ಕೊಳವೆ ಬಾವಿ ಕೊರೆಸಿ ತಿಂಗಳಾದ್ರೂ ಪೈಪ್ಲೈನ್ ಅಳವಡಿಸಿಲ್ಲ - ದೂರು
ಕ.ಪ್ರ.ವಾರ್ತೆ ಬಾಣಾವರ ಮಾ.18
ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಕೊಳವೆ ಬಾವಿ ಕೊರೆಯಿಸಿ ತಿಂಗಳಾದರೂ ಅದಕ್ಕೆ ಪೈಪ್ಲೈನ್ ಅಳವಡಿಸದೇ ಇರುವುದರಿಂದ ನೀರಿಗೆ ಪರಿತಪಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬೇಸಿಗೆಗೂ ಮುನ್ನ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗ ಬಾರದು ಎಂದು ಸರ್ಕಾರ ಕೊಳವೆ ಬಾವಿ ತೆಗೆಸಿ ತಿಂಗಳು ಕಳೆದರೂ ಸಂಪರ್ಕ ಪಡೆಯಲೂ ತಡವಾಗುತ್ತಿರುವುದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ.
ಅಂತರ್ಜಲ ಕುಸಿತದಿಂದ 2 ತಿಂಗಳಿಂದ ಬಾಣಾವರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 8-10 ಕೊಳವೆ ಬಾವಿ ತೆಗೆದರೂ ಎಲ್ಲಿಯೂ ನೀರು ದೊರೆಯದೇ ಜನರಲ್ಲಿ ಬಾರಿ ನಿರಾಶೆ ಮೂಡಿಸಿತ್ತು.
ಆದರೆ, ಅಗ್ರಹಾರ ಬಡಾವಣೆಯ ಜನರ ಪುಣ್ಯ ಎಂಬಂತೆ 3 ಇಂಚು ನೀರು ಬಂದಿತ್ತು. ಆದರೂ ಪೈಪ್ಲೈನ್ ಸಂಪರ್ಕ ನೀಡದೇ ಇರುವುದರಿಂದ ಶಿವರಾತ್ರಿ ಹಬ್ಬದಲ್ಲೂ ಜನರು ನೀರಿಗಾಗಿ ದಿನವಿಡಿ ಕಾದಿದ್ದೇ ಹೆಚ್ಚು ಎಂದು ತಿಳಿಸಿದ್ದಾರೆ.
ಬಸ್ನಿಲ್ದಾಣದಿಂದ ಕೂಗಳತೆಯ ದೂರದಲ್ಲಿದ್ದರೂ ಅಗ್ರಹಾರ ಬಡಾವಣೆ ಕಾಚಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ.
ಅಗ್ರಹಾರ ಬಡಾವಣೆ 10 ವರ್ಷಗಳ ಹಿಂದೆ ಇದ್ದ (100-200 ಮನೆಗಳಿಗೆ ನೀರು ಸರಬರಾಜಿನ) ವ್ಯವಸ್ಥೆಯೇ ಈಗಲೂ ಮುಂದುವರೆಯುತ್ತಿರುವುದು ಎಲ್ಲ ಸಮಸ್ಯೆಗೆ ಕಾರಣ.
ಈಗ ಬಡಾವಣೆ ಶರವೇಗದಲ್ಲಿ ಬೆಳೆದಿದೆ. 800-900 ಮನೆಗಳು ಆಗಿವೆ. ಅದೇ ವ್ಯವಸ್ಥೆ ಯಲ್ಲಿಯೇ ನೀರು ಒದಗಿಸುವುದು ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಅಗ್ರಹಾರ ಬಡಾವಣೆಯ ಜನರ ಸಮಸ್ಯೆಗೆ ಸ್ಪಂದಿಸಿ ಶಾಶ್ವತ ನೀರಿನ ಯೋಜನೆ ರೂಪಿಸಲಿ ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

