ಹಾಸನ

ರಸ್ತೆ ಡಾಂಬರೀಕರಣಕ್ಕೆ ಚಾಲನೆ

Published On :

ಬೇಲೂರು: ಬೇಲೂರು-ಗೇಂಡೆಹಳ್ಳಿ ಮಾರ್ಗ ಮೂಡಿಗೆರೆ ರಸ್ತೆಯನ್ನು ರು. 3 ಕೋಟಿ ಅನುದಾನದಲ್ಲಿ ಡಾಂಬರಿಕರಣ ಮಾಡಲಾಗುವುದು ಎಂದು ಶಾಸಕ ವೈ.ಎನ್. ರುದ್ರೇಶಗೌಡ ತಿಳಿಸಿದರು.
ತಾಲೂಕಿನ ಸಿಂಗಪುರ ಸಮೀಪ ರಸ್ತೆ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು,  ಮಲೆನಾಡು ಪ್ರದೇಶಗಳಲ್ಲಿ ತುಂಬಾ ಮಳೆ ಬರುವುದರಿಂದ ರಸ್ತೆ ಬಹು ಬೇಗ ಕಿತ್ತು ಹೋಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು ಈ ಹಿನ್ನೆಲೆಯಲ್ಲಿ ರು. 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಕ್ರಮಕೈಗೊಂಡಿರುವುದಾಗಿ ಹೇಳಿದರು.
ಈ ಭಾಗದಲ್ಲಿ ರಸ್ತೆ ಹಾಳಾಗಲು ಇಲ್ಲಿ ನೆಡೆಯುತ್ತಿರುವ ಸಾಮೀಲ್‌ಗಳ ಲಾರಿಗಳು ಎಂದ ಅವರು, ಲಾರಿಗಳಲ್ಲಿ ಅತಿ ಹೆಚ್ಚು ಭಾರದ ಲೋಡ್ ಹಾಕುತ್ತಿದ್ದು ಇದರಿಂದ ರಸ್ತೆ ತುಂಬ ಹದಗೆಟ್ಟಿದೆ ಎಂದು ವಿವರಿಸಿದರು.
ನಿರ್ಮಾಣ ಮಾಡಲಾಗುವುದು: ಜಿಲ್ಲಾ ರಸ್ತೆಯಾದ ಗೆಂಡೆಹಳ್ಳಿ- ಮೂಡಿಗೆರೆ ರಸ್ತೆಯನ್ನು ಅಗಲಿಕರಣ ಮಾಡಬೇಕು. ಆದರೆ ಸರ್ಕಾರ ಜಿಲ್ಲಾರಸ್ತೆಗಳನ್ನು 5.5 ಮೀ. ಅಗಲಕ್ಕೆ ನಿಗದಿಗೊಳಿಸಿದ್ದು ಅದರಂತೆ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.
ನಿಯಂತ್ರಿಸಬೇಕು: ತಾಲೂಕು ಕಾಂಗ್ರೆಸ್ ಅಧ್ಯಕ್ಷ ವೈ.ಟಿ. ದಾಮೋದರ್ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು. ಕಾರಣ, ಈ ಭಾಗದಲ್ಲಿ ಮಳೆ ಹೆಚ್ಚಿದ್ದು ರಸ್ತೆ ಬಹು ಬೇಗ ಹಾಳಾಗುವುದಲ್ಲದೇ, ಸಂಚಾರಕ್ಕೆ ತೊಂದರೆಯಾಗುತ್ತದೆ. ಇಲಾಖೆ ಇಂಜಿನಿಯರ್‌ಗಳು ಈ ಭಾಗದ ರಸ್ತೆಯಲ್ಲಿ ಅತಿ ಹೆಚ್ಚು ಭಾರದ ವಾಹನಗಳನ್ನು ಸಂಚರಿಸುವುದನ್ನು ನಿಯಂತ್ರಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಜಿ.ಟಿ. ಇಂದಿರಾ, ಮುಖಂಡರಾದ ಪದ್ಮೀಗೌಡ, ಕೃಷ್ಣಕುಮಾರ್, ಮಲ್ಲೇಶಗೌಡ, ಬಿರಟೆಮನೆ ಸುರೇಶ್, ಗುತ್ತಿಗೆದರರಾದ ಸಿ.ಎಸ್. ಜಯಮೂರ್ತಿ, ಮುರುಳಿ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.