ಹಾಸನ

ಜೀವನದಲ್ಲಿ ಜಿಗುಪ್ಸೆ: ಇಬ್ಬರು ಆತ್ಮಹತ್ಯೆ

Published On :

ಚನ್ನರಾಯಪಟ್ಟಣ: ಜೀವನದಲ್ಲಿ ಜಿಗುಪ್ಸೆಗೊಂಡು ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳು ನೇಣಿಗೆ ಶರಣಾದರೆ ಮತ್ತೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.
 ತಾಲೂಕಿನ ಕುಂಬೇನಹಳ್ಳಿ ಗ್ರಾಮದ ರವಿ (40) ಜೀವನದಲ್ಲಿ ಜಿಗುಪ್ಸೆಗೊಂಡು ಪಟ್ಟಣದ ಬಿ.ಎಂ ರಸ್ತೆಯಲ್ಲಿರುವ ಭೂಮಿಕಾ ಲಾಡ್ಜ್‌ನಲ್ಲಿ ಫ್ಯಾನ್ ಪಕ್ಕದಲ್ಲಿರುವ ಹುಕ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.
  ನ.11ರಂದು ಲಾಡ್ಜ್‌ನಲ್ಲಿ ರೂಮು ಪಡೆದ ರವಿ 13ನೇ ದಿನಾಂಕದವರೆಗೆ ಬಾಗಿಲು ತೆರೆಯದಿದ್ದಾಗ ರೂಮಿನಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಸ್ವಾಗತಕಾರ ಬಾಗಿಲು ಒಡೆದು ಪರಿಶೀಲಿಸಿದಾಗ ನೇಣು ಹಾಕಿಕೊಂಡು ಮೃತಪಟ್ಟಿರುವುದು ತಿಳಿದು ಬಂದಿದೆ. ತಕ್ಷಣವೇ ಪಟ್ಟಣ ಪೋಲಿಸರಿಗೆ ದೂರು ನೀಡಿದ್ದಾರೆ.
  ಮೃತ ರವಿ ಬೆಂಗಳೂರಿನಲ್ಲಿ ಬ್ಯಾಟರಿ ಅಂಗಡಿಯಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದು, ಸ್ವಗ್ರಾಮ ಕುಂಬೇನಹಳ್ಳಿಗೆ ಬಂದು ಚನ್ನರಾಯಪಟ್ಟಣಕ್ಕೆ ಹೋಗಿ ಬರುವುದಾಗಿ ತಿಳಿಸಿ ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿದ್ದಾನೆ.
  ಮತ್ತೊಂದು ಪ್ರಕರಣದಲ್ಲಿ ಪಟ್ಟಣದಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಗೌಡಗೆರೆಯ ಸತೀಶ್ (40) ಕಾಳೇನಹಳ್ಳಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾಂಸಾರಿಕವಾಗಿ ಬೇಸರಗೊಂಡ ಸತೀಶ್ 13ರಾತ್ರಿ ತನ್ನ ಮನೆಯ ಮರದ ತೀರಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸತೀಶ್‌ಗೆ ಆಗಾಗ ಬರುತ್ತಿದ್ದ ಮೂಚೆರೋಗದ ನಡುವೆ ಮದ್ಯಸೇವನೆ ಮಾಡುತ್ತಿದ್ದು, ಇದನ್ನು ತಿಳಿದ ಅವರ ಕುಟುಂಬದವರು ಮದ್ಯ ಸೇವನೆ ಮಾಡದಂತೆ ಔಷಧಿ ನೀಡಿದ್ದರಿಂದ ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ.
 ತಾಲೂಕಿನ ಕಲಸಿಂದ ಗ್ರಾಮದ ಸ್ನೇಹಿತನ ಮನೆಗೆ ಬಂದಿದ್ದ ಭಾರತ ವಾಯುಪಡೆಯ ಚೌಕಿದಾರ ಮುರುಘನ್(46) ಕಲಸಿಂದ ಗ್ರಾಮದ ತನ್ನ ಸ್ನೇಹಿತನ ಮನೆಗೆ ಬಂದಿದ್ದ ಸಮಯದಲ್ಲಿ ಏಳನೀರು ಕುಡಿಯಲು ಆತನ ಸ್ನೇಹಿತರು ನೀಡಿದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆತರುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ.
  ಮುರುಘನ್ ಬೆಂಗಳೂರಿನ ಮಾಗಡಿ ರಸ್ತೆಯ ನಿವಾಸಿ ಎಂದು ಹೇಳಲಾಗಿದೆ. ಮೂರು ಪ್ರಕರಣಗಳನ್ನು ಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದು ಕೊಂಡಿದ್ದಾರೆ.
ಟ್ರ್ಯಾಕ್ಟರ್ ತೊಳೆಯಲು ಹೋದ ಯುವಕ ನೀರುಪಾಲು
ಆಲೂರು: ಸ್ನೇಹಿತನೊಂದಿಗೆ ಶಂಖತೀರ್ಥ ನದಿಯಲ್ಲಿ ಟ್ರ್ಯಾಕ್ಟರ್ ತೊಳೆಯಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಹಾಸನ ತಾಲೂಕಿನ ಮರ್ಕುಲಿ ಗ್ರಾಮದ ಕುಮಾರ್ ಎಂಬುವರ ಪುತ್ರ ಸಂಜು(20) ಮೃತಪಟ್ಟ ದುರ್ದೈವಿ. ನದಿಯಿಂದ ಟ್ರ್ಯಾಕ್ಟರ್ ಮೇಲಕ್ಕೆ ಚಲಾಯಿಸುವಾಗ ಉರುಳಿ ಬಿದ್ದ ಪರಿಣಾಮ ಆತ ಮೃತಪಟ್ಟಿದ್ದಾನೆ. ಈತ ಸಿಂಗಾಪುರ ಗ್ರಾಮದಲ್ಲಿರುವ ಅಜ್ಜಿಯ ಮನೆಗೆ ತನ್ನ ಸ್ನೇಹಿತನೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಬಂದಿದ್ದ ಎನ್ನಲಾಗಿದೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ:ಒಬ್ಬ ಬಂಧನ
ಹಾಸನ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಸಕಲೇಶಪುರದಲ್ಲಿ ಮಂಗಳವಾರ ನಡೆದಿದೆ.
  ಸಕಲೇಶಪುರ ತಾ. ಯಸಳೂರು ಹೋಬಳಿಯ ಕುಂಬ್ರಹಳ್ಳಿ ಗ್ರಾಮದ ಮಾದಪ್ಪ (60) ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಯಸಳೂರು ಠಾಣೆ ಪಿ ಎಸ್‌ಐ ಎಚ್.ಬಿ.ಸಿದ್ದೇಶ್ಝ್‌ಣ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಮದ್ಯ ಮಾರಾಟ ಮಾಡುತ್ತಿದ್ದವ್ಯಕ್ತಿಯನ್ನು   ಬಂಧಿಸಿದರು.
 ಹಾಗೂ ಮದ್ಯ ಮಾರಾಟಕ್ಕಿಟ್ಟಿದ್ದ  1352 ರು. ಬೆಲೆಯ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.