ಎನ್ಜಿಓ ಸಂಸ್ಥೆಯಿಂದ ರು. 83 ಲಕ್ಷ ಗುಳುಂ: ನ್ಯಾಯ ಸಿಗದಿದ್ದರೆ ಪ್ರತಿಭಟನೆ- ಎಚ್ಚರಿಕೆ
ಕ.ಪ್ರ.ವಾರ್ತೆ ಹಾಸನ ಮಾ 28
ಮೈಕ್ರೋ ಇನ್ಸೂರೆನ್ಸ್ ಎಂಬ ಕಂಪನಿ ಸಹಯೋಗದಲ್ಲಿ ನಡೆಯುತ್ತಿದ್ದ ಬಾಳಿಗೊಂದು ಗುರಿ ಎಂಬ ಎನ್ಜಿಓ ಸಂಸ್ಥೆಯು ಅಮಾಯಕರ ಸಮುಮಾರು 83 ಲಕ್ಷ ರು.ಗಳನ್ನು ಗುಳುಂ ಮಾಡಿದ್ದು, ಏ.28 ರೊಳಗೆ ನ್ಯಾಯ ದೊರಕಿಸಿ ಕೊಡದಿದ್ದಲ್ಲಿ ರಾಜ್ಯಾದ್ಯಂತ ಈ ಇನ್ಸೂರೆನ್ಸ್ ಕಂಪನಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜೀವ ವಿಮಾ ನಿಗಮ ಸಹಭಾಗಿತ್ವದಲ್ಲಿ ಚನ್ನರಾಯಪಟ್ಟಣದಲ್ಲಿರುವ ಮೈಕ್ರೋ ಇನ್ಸೂರೆನ್ಸ್ ಕಂಪನಿಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್ಜಿಓ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಮತ ಹಾಗೂ ರೋಹನ್ ಎಂಬುವರು ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ. ಸಾರ್ವಜನಿಕರಿಂದ ಇನ್ಸೂರೆನ್ಸ್ ಕಟ್ಟಿಸಿಕೊಂಡು ಮುಖ್ಯ ಕಚೇರಿಗೆ ಆ ಹಣವನ್ನು ಪಾವತಿ ಮಾಡದೆ ವಂಚಿಸಿದ್ದಾರೆ ಎಂದು ದೂರಿದರು.
ಹೈದರಾಬಾದ್ ಮೂಲದ ಈ ಕಂಪನಿ ಜಿಲ್ಲೆಯಲ್ಲಿ ಅಲ್ಲದೇ ಉಡುಪಿ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳ ಜನರಿಗೂ ಇದೇ ರೀತಿ ವಂಚನೆ ಮಾಡಿದೆ.
ಚನ್ನರಾಯಪಟ್ಟಣ ತಾಲೂಕಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ತಿಂಗಳಿಗೆ ನೂರು ರು.ಗಳಂತೆ ಸುಮಾರು 1 ರಿಂದ 5 ಸಾವಿರ ರು.ವರೆಗೆ ಹಣ ಪಾವತಿಸಿದ್ದಾರೆ.
ಈ ಬಗ್ಗೆ ಮೈಸೂರು ಕಚೇರಿಗೆ ಹೋಗಿ ಪರಿಶೀಲಿಸಿದಾಗ ಚನ್ನರಾಯಪಟ್ಟಣ ತಾಲೂಕು ಶಾಖೆಯಿಂದ ಹಣ ಪಾವತಿ ಮಾಡದಿರುವುದು ತಿಳಿಯಿತು ಎಂದರು.
ಇನ್ನೊಂದು ತಿಂಗಳೊಳಗೆ ವಂಚನೆಗೊಳಗಾಗಿರುವ ಜನರಿಗೆ ಹಣ ಪಾವತಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಸಿದಾರರು, ಏಜೆಂಟರಾದ ಚಂದ್ರಮ್ಮ, ಅನ್ನಪೂರ್ಣಮ್ಮ, ಮಂಜು, ಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

