ಹಾಸನ

ವಿಶ್ವಸಂಸ್ಥೆ ಕಾನ್ಫೆರೆನ್ಸ್‌ನಲ್ಲಿ ಪ್ರದರ್ಶಿಸಲು ಕೇಸರೀ ಹರವೂ ನಿರ್ದೇಶನದ 'ವಿದರ್ ಗುಂಡ್ಯ' ಚಿತ್ರ ಆಯ್ಕೆ

Published On :

ಕನ್ನಡಪ್ರಭವಾರ್ತೆ ಹಾಸನ ಮಾ. 28-
ಗುಂಡ್ಯ ಜಲವಿದ್ಯುತ್ ಯೋಜನೆ ಕುರಿತು ಚಲನಚಿತ್ರ ನಿರ್ದೇಶಕ ಕೇಸರೀ ಹರವೂ ನಿರ್ದೇಶನದ ವಿದರ್ ಗುಂಡ್ಯ ಎನ್ನುವ 4 ನಿಮಿಷಗಳ ಇಂಗ್ಲಿಷ್ ಚಿತ್ರ ವಿಶ್ವಸಂಸ್ಥೆಯ ಅರಣ್ಯಗಳ ಮೇಲಿನ ಕಾನ್ಫೆರೆನ್ಸ್‌ನಲ್ಲಿ   ಪ್ರದರ್ಶಿಸಲು ಆಯ್ಕೆ ಆಗಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ  ಎಚ್.ಎ.ಕಿಶೋರ್‌ಕುಮಾರ್ ತಿಳಿಸಿದ್ದಾರೆ.
ಏಪ್ರಿಲ್ 10ರಂದು  ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಭಾರತ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳ ಪ್ರತಿನಿಧಿಗಳು ಈ ಚಿತ್ರವನ್ನು ವೀಕ್ಷಿಸಲಿದ್ದಾರೆ. ಗುಂಡ್ಯ ಜಲ ವಿದ್ಯುತ್ ಯೋಜನೆ ಮತ್ತು ಜಿಲ್ಲೆಯ ಪಶ್ಚಿಮ ಘಟ್ಟದ ಪರಿಸರ ಪ್ರಪಂಚದ ಗಮನಸೆಳೆಯುವಂತಾಯಿತು. ಇದರಿಂದಾಗಿ ನಮಗೆಲ್ಲರಿಗೂ ತುಂಬಾ ಸಂತೋಷವಾಗಿದೆ ಎಂದು ಕಿಶೋರ್ ಹೇಳಿದ್ದಾರೆ. ಚಿತ್ರದ ಸಲಹೆಗಾರ ಪರಿಸರ ವಿಜ್ಞಾನಿ ಪ್ರೊ. ಟಿ.ವಿ.ರಾಮಚಂದ್ರ ಹಾಗೂ ತಂತ್ರಜ್ಞರು ಸಹಕರಿಸಿದ ಗ್ರಾಮಸ್ಥರೂ ಅಭಿನಂದನಾರ್ಹರು. ವಿದರ್‌ಗುಂಡ್ಯ  ಚಿತ್ರದಲ್ಲಿ ಪಶ್ಚಿಮಘಟ್ಟದ ಗುಂಡ್ಯ ಪ್ರದೇಶದ ಪರಿಸರದ ಚಿತ್ರಣದ ಜೊತೆಗೆ ಗುಂಡ್ಯ ಜಲವಿದ್ಯುತ್ ಯೋಜನೆಯಿಂದ ಆಗಬಹುದಾದ ಪರಿಸರ ಹಾನಿಯನ್ನು ಚಿತ್ರ ಬಹಳ ಪರಿಣಾಮಕಾರಿಯಾಗಿ ಹೇಳಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮಾರ್ಚ್ 21 ನ್ನು ಅಂತಾರಾಷ್ಟ್ರೀಯ ಅರಣ್ಯ ದಿನವೆಂದು ಘೋಷಿಸಿದೆ. ವಿಶ್ವಸಂಸ್ಥೆ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಅರಣ್ಯಗಳ ಕುರಿತಾದ ಕಿರು ಚಿತ್ರೋತ್ಸವಕ್ಕಾಗಿ ಈ ಚಿತ್ರವನ್ನು ಆಯ್ಕೆಯನ್ನು ಮಾಡಲಾಗಿದೆ. ಚಿತ್ರೋತ್ಸವದಲ್ಲಿ 38 ದೇಶಗಳಿಂದ 127 ಚಿತ್ರಗಳು ಭಾಗವಹಿಸಿದ್ದವು. ಅದರಲ್ಲಿ 21 ಚಿತ್ರಗಳು ಆಯ್ಕೆಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.