ಹೊಳೆನರಸೀಪುರದಲ್ಲಿ ವೇದಿಕೆ ಸಜ್ಜು
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಮಾ.6
ಸ್ಥಳೀಯ ಸಂಸ್ಥೆಗಳ ಮಿನಿ ಕದನಕ್ಕೆ ವೇದಿಕೆ ಸಜ್ಜಾಗಿದ್ದು, ಇಲ್ಲಿನ ಪುರಸಭೆಯ 23 ವಾರ್ಡ್ ಗಳ ಪೈಕಿ 2 ವಾರ್ಡ್ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಗೊಂಡಿದ್ದು, ಇನ್ನುಳಿದ 21ವಾರ್ಡ್ಗಳಲ್ಲಿನ ಸದಸ್ಯತ್ವಕ್ಕಾಗಿ ಕಣದಲ್ಲಿರುವ 61 ಅಭ್ಯರ್ಥಿಗಳ ಭವಿಷ್ಯವನ್ನು ಮಾ.7 ರಂದು ಮತದಾರ ಪ್ರಭುಗಳು ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಬರೆಯಲಿದ್ದಾರೆ.
ಇಲ್ಲಿನ 23 ವಾರ್ಡ್ಗಳಿಂದ ಒಟ್ಟು 22,384 ಮತದಾರರಿದ್ದು, ಇವರಲ್ಲಿ 4ಮತ್ತು 9ನೇ ವಾರ್ಡ್ನಲ್ಲಿನ ಜೆಡಿಎಸ್ ಆಭ್ಯರ್ಥಿಗಳಾದ ಸುಮ ಮತ್ತು ಸುರೇಶ್ ಅವರುಗಳು ಅವಿರೋಧವಾಗಿ ಆಯ್ಕೆಗೊಂಡ ಕಾರಣದಿಂದಾಗಿ ಈ ಎರಡೂ ವಾರ್ಡ್ಗಳಲ್ಲಿನ 1572 ಮತದಾರರು ತಮ್ಮ ಮತ ಚಲಾವಣೆಯಿಂದ ವಂಚಿತರಾಗಿದ್ದಾರೆ. ಇನ್ನುಳಿದಂತೆ 21ವಾರ್ಡ್ಗಳಲ್ಲಿ 10.364 ಪುರುಷ ಹಾಗೂ 10.448 ಮಹಿಳಾ ಮತದಾರರು ಸೇರಿ ಒಟ್ಟು 20.812 ಮತದಾರರು 61ಅಭ್ಯರ್ಥಿಗಳಲ್ಲಿ 21 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ.
ಪ್ರಸಕ್ತ ಚುನಾವಣೆಯಲ್ಲಿ ಇಲ್ಲಿನ 17ನೇ ವಾರ್ಡ್ ಅತಿಹೆಚ್ಚಿನ ಮತದಾರರನ್ನು ಹೊಂದಿದ್ದು ಇಲ್ಲಿ ಒಟ್ಟು 3323 ಮತದಾರರಿದ್ದರೆ, ಎರಡನೇ ಅತಿ ಹೆಚ್ಚು ಮತದಾರರು 13ನೇ ವಾರ್ಡ್ನಲ್ಲಿದ್ದು ಇಲ್ಲಿ 1440 ಮತದಾರರಿದ್ದಾರೆ, ಇನ್ನುಳಿದಂತೆ 14ನೇ ವಾರ್ಡ್ನಲ್ಲಿ 1385, 23ನೇ ವಾರ್ಡ್ನಲ್ಲಿ 1156 ಹಾಗೂ 20ನೇ ವಾರ್ಡ್ನಲ್ಲಿ 1005 ಮತದಾರರಿದ್ದರೆ, ಇನ್ನುಳಿದ ವಾರ್ಡ್ಗಳಲ್ಲಿನ ಮತದಾರರ ಸಂಖ್ಯೆಯು ತಲಾ ಸಾವಿರದ ಗಡಿ ದಾಟದಿರುವುದು ವಿಶೇಷವಾಗಿದ್ದು ಒಟ್ಟು 27 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಇಲ್ಲಿನ ವಾರ್ಡ್ಗಳಾದ 2, 5, 10, 12, 13, 17, 19, 21ರಲ್ಲಿ ಅತಿ ಹೆಚ್ಚಿನ ಪೈಪೋಟಿ ಇಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ನಡೆಯಲಿದ್ದು, ಇನ್ನುಳಿದಿರುವ ವಾರ್ಡ್ಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ ನಡೆಯಲಿದೆ. ಇಲ್ಲಿಯವರೆವಿಗೂ ಯಾವುದೇ ಗಂಭೀರ ಅಹಿತಕರ ಘಟನೆಗಳು ಇಲ್ಲಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಾಳಿನ ಮತದಾನದ ನಂತರ ಮತಯಂತ್ರಗಳನ್ನು ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಇರಿಸಿ ನಂತರ ಮಾ.11ರಂದು ಮತಗಳ ಎಣಿಕೆ ಕಾರ್ಯವು ನಡೆಯಲಿದೆ. ಹಿಂದಿನ ಚುನಾವಣೆ ಸಂದರ್ಭದಲ್ಲಿ ನಡೆದಂತೆ ಪರಸ್ಪರ ವಿರೋಧಿ ಪಕ್ಷಗಳ ಅಭ್ಯರ್ಥಿಗಳ ನಡುವೆ ಗೆಲುವಿನ ಕುರಿತಂತೆ ನಡೆಯುತ್ತಿದ್ದ ಬೆಟ್ಟಿಂಗ್ ಈ ಬಾರಿ ಅಷ್ಟಾಗಿ ಕಾಣದಿರುವುದು ವಿಶೇಷ. ಯಾರು ಗೆದ್ದರೂ ಲಾಭವೂ ಇಲ್ಲ ನಷ್ಟವೂ ಇಲ್ಲ ಎಂಬ ಧೋರಣೆಗೆ ಬಂದಿರುವ ಇಲ್ಲಿನ ಮತದಾರರ ಮನೋಧರ್ಮದಿಂದಾಗಿ ಯಾರಲ್ಲೂ ಬೆಟ್ಟಿಂಗ್ ಕಟ್ಟುವ ನೈತಿಕ ಸ್ಥೈರ್ಯ ಹೊರಬೀಳದಿರುವುದೇ ಈ ಬಾರಿಯ ವಿಶೇಷತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

