ಹಾಸ್ಟೆಲ್ ಅವ್ಯವಸ್ಥೆ: ವಾರ್ಡ್‌ನ್ ತರಾಟೆ
ಕ.ಪ್ರ.ವಾರ್ತೆ ಹಾಸನ ಮಾ.16
ಊಟ ಮಾಡೋದು ಒಂದು ಕಡೆ, ಮಲಗೋದು ಒಂದು ಕಡೆ, ಕುಡಿಯಲು ನೀರಿಲ್ಲ, ಮಲಗಲು ಸೂಕ್ತ ವ್ಯವಸೆ ಇಲ್ಲ. ಹೀಗಾದರೆ ನಾವು ಹೇಗೆ ಓದುವುದು. ಸರ್ಕಾರದ ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಂಡು ನಮ್ಮ ವ್ಯಾಸಂಗಕ್ಕೆ ತೊಂದರೆ ನೀಡುತ್ತಿದ್ದಾರೆ.
ಇದು ನಗರದ ಆಡುವಳ್ಳಿ ಬಡಾವಣೆಯಲ್ಲಿರುವ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ವಾರ್ಡ್‌ನ್‌ನ್ನು ತರಾಟೆಗೆ ತೆಗೆದುಕೊಂಡ ರೀತಿ.. ಒಂದು ಹಂತದಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳ ಆಗರವನ್ನು ತೆರೆದಿಡುತ್ತಲೇ, ವಾರ್ಡನ್ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಾಗ್ವಾದಕ್ಕೆ ಇಳಿದರು.
ಹಾಸ್ಟೆಲ್‌ನಲ್ಲಿನ ಸಮಸ್ಯೆಗಳಿಂದ ಓದುವುದಕ್ಕೆ ತುಂಬಾ ಕಷ್ಟವಾಗುತ್ತಿದೆ. ರಾತ್ರಿ ಅಡುಗೆ ಮಾಡೋದು ಒಂದು ಕಡೆ. ಮತ್ತೊಂದು ಕಡೆ ಹಾಸ್ಟೆಲ್ ಇದೆ, ಅಲ್ಲಿಗೆ ಊಟ ಮಾಡಲು ಬರಬೇಕೆಂದು ವಿದ್ಯಾರ್ಥಿಗಳಿಗೆ ಒತ್ತಾಯ ಮಾಡಲಾಗುತ್ತಿದೆ. ಈ ಹಾಸ್ಟೆಲ್‌ನಲ್ಲಿ ಒಟ್ಟು 172 ವಿದ್ಯಾರ್ಥಿಗಳಿದ್ದು, ಅದರಲ್ಲಿ ಕೆಲವರು ನಾಳೆ ಪಿಯು ಪರೀಕ್ಷೆ ಇದೆ. ಅಷ್ಟು ದೂರ ಬರಲು ಆಗುವುದಿಲ್ಲ ಎಂದು ಹೇಳಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು.
ಮಾತಿನ ಚಕಮಕಿ : ಈ ವೇಳೆ ವಾರ್ಡ್‌ನ್ ಬೆಟಗೇರಿ ಮತ್ತು ವಿದ್ಯಾರ್ಥಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಹಿಂದೆ ರಾಮನವಮಿ ಉತ್ಸವ ಸೇರಿದಂತೆ ಇತರೆ ಯಾವುದೇ ಕಾರ್ಯಕ್ರಮಗಳಿದ್ದಾಗ ಅಡುಗೆ ಭಟ್ಟರು ಅಡುಗೆಯನ್ನು ಹಾಸ್ಟೆಲ್‌ನಲ್ಲಿ ಸಿದ್ಧಪಡಿಸದೆ ಎಲ್ಲರನ್ನು ಇತರೆಡೆ ಊಟ ಮಾಡಲು ಹೇಳುತ್ತಿದ್ದರು ಎಂದರು.
ಹಾಸ್ಟೆಲ್‌ನಲ್ಲಿರುವ ತೊಟ್ಟಿಯ ನೀರು ಕೂಡ ಕಲುಷಿತಗೊಂಡಿದ್ದು, ಅದರಲ್ಲೇ ಅಡುಗೆ ಮಾಡಿ ನಮಗೆ ನೀಡಲಾಗುತ್ತಿದೆ. ಸ್ವಚ್ಛತೆ ಕಿಂಚಿತ್ತೂ ಇಲ್ಲವಾಗಿದೆ. ಕುಡಿಯುವ ನೀರನ್ನು 172 ವಿದ್ಯಾರ್ಥಿಗಳಿಗೆ ಒಂದೇ ಒಂದು ಕಡೆ ಮಾತ್ರ ಇಡಲಾಗಿದೆ. ತಿಂಡಿ ಮತ್ತು ಊಟ ದಿನನಿತ್ಯ ನಾನಾ ರೀತಿಯಲ್ಲಿ ಮಾಡಬೇಕೆಂಬ ಪಟ್ಟಿ ಇದ್ದರೂ ಇವರು ಒಂದೇ ರೀತಿ ಅಡುಗೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಹಾಸ್ಟೆಲ್‌ನ ನಾನಾ ಸಮಸ್ಯೆಗಳನ್ನು ಹೇಳಿಕೊಂಡರು.
ಬಿಸಿಎಂ ಹಾಸ್ಟೆಲ್ ಅಧಿಕಾರಿ ಜಗದೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ಬೇರೆ ಹಾಸ್ಟೆಲ್‌ನಲ್ಲಿ ನಾನಾ ರೀತಿಯ ಭೋಜನ ಇದೆ ಎಂದು ಆಡುವಳ್ಳಿ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟ ಮಾಡಲು ಬರಲು ಹೇಳಲಾಗಿತ್ತು. ಎಲ್ಲಾ ಬರಲು ಒಪ್ಪಿಗೆ ನೀಡಿದರೆ ಕೆಲವರು ಮಾತ್ರ ಬರಲಿಲ್ಲ ಎಂದರು. ಹಾಸ್ಟೆಲ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

