ಮಹಿಳೆಯರಿಗೆ ಕಾನೂನು ತಿಳಿವಳಿಕೆ ಅ್ಯಗತ್ಯ: ನ್ಯಾ.ವೆಂಕಟಪ್ಪ
ಕ.ಪ್ರ ವಾರ್ತೆ ಅರಕಲಗೂಡು ಮಾ.22
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಮಹಿಳೆಯರೂ ಕಾನೂನಿನ ಅರಿವು ಹೊಂದಿದರೆ ಸಂಸಾರದಲ್ಲಿ ಉತ್ತಮ ವಾತಾವರಣ ಹಾಗೂ ಜೀವನದಲ್ಲಿ ಮುಂದೆ ಬರಲು ಸಹಾಯ ವಾಗುತ್ತದೆ ಎಂದು ನ್ಯಾಯಾಧೀಶ ಬಿ.ವೆಂಕಟಪ್ಪ ಕಿವಿಮಾತು ಹೇಳಿದ್ದಾರೆ. ಅವರು ಕೊಣನೂರು ಹೋಬಳಿ ಮರಿಯನಗರ ಗ್ರಾಮದ ಸಂತಮರಿಯಾ ಜ್ಯೂಬಿಲಿ ಭವನದ ಅವರಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಕುಟುಂಬದಲ್ಲೂ ಹೆಣ್ಣು ಮಕ್ಕಳಿಗೆ ಅಸ್ತಿ ವಂಚನೆ ಹಾಗೂ ಮೋಸ ಮಾಡುವ ಪ್ರಕರಣಗಳು ಕಂಡು ಬರುತ್ತಿವೆ. ಅದ್ದರಿಂದ ಹೆಣ್ಣು ಮಕ್ಕಳು ಕಾನೂನು ಅರಿವು ಪಡೆದುಕೊಂಡರೆ ಉತ್ತಮ ಎಂದು ಅವರು ಸಲಹೆ ನೀಡಿದರು. ಮರಿಯಾನಗರ ಧರ್ಮಕೇಂದ್ರ ಗುರು ವಂದನೀಯಸ್ವಾಮಿ ಡೇವಿಡ್ ಅಂತೋಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಜನತೆಯಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಲು ಉಪಯೋಗವಾಗುತ್ತದೆ ಎಂದ ಅವರು ಇಂದಿಗೂ ಕಾನೂನಿನ ಅರಿವನ್ನು ಹೊಂದಿಲ್ಲದಿರುವವರಿಗೆ ಕಾನೂನು ಬಗೆಗಿನ ಅರಿವಿನ ಕೊರತೆಯಿಂದಾಗಿ ಅರ್ಹರಿಗೆ ನ್ಯಾಯ ತಲುಪುತ್ತಿಲ್ಲ ಎಂದು ಎಂದು ವಿಷಾದಿಸಿದರು. ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಸಮರ್ಪಕವಾಗಿ ಜಾರಿಯಾದಲ್ಲಿ ಮಹಿಳೆಯರು ಮತು ಮಕ್ಕಳ ಸಾಗಣೆಯಲ್ಲಿ ತೊಡಗಿದವರನ್ನು ಶಿಕ್ಷೆಗೆ ಒಳಪಡಿಸಿದಾಗ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಕಾನೂನಿನ ಅರಿವು ಅವಶ್ಯವಾಗಿದೆ.ಮಾನವನಿಗೆ ಬೆಳಕು, ವಸತಿ, ಅಹಾರ ಅವಶ್ಯಕತೆಯಂತೆ, ಸಮಾಜದಲ್ಲಿ ನೆಮ್ಮದಿಯಿಂದ ಬಾಳ್ವೆ ಮಾಡಲು ಕಾನೂನಿನ ಅಗತ್ಯವಿದೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತರಾದ ವಂದನೀಯಸ್ವಾಮಿ ಫೆಲಿಕ್ ಥಾಮಸ್ ರೊಜಾರಿಯಾ, ಡಾ.ಸಿ.ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ರಾಜೇಶ್, ಕಾನೂನು ಸೇವಾ ಸಲಹಾ ಚಿಕಿತ್ಸಾಲಯದ ಸಲಹೆಗಾರ ಎ.ಅರ್. ಜನಾರ್ದನ ಗುಪ್ತ ಹಾಗೂ ಹೆಚ್.ಅರ್. ನಂಜುಡೇಗೌಡ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

