ಹಾಸನ

ಯೋಗದಿಂದ ಆರೋಗ್ಯಕರ ಜೀವನ: ತಾಂಡವೇಶ್ವರ್

Published On :

ಹೊಳೆನರಸೀಪುರ: ಶರೀರ ಸದೃಢವಾಗಿದ್ದಲ್ಲಿ, ಮಾನಸಿಕ ಒತ್ತಡಗಳನ್ನು ಶಮನಗೊಳಿಸಬಹುದಾಗಿದ್ದು, ಯೋಗದಿಂದ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಹಿರಿಯ ವಕೀಲ  ಎ.ತಾಂಡವೇಶ್ವರ್ ಹೇಳಿದರು.
ಅವರು ಇಲ್ಲಿನ ಪ್ರೇಮಾ ಮಹಿಳಾ ಸಮಾಜ, ಪತಂಜಲಿ ಯೋಗ ಕೂಟ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆದ ಜೀವನ ಶೈಲಿ ಶಿಕ್ಷಣ ಹಾಗೂ ಒತ್ತಡ ನಿರ್ವಹಣೆ ಕುರಿತಾದ ಮೂರು ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಓದುವಂತೆ ಹೇರುವ ಒತ್ತಡವೂ ಸಹ ವಿದ್ಯಾರ್ಥಿಗಳನ್ನು ಉದ್ವೇಗಕ್ಕೆ ಸಿಲುಕಿಸಿ ಅವರ ಭವಿಷ್ಯದ ಜೀವನವನ್ನೇ ಹಾಳುಗೆಡವುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಯೋಗದ ಮಹತ್ವವನ್ನು ಅರಿತ ವಿದೇಶೀಯರೂ ಭಾರತೀಯ ಯೋಗಶಿಕ್ಷದೆಡೆಗೆ ಪ್ರಭಾವಿತರಾಗುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹಾಸನದ ಹಿರಿಯ ಯೋಗ ಶಿಕ್ಷಕರಾದ ಎಚ್.ಬಿ.ರಮೇಶ್, ಹಿರಿಯ ಯೋಗಪಟು ಸುದರ್ಶನ್, ಪ್ರೇಮಾ ಮಹಿಳಾ ಸಮಾಜದ ಪ್ರೇಮಾ ಮಂಜುನಾಥ್, ಪತಂಜಲಿ ಯೋಗ ಕೂಟದ ಅಧ್ಯಕ್ಷರಾದ ಕೆ.ಮಂಜಶೆಟ್ಟಿ, ಪ್ರಾಂಶುಪಾಲೆ ಆರ್.ಸರೋಜಿನಿದೇವಿ, ಹಿರಿಯ ಯೋಗಶಿಕ್ಷರಾದ ಗಣೇಶ್, ದಿನೇಶ್, ನಾರಾಯಣ್, ಬಾ.ರಾ.ಸುಬ್ಬರಾಯ, ವಿಜಯಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.