ಹಾಸನ

ವಿಷ ಸೇವಿಸಿ ತಂದೆ- ಮಗಳು ಆತ್ಮಹತ್ಯೆ

Published On :

ಸಕಲೇಶಪುರ: ಮದುವೆಯ ವಿಚಾರದಲ್ಲಿ ಮನಸ್ತಾಪ ಮೂಡಿ ತಂದೆ-ಮಗಳು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬೆಳಗೋಡು ಸಮೀಪದ ಕೂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಟರಾಜ್(40) ಹಾಗೂ ಸುನೀತಾ (17) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕಳೆದ ಒಂದು ವಾರದಿಂದ ಸಂಬಂಧಿಕರ ಮದುವೆಗೆ ಹೋಗಿದ್ದ ಮಗಳು ಭಾನುವಾರ ಮರಳಿ ಮನೆಗೆ ಬಂದ ಸಂದರ್ಭದಲ್ಲಿ ಮಗಳಿಗೆ ಮದುವೆ ಮಾಡುವ ವಿಚಾರವನ್ನು ತಂದೆ ನಟರಾಜ್ ಪ್ರಸ್ತಾಪ ಮಾಡಿದ್ದಾರೆ. ಆದರೆ ಸುನೀತಾ ಈಗಲೇ ಮದುವೆಯಾಗುವುದಿಲ್ಲ ಎಂದು ಹೇಳಿದ್ದು, ಇದರಿಂದ ಸಿಟ್ಟಿಗೆದ್ದ ನಟರಾಜ್ ತನ್ನ ತಾಯಿ ಮರಣವನ್ನಪ್ಪುವ ಮುನ್ನ ನಿನ್ನ ಮದುವೆ ನೋಡಬೇಕಿದೆ. ಆದ್ದರಿಂದ ಮದುವೆಗೆ ಒಪ್ಪುವಂತೆ ಒತ್ತಾಯಿಸಿದ್ದಾರೆ.
ಇದರಿಂದ ಬೇಸತ್ತಿದ್ದ ಸುನಿತಾ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದಾಳೆ. ವಿಷಯ ತಿಳಿದು ಮಗಳನ್ನು ಆಸ್ಪತ್ರೆಗೆ ಕರೆದೊಯ್ಯವ ಪ್ರಯತ್ನದಲ್ಲಿದ್ದ ಸಂದರ್ಭದಲ್ಲೆ ಮನೆಯಲ್ಲಿ ಅಸುನೀಗಿದ್ದಳು. ಈ ವಿಚಾರ ಗ್ರಾಮಸ್ಥರಿಗೆ ತಿಳಿದು ಮನೆಯ ಮುಂಭಾಗ ಬೆಂಕಿ ಹಾಕಿ ಕುಳಿತಿದ್ದ ವೇಳೆ ಮನೆಯ ಹಿಂಬದಿಗೆ ಹೋಗಿದ್ದ ನಟರಾಜ್ ಸಹ ತಾನೂ ವಿಷ ಕುಡಿದಿದ್ದು, ಮಧ್ಯರಾತ್ರಿ 2ರಲ್ಲಿ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ಷುಲಕ ಕಾರಣಕ್ಕೆ ತಂದೆ, ಮಗಳು ಮೃತಪಟ್ಟ ವಿಚಾರ ತಿಳಿದ ನೆರೆಹೊರೆಯ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಹೀಗಾಗಬಾರದಿತ್ತು ಎಂಬ ಬೇಸರದ ನುಡಿಯನ್ನಾಡುತ್ತಿದ್ದರು. ಬೆಳಗೋಡು ಹಾಗೂ ಕೂಡನಹಳ್ಳಿ ಗ್ರಾಮದಲ್ಲಿ ನೀರವತೆ ಕವಿದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.