ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು
ಬೇಲೂರ: ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮಾನ ಉಳಿಸಿಕೊಳ್ಳುವಲ್ಲಿ ತಕ್ಕಮಟ್ಟಿಗೆ ಯಶ ಕಂಡಿದ್ದರೆ, ಕಾಂಗ್ರೆಸ್ ಇಷ್ಟು ಬಂದಿದ್ದೇ ಕಷ್ಟದಲ್ಲಿ ಎಂದು ನಿಟ್ಟುಸಿರು ಬಿಡುತ್ತಿದ್ದು, ಬಿಜೆಪಿ, ಕೆಜೆಪಿ, ಖಾತೆ ತೆರೆಯದೆ ಸೋಲಿಗೆ ಕಾರಣ ಹುಡುಕುತ್ತಿದೆ.
ಪಟ್ಟಣದ 23 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು, 14719 ಜನ ಮತದಾರರಿದ್ದು ಪುರುಷರು 7360, ಮಹಿಳೆಯರು 7358 ಮತದಾರರಿದ್ದು ಇವರಲ್ಲಿ ಪುರುಷರು 5788, ಮಹಿಳೆಯರು 5800 ಮಂದಿ ಮತಚಲಾಯಿಸಿದರು. ಪುರಸಭೆ ಚುನಾವಣೆಯಲ್ಲಿ ಇತಿಹಾಸ ಎಂಬಂತೆ 90 ಮಂದಿ ಕಣದಲ್ಲಿದ್ದು, ವಾರ್ಡಿಗೆ 4 ರಿದ 5 ಮಂದಿ ಅಭ್ಯರ್ಥಿಗಳು ಇದ್ದರು. ಚುನಾವಣೆ ಹಿಂದಿನ ರಾತ್ರಿವರೆಗೂ ತಮ್ಮ ಸಂಪೂರ್ಣ ತನು ಮನ ಧನವನ್ನು ವಿನಿಯೋಗಿಸಿ ಮತದಾರರ ಓಲೈಕೆ ಮಾಡಿ ಬೆವರಿಳಿಸಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲಿ 4 ಮಂದಿ ಬಿಟ್ಟರೆ ಬಹುತೇಕ ಎಲ್ಲರೂ ಹೊಸ ಮುಖಗಳಾಗಿದ್ದು, ಪುರಸಭೆಗೆ ಹೊಸ ನೀರು ಹರಿದು ಬಂದಿದೆ. 23 ವಾರ್ಡುಗಳಲ್ಲಿ 12 ಜೆಡಿಎಸ್, 9 ಕಾಂಗ್ರೆಸ್, 2 ಪಕ್ಷೇತರ ಗೆಲುವು ಸಾಧಿಸಿದ್ದಾರೆ.
ಕಣದಲ್ಲಿ ಪತ್ರಕರ್ತರು: ಈ ಬಾರಿ ವಿಶೇಷವಾಗಿ ಪುರಸಭೆ ಚುನಾವಣೆಗೆ ಪತ್ರಕರ್ತರೂ ಸ್ಪರ್ಧೆ ನಡೆಸಿದ್ದಾರೆ. ಒಟ್ಟು 6 ಮಂದಿ ಪತ್ರಕರ್ತರಲ್ಲಿ ಇಬ್ಬರು ಗೆಲವು ಸಾಧಿಸಿದ್ದು, 4 ಮಂದಿ ಸೋಲನುಭವಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

