇ ವ್ಯವಸ್ಥಾಪಕರು ತಮ್ಮ ಸ್ವಹಿತಾಸಕ್ತಿಗಾಗಿ ವಾಹಿನಿ ಪ್ರಸಾರವನ್ನು ರದ್ದು ಮಾಡುವ ಮೂಲಕ ಆಪರೇಟರ್ಗಳಿಗೆ ವಿನಾಕಾರಣ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದರು.
ನಾವೇ ಆನ್ ಮಾಡುತ್ತೇವೆ: ಆಪರೇಟರ್ಗಳು ಎಂಎಸ್ಓಗಳ ಅಧೀನದಲ್ಲಿ ಇರುವುದರಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಚಾರವಾಗಿ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಲಾಗಿದೆ. ವ್ಯವಸ್ಥಾಪಕರು 24 ತಾಸುಗಳೊಳಗೆ ಚಾನೆಲ್ ಪ್ರಸಾರ ಮಾಡದಿದ್ದಲ್ಲಿ ನಾನಾ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಅಮೋಘ ಕಚೇರಿಗೆ ಕಾರ್ಯಕರ್ತರೊಂದಿಗೆ ಹೋಗಿ ನಾವುಗಳೇ ಚಾನೆಲ್ ಆನ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ವೀರ ಕನ್ನಡಿಗ ಟಿಪ್ಪು ಸೇನೆಯ ಅಧ್ಯಕ್ಷ ಅಕ್ಮಲ್ ಜಾವೀದ್, ಕರ್ನಾಟಕ ಕಾವಲು ಪಡೆಯ ಸಂಚಾಲಕ ನವೀನ್, ನಟೇಶ್ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

