ಹಾಸನ

ಕೊಲೆ, ಸುಲಿಗೆ ಪ್ರಕರಣದ ಆರೋಪಿ ಬಂಧನ

Published On :

ಕ.ಪ್ರ.ವಾರ್ತೆ  ಬಾಣಾವರ  ಮಾ.8
ಕೊಲೆ, ಸುಲಿಗೆ, ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಾಣಾವರದಲ್ಲಿ  ಶುಕ್ರವಾರ ಬಂಧಿಸಿದ್ದಾರೆ. ಚನ್ನರಾಯಪಟ್ಟಣ ತಾ. ನುಗ್ಗೇಹಳ್ಳಿ ಹೋಬಳಿ ಬೆಳಗುಲಿ ಗ್ರಾಮದ ವಿನಾಯಕ  (24) ಬಂಧಿತ ಆರೋಪಿ.
  ಈತ  ಪಟ್ಟಣದ ಆಂಜನೇಯಸ್ವಾಮಿ ದೇವಾಲಯ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಪೊಲೀಸರು ವಿಚಾರಿಸಿದಾಗ ಈತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.
  ತಾನು ಆಂಜನೇಯ ದೇವಾಲಯದಲ್ಲಿ ಕಳ್ಳತನ ಮಾಡಲು ಬಂದಿದ್ದಾಗಿಯೂ ಕಳೆದ ತಿಂಗಳ ಹಿಂದೆ ಮಾಡಾಳು ಹಾಗೂ ಗಂಡಸಿ ಗ್ರಾಮದಲ್ಲಿ ಎರಡು ಮನೆಗಳ ಬೀಗಗಳನ್ನು ಒಡೆದು ತನ್ನ ಸ್ನೇಹಿತರೊಂದಿಗೆ   ಸುಮಾರು 50 ಸಾವಿರ ರು. ಬೆಲೆ ಬಾಳುವ ಚಿನ್ನ  ಹಾಗೂ ಬೆಳ್ಳಿ ಆಭರಣ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
 ಅಲ್ಲದೆ ಈ ಹಿಂದೆಯೂ ಹಲವಾರು ಕೊಲೆ, ಸುಲಿಗೆ, ಕಳ್ಳತನ ಪ್ರಕರಣಗಳಲ್ಲಿ  ಭಾಗಿಯಾಗಿರುವುದಾಗಿಯೂ ತನಿಖೆಯಿಂದ ತಿಳಿದು ಬಂದಿದೆ.
 ಕಾರ್ಯಾಚರಣೆಯನ್ನು ಪಿ.ಎಸ್.ಐ ಕೆ. ನರೇಂದ್ರಕುಮಾರ್, ಎ.ಎಸ್.ಐ ಚಂದ್ರಶೇಖರ್, ಸಿಬ್ಬಂದಿ ಹಾಲಪ್ಪ, ಗಿರೀಶ್, ರಂಗಸ್ವಾಮಿ, ಸಿದ್ದೇಶ್, ಶ್ರೀಧರ, ಚಾಲಕ ರಾಮಲಿಂಗೇಗೌಡ ನಡೆಸಿದ್ದಾರೆ. ಜಿಲ್ಲಾ ಎಸ್ಪಿ ಅಮಿತ್‌ಸಿಂಗ್ ಕಾರ್ಯಾಚರಣೆ ಪ್ರಶಂಸಿಸಿ ಬಹುಮಾನ ನೀಡಿದ್ದಾರೆ. ಆರೋಪಿಯನ್ನು ಅರಸೀಕೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಚಿನ್ನಾಭರಣ ಕಳವು:
ಚನ್ನರಾಯಪಟ್ಟಣ: ಪಟ್ಟಣದ ಗಾಯಿತ್ರಿ ಬಡಾವಣೆ, ನಾಗಸಮುದ್ರ ರಸ್ತೆ ವಾಸಿ ನಾಗರಾಜು ಎಂಬುವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹಾಸನಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ  23 ಸಾವಿರ ರು. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಗುರುವಾರ ನಡೆದಿದೆ. ಕಳ್ಳರು ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿ 23,000 ರು. ಬೆಲೆ ಬಾಳುವ  ಒಂದು ಜೊತೆ ಚಿನ್ನದ ಓಲೆ,  ಒಂದು ಉಂಗುರ,  ಬೆಳ್ಳಿಯ ಕುಂಕುಮದ ಭರಣಿ ಕಳವು ಮಾಡಿದತ್ದಾರೆ. ಈ ಬಗ್ಗೆ ನಾಗರಾಜು ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ ಕಳವು
ಜಾವಗಲ್: ಇಲ್ಲಿನ ಪೇಟೆ ಬೀದಿಯಲ್ಲಿರುವ ಅಣ್ಣಪ್ಪ ಎಂಬುವವರ ಮನೆಯಲ್ಲಿ 24 ಸಾವಿರ ರು. ಬೆಲೆಯ ಟಿವಿಎಸ್‌ಎಕ್ಸ್‌ಎಲ್ ಮೊಪೆಡ್‌ಅನ್ನು ಕಳ್ಳರು ಇತ್ತೀಚೆಗೆ ಕಳವು ಮಾಡಿದ್ದಾರೆ. ಈ ಬಗ್ಗೆ ಅಣ್ಣಪ್ಪ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
 15 ದಿನಗಳ ಹಿಂದೆ ಮೊಪೆಡ್‌ಗಳು ಕಳೆದು ಹೋಗುತ್ತಿದ್ದು, ಇವುಗಳಲ್ಲಿ 3 ವಾಹನಗಳು ಮಾತ್ರ ಸಿಕ್ಕಿವೆ. ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಮುಂಭಾಗದ ಶ್ರೀಕಂಠಯ್ಯ ಎಂಬುವರ ಟಿವಿಎಸ್‌ಎಕ್ಸ್‌ಎಲ್ ಮೊಪೆಡ್ ಸಹ ಕಳುವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.