ಉತ್ಸವ: ಅತಿಥಿಗಳು ಎತ್ತಿನಗಾಡಿಯಲ್ಲಿ

Updated on: 

ಹಾಸನ: ಸರ್ಕಾರಿ ಕಲಾ ಕಾಲೇಜಿನ ಕಲಾ ವಿಭಾಗದ 1400 ವಿದ್ಯಾರ್ಥಿಗಳು ಕಲಾ ಉತ್ಸವ ಆಯೋಜಿಸಿದ್ದರು. ಉತ್ಸವಕ್ಕೆ ಮುಖ್ಯ ಅತಿಥಿಗಳನ್ನು ಕಾಲೇಜು ದ್ವಾರದಿಂದ ಎತ್ತಿನ ಗಾಡಿಯ ಮೂಲಕ ಕರೆದುಕೊಂಡು ಬರಲಾಯಿತು. ಪ್ರಾಂಶುಪಾಲ ಡಾ. ಐ.ಎಂ. ಮೋಹನ್ ಅವರು ಸಲಹಾ ಸಮಿತಿ ರಚಿಸಿದ್ದು, ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಆನಂದಸ್ವಾಮಿ ಹಾಗೂ ಪುಟ್ಟರಾಜು, ಚಂದ್ರೀಗೌಡ, ಚನ್ನಬಸಪ್ಪ ಇವರು ಉತ್ಸವದ ಮಾರ್ಗದರ್ಶಕರಾಗಿದ್ದರು. ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎನ್‌ಸಿಸಿಯಲ್ಲಿ 2, ಎನ್‌ಎಸ್‌ಎಸ್‌ನಲ್ಲಿ 2, ಕ್ರೀಡಾ ವಿಭಾಗ-2, ಸಾಂಸ್ಕೃತಿಕ ವಿಭಾಗ-2, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 1 ಹೀಗೆ 9 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ಪ್ರಾಂಶುಪಾಲ ಎಚ್.ವಿ. ಲಕ್ಷ್ಮೀನಾರಾಯಣ, ಪ್ರೊ. ಡಿ.ಜಿ. ಕೃಷ್ಣೇಗೌಡ, ಎ.ಸಿ. ರುಕ್ಮಾಂಗದ ದಂಪತಿಯನ್ನು  ವಿದ್ಯಾರ್ಥಿಗಳು ಸನ್ಮಾನಿಸಿದರು. ಕಲಾ ಕಾಲೇಜಿನ ಆವರಣದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ ಸುಮಾರು 2500 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮರೆಯಾಗುತ್ತಿರುವ ನಾಟಕ ಕಲೆ: ಮಂಜು
ಅರಕಲಗೂಡು: ಇಂದಿನ ಹೈಟೆಕ್ ಯುಗದಲ್ಲಿ ಪ್ರೋತ್ಸಾಹದ ಕೊರತೆಯಿಂದ ನಾಟಕ ಕಲೆ ಮರೆಯಾಗುತ್ತಿದೆ. ಸಮಾಜದ ಅಂಕು ಡೊಂಕು ತಿದ್ದುವ ನಾಟಕಗಳು ಗ್ರಾಮೀಣ ಪ್ರದೇಶಗಳಲ್ಲಿ  ಹೆಚ್ಚಾಗಿದ್ದು, ಇವಕ್ಕೆ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ ಎಂದು ಶಾಸಕ ಎ. ಮಂಜು ಹೇಳಿದರು. ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿರುವ ಪಟ್ಟಾಭಿರಾಮ ಗ್ರಾಮಾಂತರ ಪ್ರೌಢಶಾಲೆ ಅವರಣದಲ್ಲಿ ನಡೆದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು. ಜಿಪಂ ಮಾಜಿ ಸದಸ್ಯ ಶಂಕರ ಮಾತನಾಡಿದರು. ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ರಾಮನಾಥಪುರ ಗ್ರಾಪಂ ಅಧ್ಯಕ್ಷೆ ಸರಸ್ವತಿ ನಾಗೇಗೌಡ, ಹೋಬಳಿ ಅಧ್ಯಕ್ಷ ಜಿ.ಸಿ. ಮಂಜೇಗೌಡ, ಮುಖಂಡ  ಬಿ.ಎನ್. ಸಂಸ್ಥೆ ಕಾರ್ಯದರ್ಶಿ ಅನಂತ ಸುಬ್ಬರಾವ್, ಶಿರದನಹಳ್ಳಿ ಎಸ್.ಎಂ. ಮಲ್ಲೇಶ್, ಗಂಗೂರು ಕುಮಾರಸ್ವಾಮಿ, ಜಿ.ಸಿ. ಮಂಜೇಗೌಡ ಕೂಡಲೂರು ಮೋಗಣ್ಣ, ಬಸಪ್ಪ, ಗ್ರಾಪಂ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯ ಬಿ.ಜೆ. ರಾಮೇಗೌಡ ಮುಂತಾದವರು ಭಾಗವಹಿಸಿದ್ದರು. ಮೋಗಣ್ಣ ಸ್ವಾಗತಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com