ಹಾಸನ

ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ಅಗತ್ಯ: ಡಾ. ಜನಾರ್ದನ್

Published On :

ಚನ್ನರಾಯಪಟ್ಟಣ: ರಾಜ್ಯದಲ್ಲಿನ ಶೈಕ್ಷಣಿಕ ನೀತಿಯಲ್ಲಿ ತಾರತಮ್ಯವಾಗುತ್ತಿದ್ದು, ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ಅಗತ್ಯವಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ದನ ತಿಳಿಸಿದರು.
  ಶ್ರವಣಬೆಳಗೊಳದ ಬಾಹುಬಲಿ ತಾಂತ್ರಿಕ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಾರದ ಕಾರಣ ಬಡ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
 ಶಿಕ್ಷಣ ನೀತಿಯಲ್ಲಿ ಬಡವ ಶ್ರೀಮಂತರೆಂಬ ಭಾವನೆ ಮೂಡುತ್ತಿದ್ದು, ಶ್ರೀಮಂತರಿಗೆ ಹೈಟಕಕ್ಶಿಕ್ಷಣ ಬಡವರು ನೆಲದಲ್ಲಿ ಕುಳಿತು ಮೂಲ ಸೌಲಭ್ಯಗಳನ್ನು ಕಾಣದೆ ಶಿಕ್ಷಣ ಕಲಿಯಬೇಕಿದೆ ಎಂದು ತಿಳಿಸಿದರು.
 ಜಾತಿ ಅಸಮಾನತೆ ಹೋಗಲಾಡಿಸಲು ಕಳೆದ 200ವರ್ಷಗಳಿಂದ ಹೋರಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಮದಲ್ಲಿ ಅಸಮಾನತೆಯನ್ನು ತಡೆಯಲು ಬುದ್ದಿ ಜೀವಿಗಳು ಹೋರಾಟ ನಡೆಸಲು ಮುಂದಾಗುವ ಪರಿಸ್ಥಿತಿ ಬಂದಿದೆ. ಶ್ರೀಮಂತರಿಗೆ ಸಿಬಿಎಸ್ಸಿ ಮಾದರಿಯಾದರೆ, ಬಡವರಿಗೆ ಕನ್ನಡ ಮಾಧ್ಯಮವೇ ಗತಿಯಾಗಿದೆ. ಸರ್ವರಿಗೂ ಸಮಾನ ಹಾಗೂ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿ ಕಲಿಯುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.
 ಇತ್ತೀಚಿನ ದಿನಗಳಲ್ಲಿ ಕೇವಲ ವಿದ್ಯಾರ್ಥಿಗಳ ಅಂಕಪಟ್ಟಿಗೆ ಆದ್ಯತೆ ನೀಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳು ನೈತಿಕತೆಯನ್ನು ಕಲೆದುಕೊಳ್ಳುತ್ತಿದ್ದಾರೆ.  ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಕಡ್ಡಾಯವಾಗಬೇಕು ಎಂದು ತಿಳಿಸಿದರು.
ತಾಂತ್ರಿಕ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಎಲ್ಲಡೆ ಪರಿಚಯಿಸುವ ಕಾರ್ಯಕ್ರಮಕ್ಕಾಗಿ ಕನ್ನಡ ಭಾಷೆಯಲ್ಲಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ತಿಳಿಸಿದರು.
  ಕನ್ನಡಿಗರು ತಮಗೆ ಬೇಕಾದ ಎಲ್ಲಾ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಸುಲಭವಾಗಿ ತಿಳಿಯಲು ತಾಂತ್ರಿಕ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಸಾಮಾನ್ಯರೂ ಬಳಸುವ ಮಟ್ಟಕ್ಕೆ ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
 ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿದ್ದು, ಕನ್ನಡ ಕವಿಗಳು ರಚಿಸಿದ ಸಾಹಿತ್ಯವನ್ನು ಇಂಗ್ಲೀಷ್ಗೆ ತರ್ಜಿಮೆ ಮಾಡಿದ್ದರೆ ನೊಬೆಲ್ ಪ್ರಶಸ್ತಿಯೂ ಲಭಿಸುತ್ತಿತ್ತು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಜನಾರ್ದನ್ ತಿಳಿಸಿದರು.
ನೊಬೆಲ್ ಪ್ರಶಸ್ತಿ ಸಿಗಬೇಕು:
ಕನ್ನಡ ಸಾಹಿತ್ಯ ಹಿಂದಿನಿಂದಲೂ ಅತ್ಯಂತ ಹಿರಿಮಯನ್ನು ಉಳಿಸಿಕೊಂಡು ಬಂದಿದ್ದು, 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವುದಲ್ಲದೆ, ಕನ್ನಡ ಸಾಹಿತಿಗಳು ರಚಿಸಿರುವ ಸಾಹಿತ್ಯ ಇಂಗ್ಲೀಷ್ ಭಾಷೆಗೆ ತರ್ಜಿಮೆಯಾಗಿದ್ದರೆ ನೊಬಲ್ ಪ್ರಶಸ್ತಿಗೂ ಕನ್ನಡ ಸಾಹಿತಿಗಳು ಅರ್ಹತೆಯನ್ನು ಪಡೆಯುತ್ತಿದ್ದರು ಎಂದು ತಿಳಿಸಿದರು.
 ಜ್ಞಾನಪೀಠ ಪ್ರಶಸ್ತಿಯನ್ನು ಒಮ್ಮೆ ನೀಡಿದರೆ ಮುಂದಿನ ನಾಲ್ಕು ವರ್ಷದಲ್ಲಿ ಅದೇ ಭಾಷೆಗೆ ಮತ್ತೆ ಪ್ರಶಸ್ತಿ ನೀಡುವಂತಿಲ್ಲ ಎಂಬ ನಿಬಂದನೆಗಳನ್ನು ಹಾಕದಿದ್ದರೆ ಇನ್ನೂ 10ಕ್ಕೂ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವ ಅರ್ಹತೆಯನ್ನು ಕನ್ನಡದ ಸಾಹಿತಿಗಳು ಪಡೆಯುತ್ತಿದ್ದರು ಎಂದು ತಿಳಿಸಿದರು.
 ಪ್ರಾಂಶುಪಾಲ ಡಾ. ರಾಮೇಗೌಡ, ಕಾಲೇಜು ಡೀನ್ ರಾವನವರ್, ಕಾಲೇಜು ಎನ್ಎಸ್ಎಸ್ ಅಧಿಕಾರಿ ಶರ್ಮ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಕಾಂತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.