ಹಾಸನ

ಸಾರ್ವಜನಿಕ ಆಸ್ತಿಗೆ ಧಕ್ಕೆ ತಂದಲ್ಲಿ ಜೈಲು ಕಟ್ಟಿಟ್ಟ ಬುತ್ತಿ

Published On :

ಬೇಲೂರು: ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಸರ್ಕಾರ ಹಾಗೂ ಜನರ ಕೆಲಸವಾಗಿದ್ದು, ಅದಕ್ಕೆ ಧಕ್ಕೆ ತಂದಲ್ಲಿ ಎಂತಹ ಗಣ್ಯ ವ್ಯಕ್ತಿಯೇ ಆದರೂ ಅವರಿಗೆ ಕಾನೂನಿನಡಿ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹಿರಿಯ ನ್ಯಾಯಾಧೀಶ ರಾಜೂಗೌಡ ಹೇಳಿದರು. ತಾಲೂಕಿನ ಹಳೇಬೀಡು ಎಸ್‌ಜಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳಿಗೂ ಅವರದೇ ಆದ ಹಕ್ಕು ಬಾಧ್ಯತೆಗಳಿವೆ. ಸಂವಿಧಾನದಲ್ಲಿರುವ ಕಾನೂನುಗಳನ್ನು ಯಥಾವತ್ತಾಗಿ ಪಾಲಿಸಿದಲ್ಲಿ ನಮ್ಮ ದೇಶ ಸುಭಿಕ್ಷವಾಗಿರುತ್ತದೆ. ಆದರೆ ಕಾನೂನು ಮಾತನಾಡುತ್ತಾರೆ, ಪಾಲಿಸುವುದಿಲ್ಲ ಎಂದರು. ವಕೀಲ ಪುಟ್ಟಸ್ವಾಮಿ ವಿಶ್ವ ಮಾನವ ಹಕ್ಕ ಮತ್ತು ಕರ್ತವ್ಯದ ಬಗ್ಗೆ ಉಪನ್ಯಾಸ ನೀಡಿ, ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿದ್ದ ಎಸ್.ಆರ್.ನಾಯಕ್ ನಿವೃತ್ತಿ ಹೊಂದಿ ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಸರ್ಕಾರ ಇನ್ನೊಬ್ಬರನ್ನು ನೇಮಿಸಲು ಮುಂದಾಗಿಲ್ಲ. ಮಾನವ ಹಕ್ಕು ಆಯೋಗವನ್ನು ಒಂದು ದೊಡ್ಡ ಹೊರೆಯಾಗಿ ಸರ್ಕಾರ ಪರಿಗಣಿಸಿದೆ ಎಂದು ವಿಷಾದಿಸಿದರು. ದೇಶದ ಸಂವಿಧಾನವನ್ನು ರೂಪಿಸುವಾಗ ಮಾನವ ಹಕ್ಕುಗಳ ಆಧಾರದ ಮೇಲೆ ಮೂಲಭೂತ ಹಕ್ಕುಗಳನ್ನು ನಿರ್ಮಾಣ ಮಾಡಲಾಗಿದೆ. ದೇಶದಲ್ಲಿ ಹುಟ್ಟಿದ ಪ್ರತಿ ಮಗುವಿಗೂ ಉಚಿತ ಕಡ್ಡಾಯ ಶಿಕ್ಷಣ ಹಕ್ಕು, ಸಹಜತೆಯಿಂದ ಜೀವಿಸುವ ಹಕ್ಕು ಇದೆ ಎಂದರು. ನ್ಯಾಯಾಧೀಶೆ ಶರ್ಮಿಳಾ, ಸರ್ಕಾರಿ ಅಭಿಯೋಜಕ ವಕೀಲ ಮೋತಿಲಾಲ್ ಚೌಧರಿ, ಎಸ್‌ಜಿಆರ್ ಕಾಲೇಜಿನ ನಿರ್ದೇಶಕ ಸುರೇಶ್, ಪ್ರಾಂಶುಪಾಲ ಓಂಕಾರ ಮೂರ್ತಿ, ಹರೀಶ್, ಚೈತ್ರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.