ಹಾಸನ

ಜನತೆ ದಿಕ್ಕು ತಪ್ಪಿಸುತ್ತಿರುವ ಶಾಸಕ: ಕೆಜೆಪಿ ಮುಖಂಡ ರಮೇಶ್

Published On :

ಕ.ಪ್ರ.ವಾರ್ತೆ ಆಲೂರು ಮಾ 24
ಸಕಲೇಶಪುರ ಶಾಸಕ ಕುಮಾರಸ್ವಾಮಿ ಕ್ಷೇತ್ರದ ಜನ ಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದ್ದು,  ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಜೆಪಿ ಮುಖಂಡ ಬೆಳಗೂಡು ಉಮೇಶ್ ಆರೋಪಿಸಿದರು.
ಮೂಲ ನಿವಾಸಿ ಸ್ವಾಭಿಮಾನಿ ವೇದಿಕೆಯಿಂದ ಶನಿವಾರ ತಾಲೂಕಿನ ಕಣತೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಶಾಸಕ ಕುಮಾರಸ್ವಾಮಿ ಅಭಿವೃದ್ಧಿ ವಿರೋಧಿ. ದಲಿತರಿಗೆ ಮಾತ್ರ ಅಲ್ಲ ಎಲ್ಲ ಸಮುದಾಯದ ವಿರೋಧಿಯಾಗಿದ್ದಾರೆ. ನಯವಂಚಕ ದಲಿತರ ಹಾಗೂ ಮುಸ್ಲಿಂರ ಓಟು ಬೇಡವೇ ಬೇಡ ಎಂದು ಕೀಳು ಮಟ್ಟದ ಜಾತಿ ರಾಜಕಾರಣ ಮಾಡುತ್ತಿದ್ದು ಮೀಸಲು ಕ್ಷೇತ್ರದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ತಾನೊಬ್ಬ ಮಹಾನ್ ರಾಜಕಾರಣಿಯಂತೆ ವರ್ತಿಸುತ್ತಿರುವ ಕುಮಾರಸ್ವಾಮಿರನ್ನು ದಿ. ಗುಂಡೂರಾವ್ ರಾಮಕೃಷ್ಣ ಹೆಗಡೆ ಅಂತವರನ್ನೇ ಸಾಮಾನ್ಯ ವ್ಯಕ್ತಿಯೊಬ್ಬ ಸೋಲಿಸಿದಂತೆ ಈ ಬಾರಿ ಕ್ಷೇತ್ರದ ಜನತೆ ಖಂಡಿತವಾಗಿಯೂ ಸೋಲಿಸಲಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಮೂಲನಿವಾಸಿಗಳೆಲ್ಲ ಪಕ್ಷಾತೀತವಾಗಿ ಕ್ಷೇತ್ರದವರಲ್ಲದ ಕುಮಾರಸ್ವಾಮಿಯನ್ನು  ಸೋಲಿಸಲು ಒಂದು ಗೂಡಬೇಕೆಂದು ಮನವಿ  ಮಾಡಿದರು. ಮೂರು ಬಾರಿ ಮೂಡಿಗೆರೆ ಜನರಿಂದ ತಿರಸ್ಕೃತರಾಗಿರುವ ಮೋಟಮ್ಮ ಮೀಸಲು ಕ್ಷೇತ್ರಕ್ಕೆ ಅಗತ್ಯವಿಲ್ಲ. ಹಾಗೊಂದು ವೇಳೆ ಅವರು ಬಂದಲ್ಲಿ ಇಲ್ಲೂ ಕೂಡ ಮೂಡಿಗೆರೆಯಲ್ಲಿ ಆದ ಸ್ಥಿತಿಯೇ ಆಗಲಿದೆ. ಮೂಡಿಗೆರೆ ಕ್ಷೇತ್ರಕ್ಕೆ ಮೋಟಮ್ಮ ಕೊಡುಗೆ ಏನೂ ಇಲ್ಲವಾಗಿದ್ದು ಕ್ಷೇತ್ರದವರನ್ನೇ ಆರಿಸಲು ಸ್ಥಳಿಯರು ಮುಂದಾಗಬೇಕೆಂದು ಮನವಿ ಮಾಡಿದರು. ಮಾಸುವಳ್ಳಿ ಚಂದ್ರು ಮಾತನಾಡಿ, ಈ ಬಾರಿ ಸ್ಥಳೀಯ ನಾಯಕರನ್ನು ಗೆಲ್ಲಿಸುವ ಮೂಲಕ ಹೊರಗಿಬನಿಂದ ಬರುವ ಅಭಿವೃದ್ಧಿ ವಿರೋಧಿಗಳಾದ ಕುಮಾರಸ್ವಾಮಿ ಅಂತಹವರಿಗೆ ತಕ್ಕ ಪಾಠ ಕಲಿಸಬೇಕೆಂದು ನುಡಿದರು.
ಕೆಜೆಪಿ ಮುಖಂಡ ಎಂ.ವಿ. ತಿಮ್ಮಯ್ಯ, ಹೇಮರಾಜ್, ಹೆತ್ತೂರು ನಾಗರಾಜ್,  ಚಂದ್ರ ಪ್ರಸಾದ್ ದಿನ್ನೇನಹಳ್ಳಿ ಪುಟ್ಟಸ್ವಾಮಿ, ರವೀಶ್ ಹಾಗೂ 50 ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.