ಹಾಸನ

ಮರಳುಗಾರಿಕೆ ಸ್ಥಗಿತಗೊಳಿಸಲು ಆಗ್ರಹಿಸಿ ವಡೋರು ಗ್ರಾಮಸ್ಥರ ಭಾರಿ ಪ್ರತಿಭಟನೆ

Published On :

ಸಕಲೇಶಪುರ: ಮರಳುಗಾರಿಕೆ ನಿಷೇಧಿಸ ಬೇಕೆಂದು ಆಗ್ರಹಿಸಿ ಶುಕ್ರವಾರ ವಡೋರು ಗ್ರಾಮಸ್ಥರು ರಸ್ತೆ ತಡೆದು  ಪ್ರತಿಭಟಿಸಿದರು. ಗ್ರಾಮ ಸಮೀಪ ಹರಿಯುವ ಹೇಮಾವತಿ ನದಿಯಲ್ಲಿ ಸರ್ಕಾರ ಮರಳುಗಾರಿಕೆ ನಡೆಸಲು ಅನುಮತಿ ನೀಡಿದೆ.
  ಆದರೆ ಮರಳುಗಾರಿಕೆ ಟೆಂಡರ್ ಪಡೆದಿರುವ ವ್ಯಕ್ತಿ ಟೆಂಡರ್ ಪ್ರಕ್ರಿಯೆ ವೇಳೆ ವಿಧಿಸಲಾಗಿರುವ ಎಲ್ಲಾ ನಿಬಂಧನೆ ಮುರಿದಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ನದಿಯಿಂದ ತೆಗೆದ ಮರಳನ್ನು ಹಸಿಯಾಗಿ ಸಾಗಿಸಲಾಗುತ್ತಿರುವುದರಿಂದ ಗ್ರಾಮದ ರಸ್ತೆಗಳಲ್ಲಿ ನೀರು ಸಂಗ್ರಹವಾಗಿ ಕೆಸರು ತುಂಬಿದೆ.
 ರಸ್ತೆ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರಿರುವ ಪರಿಣಾಮ ಗ್ರಾಮದ ರಸ್ತೆ ಗುಂಡಿಯಿಂದ ಆವೃತ್ತಗೊಂಡಿವೆ. ವೇಗವಾಗಿ ಸಾಗುವ ಲಾರಿಗಳು ಜಾನುವಾರುಗಳ ಸಾವಿಗೂ ಕಾರಣವಾಗಿದೆ. ರಸ್ತೆ ಸಮೀಪದ ಅಂಗನವಾಡಿಗೆ ಧೂಳು ಅವರಿಸುವುದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆಂದರು.
 ಲೋಕಪಯೋಗಿ ಇಲಾಖೆ ಸಹಾಯಕ ಅಭಿಯಂತರ ಪಟ್ಟಹನುಮಂತರಾಜು ಸ್ಥಳಕ್ಕಾಮಿಸಿ ಪ್ರತಿಭಟನಕಾರರೊಂದಿಗೆ ಮಾತನಾಡಿ ಮರಳುಗಾರಿಕೆ ನಡೆಸಲಾಗುತ್ತಿರುವ ರಸ್ತೆಗಳನ್ನು  ವಿಶೇಷ ಅನುದಾನ ಬಳಸಿ ಅಭಿವಣದ್ದಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುಮೋದನೆ ಪಡೆಯುವ ಹಂತದಲ್ಲಿದೆ ಹಾಗೂ ಮರಳು ಲಾರಿ ಸಾಗುವ ಮುನ್ನ ಪ್ರತಿದಿನ ನೀರು ಸಿಂಪರಣೆ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ  ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ತಂದೆಯಿಂದಲೇ ಮಗನ ಹತ್ಯೆ
ಹಾಸನ: ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ದುದ್ದ ಹೋಬಳಿಯ ಉದ್ಧೂರಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದ್ದು, ಪೊಲೀಸರು ಈ ಸಂಬಂಧ ಇಬ್ಬರನ್ನು  ಬಂಧಿಸಿದ್ದಾರೆ.
   ಊದ್ಧೂರಹಳ್ಳಿ ಗ್ರಾಮದ ಮಂಜುನಾಥ (36) ಕೊಲೆಯಾದ ದುರ್ದೈವಿ. ಮಂಜುನಾಥಗೆ ತಂದೆ ತೋಪೇಗೌಡ ಮತ್ತು ತಮ್ಮ ಜಯರಾಮ ಅವರ ನಡುವೆ ಜಮೀನಿನ ವಿಷಯದಲ್ಲಿ ಮನಸ್ತಾಪ ಇದ್ದು, ಆಗಾಗ ಜಗಳ ಆಡುತ್ತಿದ್ದರು.
  ಗುರುವಾರ ಮಂಜುನಾಥ ಮನೆಯಲ್ಲಿ ಮಲಗಿದ್ದಾಗ ತಂದೆ ತೋಪೇಗೌಡ ಮತ್ತು ಜಯರಾಮ ಅವರು ಮಂಜುನಾಥನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ಶವವನ್ನು ಜಮೀನಿನ ಪಂಪ್‌ಹೌಸ್ ಬಳಿ ಇಟ್ಟಿದ್ದಾರೆ.
  ಮೃತ ಮಂಜುನಾಥನ ಅಕ್ಕ ರಾಧ  ದುದ್ದ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಈ ಸಂಬಂಧ ತಂದೆ  ತೋಪೇಗೌಡ, ತಮ್ಮ ಜಯರಾಮ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಮಿತ್‌ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.