ಚರಂಡಿ ಅವ್ಯವಸ್ಥೆ ಕುರಿತು ಶಾಸಕರಿಗೆ ಸಾಕ್ಷಾತ್ ದರ್ಶನ
ಜಾವಗಲ್: ಇಲ್ಲಿನ ಕರಿಯಮ್ಮನ ಬೀದಿಯಲ್ಲಿನ ಚರಂಡಿ ಅವ್ಯವಸ್ಥೆಯನ್ನು ಶಾಸಕ ರುದ್ರೇಶಗೌಡರಿಗೆ ಗ್ರಾಮಸ್ಥರು ವಿವರಿಸಿದರು.
ಗ್ರಾಮ ಪಂಚಾಯ್ತಿ 6ನೇ ವಾರ್ಡ್ಗೆ ಸೇರಿದ್ದು, ಈ ಭಾಗದಲ್ಲಿನ ಚರಂಡಿಗಳೆಲ್ಲಾ ತುಂಬಿ ತುಳುಕುತ್ತಿವೆ. ಹಂದಿಗಳ ಹಾವಳಿಯಿಂದಾಗಿ ಪರಿಸರ ಹಾಳಾಗುತ್ತಿದೆ. ಕುಡಿಯುವ ನೀರಿನ ಟ್ಯಾಂಕ್ನ ಮೇಲ್ಚಾವಣಿ ಕುಸಿದಿದ್ದು ಕ್ರಿಮಿಕೀಟ ಮಿಶ್ರಿತ ನೀರು ಸರಬರಾಜಾಗುತ್ತಿದೆ. ಬೀದಿದೀಪಗಳ ವ್ಯವಸ್ಥೆ ಹಾಳಾಗಿದೆ ಎಂದು ಗ್ರಾಮಸ್ಥರ ತಮ್ಮ ಅಳಲನ್ನು ತೋಡಿಕೊಂಡು, ಕೂಡಲೇ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸರಬರಾಜುಗೆ ಗಮನಹರಿಸುವಂತೆ ಕೋರಿದರು.
ಗ್ರಾಮ ದೇವತೆ ಕರಿಯಮ್ಮದೇಗುಲ ಜೀರ್ಣೋದ್ಧಾರ ಕಾಮಗಾರಿಗೆ ಶೀಘ್ರವೇ ಉಳಿದ ಅನುದಾನ ಬಿಡುಗಡೆ ಮಾಡಿಸುವಂತೆ ಹಾಗು ರಾಮಮಂದಿರ ಕಾಮಗಾರಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದು ಕೂಡಲೇ ಈ ಕಾಮಗಾರಿಯನ್ನೂ ಪ್ರಾರಂಭಿಸುವಂತೆ ಶಾಸಕರನ್ನು ಒತ್ತಾಯಿಸಿದರು.
ಶಾಸಕ ರುದ್ರೇಶಗೌಡ, ಅರಸೀಕೆರೆ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್, ಜಿಪಂ ಎಂಜಿನಿಯರ್ ರಾಮಚಂದ್ರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರವೇ ಬಡಾವಣೆಯ ಸ್ವಚ್ಛತೆ, ಟ್ಯಾಂಕ್ ದುರಸ್ತಿ ಹಾಗೂ ಯಗಚಿ ನೀರು ಸರಬರಾಜು ವ್ಯವಸ್ಥೆ ಮಾಡಿಸುವಂತೆ ಆದೇಶಿಸಿದರು.
ಉಳಿದ ಅನುದಾನ ಬಿಡುಗಡೆ ಮಾಡುವಂತೆ ಹಾಗೂ ರಾಮಮಂದಿರದ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಎಂಜಿನಿಯರ್ ಅವರಿಗೆ ಸೂಚಿಸಿದರು.
ಜಿಪಂ ಮಾಜಿ ಸದಸ್ಯ ಭಾಗ್ಯಾರಾಜೇಗೌಡ, ಯಶೋಧರಕುಮಾರ್, ಗ್ರಾಪಂ ಸದಸ್ಯೆ ಮಾಲಾ, ಮಾಜಿ ಅಧ್ಯಕ್ಷ ಧನಂಜಯ ಕೃಷ್ಣೇಗೌಡ, ಮಾಜಿ ಸದಸ್ಯ ನರಸಿಂಹಸ್ವಾಮಿ, ಗ್ರಾಮದ ದೊಡ್ಡಯ್ಯ, ಚಿದಾನಂದ, ಮಂಜೇಗೌಡ, ಚಂದ್ರಪ್ಪ, ಅಣ್ಣಪ್ಪ, ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

