ಗ್ರಾಮಗಳ ಉನ್ನತಿಗೆ ಕಂಕಣ ಬದ್ಧರಾಗಿ ಸೇವೆ ಸಲ್ಲಿಸಿ: ಶಾಸಕ ವಾಲೆ ಮಂಜು ಕರೆ
ಕ.ಪ್ರವಾರ್ತೆ ಅರಕಲಗೂಡು ಮಾ.20
ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಂಡು ಗ್ರಾಮಗಳ ಉನ್ನತಿಗೆ ಕಂಕಣ ಬದ್ಧರಾಗಿ ಸೇವೆ ಸಲ್ಲಿಸುವ ಮೂಲಕ ಜೀವನ ಅತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂದು ಕ್ಷೇತ್ರದ ಶಾಸಕ ಎ. ಮಂಜು ತಿಳಿಸಿದರು.
ತಾಲೂಕಿನ ದೊಡ್ಡಮಗ್ಗೆ ಹೋಬಳಿ ಅಗ್ರಹಾರ ಗ್ರಾಮದಲ್ಲಿ 57.38 ಲಕ್ಷ ರೂ ವೆಚ್ಚದಲ್ಲಿ ಕೆರೆಕೋಡಿಗೆ ಕ್ರಾಸೆ ವೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಅವರು ಇದೇ ಗ್ರಾಮದಲ್ಲಿ 15 ಲಕ್ಷ ರು. ವೆಚ್ಚದ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆ, 10 ಲಕ್ಷ ರು. ವೆಚ್ಚದಲ್ಲಿ ರಾಜೀವ್ಗಾಂಧಿ ಸೇವಾ ಕೇಂದ್ರದ ಉದ್ಘಾಟನೆ, 48 ಲಕ್ಷ ರು. ವೆಚ್ಚದಲ್ಲಿ ಅಗ್ರಹಾರ ಕೆರೆ ಏರಿ ಅಗಲಿಕರಣ ಮತ್ತು ಡಾಂಬರ್ ರಸ್ತೆಯನ್ನು ಉದ್ಘಾಟನೆ ನೆರವೇರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮನಾಥಫುರ ಹೋಬಳಿ ಮಲ್ಲಿರಾಜಪಟ್ಟಣದ ಗ್ರಾಮದ ಮುಖ್ಯ ರಸ್ತೆ ಕಾಮಗಾರಿ, ಟಿ.ಎಸ್.ಟಿ ಸಮಾಜ ಕಲ್ಯಾಣ ಇಲಾಖೆಯಿಂದ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಚಾಲನೆ, ಕೊಣನೂರು ಹೋಬಳಿ ಸುಡಗೂಡು ಗ್ರಾಮದಲ್ಲಿ ಹೇಮಾವತಿ ಪುನರ್ವಸತಿ ಯೋಜನೆಯಿಂದ 20 ಲಕ್ಷ ರು. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ, ಕಾಡನೂರು ಕೊಪ್ಪಲು ಗ್ರಾಮದಲ್ಲಿ 8 ಲಕ್ಷ ರು. ವೆಚ್ಚದಲ್ಲಿ ಟಿ.ಎಸ್.ಟಿ .ಯೋಜನೆ ಅಡಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಚಾಲನೆ, ಕಾಡನೂರು ಗ್ರಾಮದ ಕಾಲೋನಿಯ ರಸ್ತೆ ಹಾಗೂ ಚರಂಡಿಗೆ 18 ಲಕ್ಷ ರು. ವೆಚ್ಚದಲ್ಲಿ ಟಿ.ಎಸ್.ಟಿ .ಯೋಜನೆ ಅಡಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಇದೇ ಗ್ರಾಮದಿಂದ ಕಂಠೇನಹಳ್ಳಿ ಗ್ರಾಮದವರೆಗೆ 73 ಲಕ್ಷ ರೂ, ಹಾಗೂ ಕಾಡನೂರು ಗ್ರಾಮದಿಂದ ಬಾಬಾನಗರದವರೆಗೆ 50 ಲಕ್ಷ ರು. ವೆಚ್ಚದ ಡಾಂಬರ್ ರಸ್ತೆ ಉದ್ಘಾಟನೆ , ಕಡುವಿನಹೊಸಹಳ್ಳಿ ಗ್ರಾಮದ ಕಾಲೋನಿಯ ರಸ್ತೆ ಹಾಗೂ ಚರಂಡಿಗೆ 18 ಲಕ್ಷ ರು ವೆಚ್ಚದಲ್ಲಿ ಟಿ.ಎಸ್.ಟಿ .ಯೋಜನೆ ಅಡಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಚಾಲನೆ ನೀಡಲಾಗಿದೆ ಎಂದು ಶಾಸಕರು ಸುದ್ದಿಗಾರರಿಗೆ ತಿಳಿಸಿದರು.
ಅಗ್ರಹಾರ ಗ್ರಾಮದ ವಿದ್ವಾನ್ ಚಂದ್ರಶೇಖರ ಶರ್ಮಾ, ಎ.ಎಸ್. ನಾಗರಾಜು, ತಾಪಂ ಅಧ್ಯಕ್ಷೆ ಕಾಮಕ್ಷಮ್ಮ, ನಿವೃತ್ತ ಹಿರಿಯ ಅಧಿಕಾರಿ ಶ್ರೀಹರಿ, ಇಂಜಿನಿಯರ್ ರಂಗರಾಜು, ತಾ. ಕಾರ್ಯನಿರ್ವಾಹಣಾಧಿಕಾರಿ ಶಿವರಾಂ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭಾಕರ್, ಡಾ. ಶ್ರೀಕಾಂತ್, ರಾಮನಾಥಪುರ ಹೋಬಳಿ ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ. ಮಂಜೇಗೌಡ, ಪಿ.ಡಿ.ಒ. ಎಸ್.ಟಿ. ಅಣ್ಣೆಯ್ಯ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

