ಬದುಕನ್ನು ಸಮಾಜಕ್ಕೆ ಅರ್ಪಿಸುವುದೇ ಸಾರ್ಥಕತೆ: ಕರುಣಾಕರಣನಂದಜೀ
ಹಾಸನ: ಬದುಕನ್ನು ಸಮಾಜಕ್ಕೆ, ದೇಶಕ್ಕೆ ಅರ್ಪಿಸಿಕೊಳ್ಳುವುದೇ ಜೀವನದ ಯಶಸ್ಸು ಮತ್ತು ಸಾರ್ಥಕತೆ ಎಂದು ರಾಮಕೃಷ್ಣ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಕರುಣಾಕರಾನಂದಜೀ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ವ್ಯಕ್ತಿತ್ವ ವಿಕಸನ ವೇದಿಕೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದರು.
ಸಾವಿರಾರು ಜನರಿಗೆ ಸ್ಫೂರ್ತಿಯಾದ ಗಾಂಧೀಜಿ, ವಿವೇಕಾನಂದರ ಶಕ್ತಿ ನಮ್ಮಲ್ಲೂ ಇದೆ. ಆದರೆ ಹೊರಗಿನ ನಮ್ಮ ನಕಲಿ ವ್ಯಕ್ತಿತ್ವ ಒಡೆದು ಹಾಕಿ ಒಳಗಿರುವ ಆ ಶಕ್ತಿಯನ್ನು ಹೊರಗೆ ತೆಗೆಯಬೇಕಿದೆ. ನಮ್ಮ ವ್ಯಕ್ತಿತ್ವ ವಿಶ್ವವ್ಯಾಪಿಯಾಗಬೇಕು. ಅದಕ್ಕಾಗಿ ಉತ್ಸಾಹ, ಮತ್ತೊಬ್ಬರಿಗಾಗಿ ಮರುಗುವುದು, ತ್ಯಾಗ ಮತ್ತು ಸೇವೆ, ಪರಿಶ್ರಮದ ಮೂಲಕ ಸಾಧನೆ ಮಾಡುವುದು ಮುಂತಾದ ಗುಣ ಬೆಳೆಸಿಕೊಳ್ಳಬೇಕಿದೆ. ನಡಿಗೆಯಲ್ಲಿ ಮನುಷ್ಯನಾಗಿ ನಡತೆಯಲ್ಲಿ ಮೃಗವಾದರೆ ಜೀವನ ವ್ಯರ್ಥವಾದಂತೆ ನಮ್ಮನ್ನು ನಾವು ಜೀವಂತ ದೇವಸ್ಥಾನವಾಗಿಸಬೇಕು ಎಂದರು.
ನಾವು ಮಾಡುವ ಸೇವೆ ಬಾಯಿ ಮಾತಿನ ಸೇವೆ ಆಗಬಾರದು. ಅದು ಹೃದಯದ ಸೇವೆ ಆಗಬೇಕು.ನಾವು ನಮಗೋಸ್ಕರ ಬದುಕುವುದರಲ್ಲಿ ಸಿಗುವ ಆನಂದಕ್ಕಿಂತ, ಬೇರೆಯವರಿಗೋಸ್ಕರ ಬದುಕುವುದರಲ್ಲಿ ಸಿಗುವ ಆನಂದ, ತೃಪ್ತಿ ದೊಡ್ಡದು. ಸಮಾಜದಿಂದ ನಾವು ಪಡೆದುದಕ್ಕಿಂತ ಹೆಚ್ಚನ್ನು ನಾವು ತಿರುಗಿ ಕೊಡಬೇಕು. ಸೋಲಿನಲ್ಲಿ ಅಧೀರರಾಗದೆ ಯಶಸ್ಸು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ವಿ.ಕೃಷ್ಣಪ್ಪ ಮಾತನಾಡಿ, ಸ್ವಾಮಿ ವಿವೇಕಾನಂದ ಹಾಗೂ ಮಹಾತ್ಮ ಗಾಂಧೀಜಿಯವರ ಆದರ್ಶ ಮತ್ತು ವ್ಯಕ್ತಿತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ರೂಢಿಸಿಕೊಂಡಲ್ಲಿ ಸಮಾಜ ತನಗೆ ತಾನೆ ಶುದ್ಧಿಯಾಗುತ್ತದೆ. ಮುಂದಿನ ಸಮಾಜದ ರೂವಾರಿಗಳಾದ ಯವಜನತೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

