ಹಾಸನ

ಪಡಿತರದಾರರಿಗೆ 2 ರು.ಗೆ ಅಕ್ಕಿ; ಹುಚ್ಚು ಆಶ್ವಾಸನೆ: ಟೀಕೆ

Published On :

ಕ.ಪ್ರ.ವಾರ್ತೆ ೤ ರಾಮನಾಥಪುರ ೤ ಮಾ. 16
ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರಿಗೆ 2 ರು. ನಂತೆ ಅಕ್ಕಿ ವಿತರಿಸುವುದಾಗಿ ಸರ್ಕಾರ ಹೇಳಿಕೆ ನೀಡಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಅರಕಲಗೂಡು ತಾಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಇ.ಜಗದೀಶ್ ಕಟುವಾಗಿ ಟೀಕಿಸಿದ್ದಾರೆ.
ಬಿಪಿಎಲ್ ಪಡಿತದಾರರು ಪಡೆಯುತ್ತಿರುವ ಅಕ್ಕಿ 3 ರು. ನಂತೆ ನೀಡಲಾಗುತ್ತಿದೆಯೆ ಎಂಬುದನ್ನು ಮೊದಲು ಖಾತ್ರಿಪಡಿಸಿ ಕೊಳ್ಳಬೇಕಾಗಿದೆ. ಇಂದಿಗೂ ತಾಲೂಕು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಎಷ್ಟೋ  ಬಿಪಿಎಲ್ ಪಡಿತರರದಾರರಿಗೆ 3 ರು. ನಂತೆ ಅಕ್ಕಿ ನೀಡುತ್ತಿಲ್ಲ. ಬದಲಾಗಿ 3.25 ರು. ಮತ್ತು 3.50 ರು. ನಂತೆ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಆಹಾರ ಇಲಾಖೆಯ ಅಧಿಕಾರಿಗಳಿಗೆ ರೈತ ಸಂಘದವರು ಮತ್ತು ಜನ ಸಾಮಾನ್ಯರು ಸಾಕಷ್ಟು ದೂರು ನೀಡಿದ್ದರೂ ಯಾವ ಬಗೆಯ ಶಿಸ್ತು ಕ್ರಮ ಕೈಗೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಗಲು ದರೋಡೆಗೆ ಮೌನ ಸಮ್ಮತಿ:   ನ್ಯಾಯ ಬೆಲೆ ಅಂಗಡಿ ಮಾಲಿಕರಿಗೆ ಮಾತ್ರ ಸಹಕಾರಿಗಳಾಗಿ ಈ ರೀತಿಯ ನಿರಂತರ ಹಗಲು ದರೋಡೆಗೆ ಮೌನ ಸಮ್ಮತ ನೀಡಿದ್ದಾರೆ. ದೇವರು ವರ ಕೊಟ್ಟರೂ ಪೂಜಾರಿ ಸಹಿಸನು ಎಂಬ ಸನ್ನಿವೇಶ ಇರುವಾಗ ಈಗ ನೀಡಿರುವ 3 ರು.ನಂತೆ ಅಕ್ಕಿ ನೀಡಲು ಸರ್ಕಾರ ವಿಫಲವಾಗಿರುವಾಗ ಈಗ ಇದ್ದಕ್ಕಿದ್ದಂತೆ ಹಗಲು ನಿದ್ರೆಯಲ್ಲಿ ಮುಖ್ಯಮಂತ್ರಿಗಳು ಬಿಪಿಎಲ್ ಪಡಿತರ ಕಾರ್ಡ್‌ದಾರರಿಗೆ 2 ರು. ನಂತೆ ಅಕ್ಕಿ ನೀಡುವ ಹೇಳಿಕೆ ನೀಡಿರುವುದು ನಿಜಕ್ಕೂ ಹಾಸ್ಯಾಸ್ಪದವಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿರುವ ಅನ್ಯಾಯ ಬೆಲೆಗೆ ತಕ್ಕ ಕಡಿವಾಣ ಹಾಕುವುದರೊಂದಿಗೆ ನ್ಯಾಯ ಬೆಲೆ ಅಂಗಡಿಯ ಹೊಸ ಮರು ಮಾಲೀಕತ್ವವನ್ನು ಸರ್ಕಾರದ ನಿಯಮದಂತೆ ಬದಲಾವಣೆ ಕ್ರಮ ತರುವುದರೊಂದಿಗೆ ಉತ್ತಮ ಸಾಧನೆ ಮೊದಲು ಕೈಗೊಳ್ಳಲಿ.
ಇದು ಹೀಗೆ ಮುಂದುವರಿದರೆ ರಾಜ್ಯ ರೈತ ಸಂಘ ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.