ಹಾಸನ

ರಸ್ತೆ ಅಭಿವೃದ್ಧಿಗೆ 2.8 ಕೋಟಿ

Published On :

ಜಾವಗಲ್:  ಉಂಡಿಗನಾಳು- ಅಪ್ಪಿಹಳ್ಳಿ ರಸ್ತೆಯನ್ನು 2.8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ವೈ.ಎನ್.ರುದ್ರೇಶ್‌ಗೌಡ ತಿಳಿಸಿದರು.
ಜಾವಗಲ್ ಹೋಬಳಿ ಉಂಡಿಗನಾಳು ಗ್ರಾಮದಲ್ಲಿ ಭಾನುವಾರ 43.2 ಲಕ್ಷ ವೆಚ್ಚದ ಸುವರ್ಣ ಗ್ರಾಮ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2.8 ಕೋಟಿ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ಜಾವಗಲ್ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ನೀರಿನ ಸೌಲಭ್ಯ ಒದಗಿಸಲು ಕೆರೆಕಟ್ಟೆಗಳಿಗೆ ನೀರು ಹರಿಸುವ ಕಾರ್ಯದಲ್ಲಿ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇನೆ. ಈಗಾಗಲೇ ಈ ಯೋಜನೆಗೆ 120 ಕೋಟಿ ಅನುದಾನ ಕಾಯ್ದಿರಿಸಿದ್ದು, ಸರ್ವೆ ಕಾರ್ಯಕ್ಕೆ 25 ಲಕ್ಷ ಬಿಡುಗಡೆಯಾಗಿದೆ ಎಂದರು.
ಈ ಭಾಗದ ಕೆರೆಕಟ್ಟೆಗಳಿಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಿಕೊಡಲು ಸತತ ಪ್ರಯತ್ನ ಮಾಡುತ್ತಿದ್ದು ಇದಕ್ಕೆ ಈ ಭಾಗದ ಜನರು ಕೈ ಜೋಡಿಸಬೇಕೆಂದರು. ಮಾಜಿ ಪ್ರಧಾನ್ ಎನ್.ಪಿ.ಮಲ್ಲೇಶಪ್ಪ ಮಾತನಾಡಿ, ಸರ್ಕಾರವು ಊಟಕ್ಕೆ ತೊಂದರೆಯಿಲ್ಲದಂತೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಹಿಂದೆಂದಿಗಿಂತಲೂ ಭೀಕರ ಜಲಕ್ಷಾಮ ಉಂಟಾಗಿದ್ದು, ಈ ಸಮಸ್ಯೆ ನಿವಾರಿಸಲು ಕೆರೆಕಟ್ಟೆಗಳಿಗೆ ನೀರು ಹರಿಸುವುದು ಅಗತ್ಯವಾಗಿದೆ ಎಂದರು.
ಎಪಿಎಂಸಿ ನಿರ್ದೇಶಕ ಕೆ.ಸಿ.ನಾಗರಾಜು ಮಾತನಾಡಿ, ಹೋಬಳಿಯ ಜನರ ಪರಿಸ್ಥಿತಿ ಶೋಚನೀಯವಾಗಿದ್ದು, ಹೋಬಳಿಯ ಶೇ.65ರಷ್ಟು ಭಾಗಕ್ಕೆ ಅನುಕೂಲವಾಗುವ ದೇವಿಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕರು ಹೆಚ್ಚಿನ ಗಮನ ಹರಿಸಬೇಕೆಂದರು. ಜಾವಗಲ್ ಹಾರನಹಳ್ಳಿ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಿಸುವಂತೆ ಮನವಿ ಮಾಡಿದರು.
 ಎಪಿಎಂಸಿ ಮಾಜಿ ಅಧ್ಯಕ್ಷ ಆನಂದ್ ಮಾತನಾಡಿ, ಜಾವಗಲ್ ಹೋಬಳಿ ಸೇರಿದಂತೆ ಅರಸೀಕೆರೆ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಶ್ರಮಿಸಿದ ಶಾಸಕರನ್ನು ಅಭಿನಂದಿಸಿ, ಅಭಿವೃದ್ದಿ ಕಾರ್ಯಗಳಿಗೆ ಬದಲಾಗಿ ನೀರು ಹರಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ನೇತ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ಬಾಯಿ, ಮಾಜಿ ಅಧ್ಯಕ್ಷರಾದ  ಉಮೇಶ್, ಶಾಂತಕುಮಾರ್, ಸದಸ್ಯರಾದ ಪರಮೇಶ್, ಲೋಕೇಶ್, ಎಂಜಿನಿಯರ್ ರವೀಶ್, ವಿಜಯಕುಮಾರ್, ಪಿಡಿಒ ಬಾಲಕೃಷ್ಣ ನಾಯಕ್, ಯೋಗೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.