ಹಾಸನ

ಮುಕ್ತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜು

Published On :

ಕ.ಪ್ರ.ವಾರ್ತೆ  ಹಾಸನ  ಮಾ 5
ಜಿಲ್ಲೆಯಲ್ಲಿ 180 ವಾರ್ಡ್‌ಗಳ ಪೈಕಿ ಮೂರು ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 177 ವಾರ್ಡ್‌ಗಳಿಗೆ ಮಾ.7ರಂದು ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   ನಗರಸಭೆಯಲ್ಲಿ 126 ಮತಗಟ್ಟೆಗಳ ಪೈಕಿ 17 ಸೂಕ್ಷ್ಮ, 15 ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು, ಆರಸೀಕೆರೆಯಲ್ಲಿ 45 ಮತಗಟ್ಟೆಗಳ ಪೈಕಿ 5 ಸೂಕ್ಷ್ಮ ಮತ್ತು 6 ಅತೀಸೂಕ್ಷ ಮತಗಟ್ಟೆಗಳಾಗಿವೆ. ಚನ್ನರಾಯಪಟ್ಟಣದಲ್ಲಿ 39 ಮತಗಟ್ಟೆಗಳ ಪೈಕಿ 6 ಸೂಕ್ಷ ಮತ್ತು 3 ಅತೀ ಸೂಕ್ಷ್ಮ ಮತಗಟ್ಟೆಗಳಿವೆ ಎಂದು ವಿವರಿಸಿದರು.
ಹೊಳೆನರಸೀಪುರದಲ್ಲಿ 25 ಮತಗಟ್ಟೆಗಳ ಪೈಕಿ 4 ಅತೀಸೂಕ್ಷ್ಮ ಮತಗಟ್ಟೆಗಳಾಗಿವೆ. ಸಕಲೇಶಪುರದಲ್ಲಿ 23 ಮತಗಟ್ಟೆಗಳ ಪೈಕಿ 4 ಅತೀಸೂಕ್ಷ್ಮ ಮತಗಟ್ಟೆಗಳಾಗಿವೆ. ಬೇಲೂರಿನಲ್ಲಿ 23 ಮತಗಟ್ಟೆಗಳ ಪೈಕಿ 4 ಅತೀ ಸೂಕ್ಷ್ಮ ಮತಗಟ್ಟೆಗಳಾಗಿವೆ. ಅರಕಲಗೂಡಿನಲ್ಲಿ 15 ಮತಗಟ್ಟೆಗಳ ಪೈಕಿ 2 ಸೂಕ್ಷ್ಮ ಮತ್ತು 2 ಅತೀಸೂಕ್ಷ್ಮ ಮತಗಟ್ಟೆಗಳಾಗಿವೆ ಮತ್ತು ಆಲೂರಿನಲ್ಲಿ 10 ಮತಗಟ್ಟೆಗಳ ಪೈಕಿ 4 ಅತೀಸೂಕ್ಷ್ಮ ಮತಗಟ್ಟೆಗಳು ಸ್ಥಾಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಮಾತನಾಡಿ, ಚುನಾವಣೆಗೆ ಭದ್ರತೆ ಒದಗಿಸಲು 2 ಎಎಸ್ಟಿ, 2 ಡಿವೈಎಸ್ಪಿ, 12 ಇನ್ಸ್‌ಪೆಕ್ಟರ್‌ಗಳು, 36 ಸಬ್ ಇನ್ಸ್‌ಪೆಕ್ಟರ್‌ಗಳು, 99 ಎಎಸ್‌ಐಗಳು, 445 ಪೇದೆಗಳು, 28 ಮಹಿಳಾ ಪೊಲೀಸ್, 200 ಹೋಂ ಗಾರ್ಡ್‌ಗಳು, 3 ಕೆಎಸ್‌ಆರ್‌ಪಿ ತುಕಡಿ, 4 ಡಿಆರ್ ಹಾಗೂ 54 ಮೊಬೈಲ್ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವಂತೆ ಚುನಾವಣೆಯು ಬೆಳಗ್ಗೆ 7ರಿಂದ 5ರತನಕ ಮತದಾನ ನಡೆಯಲಿದೆ. ಹೊಳೆನರಸೀಪುರ ಪುರಸಭೆಯ 4 ಮತ್ತು 9ನೇ ವಾರ್ಡ್‌ಗಳು ಹಾಗೂ ಆಲೂರು ಪಟ್ಟಣ ಪಂಚಾಯ್ತಿಯ 2ನೇ ವಾರ್ಡ್‌ನಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 177 ವಾರ್ಡ್‌ಗಳಲ್ಲಿ 747 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 306 ಮತಗಟ್ಟೆಗಳಲ್ಲಿಗೆ ಮತದಾನಾಧಿಕಾರಿಗಳನ್ನು ನೇಮಿಸಿದ್ದು, ತರಬೇತಿ ನೀಡಲಾಗಿದೆ ಎಂದರು.
ಈ ಮತಗಟ್ಟೆಗಳಿಗೆ ಅವಶ್ಯಕ ಇರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಆಯಾ ತಾಲೂಕುಗಳಲ್ಲಿ ಚುನಾವಣಾಧಿಕಾರಿ ಮತ್ತು ತಹಸೀಲ್ದಾರ್‌ರವರು ಸಿದ್ಧಪಡಿಸಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿರುತ್ತದೆ. ಅತ್ಯಂತ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವುದು ಹಾಸನ ನಗರಸಭೆ 126 ಮತಗಟ್ಟೆಗಳು ಹಾಗೂ ಅತ್ಯಂತ ಕಡಿಮೆ 10 ಮತಗಟ್ಟಿಗಳನ್ನು ಹೊಂದಿರುವುದು.
ಆಲೂರು ಪಟ್ಟಣ ಪಂಚಾಯ್ತಿ. ಮತದಾನದ ಸಿಬ್ಬಂದಿಗಳನ್ನು ಸಾಗಿಸಲು ತಾಲೂಕುವಾರು ವಾಹನಗಳನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2 ಕೆ ಎಸ್‌ಆರ್‌ಟಿಸಿ ಬಸ್‌ಗಳು, 61 ಮಿನಿ ಬಸ್, ಮ್ಯಾಕ್ಸಿ ಕ್ಯಾಬ್, 65 ಜೀಪುಗಳು ಸೇರಿದಂತೆ 128 ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಮತದಾರರ ಸಂಖ್ಯೆ ಎಲ್ಲಿ ಎಷ್ಟು: ಹಾಸನ ನಗರಸಭೆಯಲ್ಲಿ 35 ವಾರ್ಡ್‌ಗಳಿದ್ದು, 126 ಮತಗಟ್ಟೆ ಕೇಂದ್ರಗಳಿದ್ದು, 43,262 ಪುರುಷ ಮತದಾರರು ಮತ್ತು 43,337 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆಯಾಗಿ 86,599 ಮತದಾರರಿದ್ದಾರೆ. ಅರಸೀಕೆರೆ ಪುರಸಭೆಯಲ್ಲಿ 27 ವಾರ್ಡ್‌ಗಳಿದ್ದು, 45 ಮತಕೇಂದ್ರಗಳಿದ್ದು, 16,033 ಪುರುಷ ಮತದಾರರು ಮತ್ತು 16,301 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆಯಾಗಿ 32,334 ಮತದಾರರಿದ್ದಾರೆ.
ಚನ್ನರಾಯಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, 39 ಮತಕೇಂದ್ರಗಳಿದ್ದು, 12,291 ಪುರುಷ ಮತದಾರರು ಮತ್ತು 11,725 ಮಹಿಳಾ ಮತದಾರರು ಸೇರಿದಂತೆ 24,016 ಮತದಾರರಿದ್ದಾರೆ.
ಹೊಳೆನರಸೀಪುರ ಪುರಸಭೆಯಲ್ಲಿ 21 ವಾರ್ಡ್‌ಗಳಿದ್ದು, 25 ಮತಕೇಂದ್ರಗಳಿದ್ದು, 10,364 ಪುರುಷ ಮತ್ತು 10,448 ಮಹಿಳಾ ಮತದಾರರು ಸೇರಿದಂತೆ 20,812 ಮತದಾರಿದ್ದಾರೆ.
ಸಕಲೇಶಪುರ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, 23 ಮತಕೇಂದ್ರಗಳಿದ್ದು, 7,238 ಪುರುಷ ಮತ್ತು 7,309 ಮಹಿಳಾ ಮತದಾರರು ಸೇರಿದಂತೆ 14,547 ಮತದಾರರಿದ್ದಾರೆ. ಬೇಲೂರು ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, 23 ಮತಕೇಂದ್ರಗಳಿದ್ದು, 7,711 ಪುರುಷ ಮತ್ತು 7,516 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆಯಾಗಿ 15,227 ಮತದಾರರಿದ್ದಾರೆ.
ಅರಕಲಗೂಡು ಪಟ್ಟಣ ಪಂಚಾಯ್ತಿಯಲ್ಲಿ 15 ವಾರ್ಡ್‌ಗಳಿದ್ದು, 15 ಮತಕೇಂದ್ರಗಳಿದ್ದು,  5,524 ಪುರುಷ ಮತ್ತು 5,180 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆಯಾಗಿ 10,704 ಮತದಾರರಿದ್ದಾರೆ.
ಆಲೂರು ಪಟ್ಟಣ ಪಂಚಾಯ್ತಿಯಲ್ಲಿ 10 ವಾರ್ಡ್‌ಗಳಿದ್ದು, 10 ಮತಕೇಂದ್ರಗಳಿದ್ದು, 1,993 ಪುರುಷ ಮತ್ತು 1992 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆಯಾಗಿ 3,985 ಮತದಾರರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,04,416 ಪುರುಷ ಮತ್ತು 1,03,808 ಮಹಿಳಾ ಮತದಾರರು ಸೇರಿದಂತೆ 2,08,224 ಮತದಾರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 306 ಮತಗಟ್ಟೆಗಳಿದ್ದು, 337 ಮತಗಟ್ಟೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಈ ಪೈಕಿ ಒಟ್ಟು ಮತಗಟ್ಟೆ ಅಧ್ಯಕ್ಷಾಧಿಕಾರಿಗಳು 337, ಸಹಾಯಕ ಮತಗಟ್ಟೆ ಅಧಿಕಾರಿಗಳು (ಎಪಿಆರ್‌ಓ) 337, 1 ಮತ್ತು 2ನೇ ಮತಗಟ್ಟೆ ಅಧಿಕಾರಿಗಳು 674 ಸೇರಿದಂತೆ ಒಟ್ಟಾರೆಯಾಗಿ 1,348 ಮತಗಟ್ಟೆ ಅಧಿಕಾರಿಗಳನ್ನು ಜಿಲ್ಲೆಯ ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ತಹಸೀಲ್ದಾರರ್ರಿಂದ ದೂರು ದಾಖಲಾಗಿಲ್ಲ.
ಅಬಕಾರಿ ಇಲಾಖೆ ದಾಖಲಿಸಿರುವ ಪ್ರಕರಣಗಳು: ಅಬಕಾರಿ ಕಾಯಿದೆಯನ್ವಯ ಜಿಲ್ಲೆಯಲ್ಲಿ ಇದುವರೆಗೆ 243 ಅಬಕಾರಿ ದಾಳಿ, ರಸ್ತೆಗಸ್ತು ನಡೆಸಿದ್ದು, ಈ ಪೈಕಿ 15ಎ ಪ್ರಕಾರ 20 ಘೋರ, 8 ಸಾಮಾನ್ಯ, ಜೂಮ್ಲಾ 28 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಬಕಾರಿ ಉಪ ಆಯುಕ್ತರ ಕಚೇರಿ ದಾಳಿ, ರಸ್ತೆ ಗಸ್ತು 21, ಈ ಪೈಕಿ ದಾಖಲಾದ ಮೊಕದ್ದಮೆ ಸಾಮಾನ್ಯ 1, ಹಾಸನ ಉಪ ವಿಭಾಗದಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಹಾಸನ ವಲಯ ನಂ.1ರಲ್ಲಿ ದಾಖಲಾದ ಮೊಕದ್ದಮೆ 1, ವಲಯ ನಂ.2ರಲ್ಲಿ ಘೋರ 1 ದಾಖಲಾದ ಮೊಕದ್ದಮೆ, ಬೇಲೂರು ವಲಯದಲ್ಲಿ 3 ಘೋರ ಮತ್ತು ಸಾಮಾನ್ಯ 4 ಒಟ್ಟಾರೆಯಾಗಿ 7 ಮೊಕದ್ದಮೆ, ಚನ್ನರಾಯಪಟ್ಟಣ ವಲಯದಲ್ಲಿ 3 ಘೋರ ಮೊಕದ್ದಮೆ.
ಅರಸೀಕೆರೆ ವಲಯದಲ್ಲಿ 1 ಘೋರ ಮೊಕದ್ದಮೆ, ಸಕಲೇಶಪುರ ಉಪ ವಿಭಾಗದಲ್ಲಿ 4 ಘೋರ ಮತ್ತು 1 ಸಾಮಾನ್ಯ ಮೊಕದ್ದಮೆ, ಸಕಲೇಶಪುರ ವಲಯದಲ್ಲಿ 2 ಘೋರ ಮೊಕದ್ದಮೆ,  ಅರಕಲಗೂಡು ವಲಯದಲ್ಲಿ 1ಘೋರ ಮತ್ತು 1 ಸಾಮಾನ್ಯ ಮೊಕದ್ದಮೆ, ಹೊಳೆನರಸೀಪುರ ವಲಯದಲ್ಲಿ 5 ಘೋರ ಮೊಕದ್ದಮೆ ದಾಖಲಾಗಿದ್ದು, 8 ಮಂದಿಯನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ ಹಾಗೂ ಚುನಾವಣಾ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.