ಹಾಸನ

ಇಚ್ಛಾ ಮರಣಕ್ಕೆ ಅನುಮತಿ: ರಾಜ್ಯಪಾಲರಿಗೆ ಪತ್ರ

Published On :

ಕನ್ನಡಪ್ರಭ ವಾರ್ತೆ ಸಕಲೇಶಪುರ ನ. 14
ಅನಾರೋಗ್ಯ ಹಾಗೂ ಆಸರೆ ಇಲ್ಲದ ಬದುಕಿನಿಂದಾಗಿ ಬೇಸತ್ತಿರುವ ವ್ಯಕ್ತಿಯೊಬ್ಬರು ತನಗೆ ಹಾಗೂ ತನ್ನ ಮಗಳಿಗೆ ಇಚ್ಛಾಮರಣ ದಯಪಾಲಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
 ಪಟ್ಟಣದ ಮೆಹಮೂದ್ (52) ಎಂಬುವರೇ ರಾಜ್ಯಪಾಲರಿಗೆ ಪತ್ರ ಬರೆದಿರುವ ವ್ಯಕ್ತಿ. ಇಲ್ಲಿನ ಸುಭಾಷ್ ಮೈದಾನದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಇವರು 10 ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದಾರೆ.
ಹೆಚ್ಚಿನ ಅಸಿಡಿಟಿ ಪರಿಣಾಮ ಮೈಯೆಲ್ಲ ಹುಣ್ಣಿನಿಂದ ಬಾಧಿತರಾಗಿದ್ದು, ಕಳೆದ 5 ವರ್ಷಗಳಿಂದ ಒಂದು ಕಣ್ಣಿನ ದೃಷ್ಟಿ ಕೂಡಾ ಕಳೆದುಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಕಣ್ಣಿನಲ್ಲೂ ಮಂಜು ಆವರಿಸಿದೆ.
 ನಾಲ್ಕು ವರ್ಷದ ಪುಟ್ಟ ಮಗುವಿನಂತಿರುವ ತನ್ನ 20 ವರ್ಷದ ಹೆಣ್ಣು ಮಗಳು ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು ಮಲಗಿರುವ ಸ್ಥಳದಲ್ಲೇ  ನಿತ್ಯಕರ್ಮಗಳನ್ನು ಮಾಡಿಕೊಳ್ಳುತ್ತಾಳೆ. ಇದನ್ನೆಲ್ಲ ಸ್ವಚ್ಛ ಮಾಡಬೇಕಾಗಿರುವುದು ಹಾಗೂ ಆಹಾರ ತಿನ್ನಿಸ ಬೇಕಾಗಿದೆ.  
ಹಿಂದೆ ಸುಭಾಷ್ ಮೈದಾನದಲ್ಲಿ ಗ್ಯಾರೇಜ್ ನಡೆಸಲು ಪುರಸಭೆ ನೆಲಬಾಡಿಗೆ ಆಧಾರದಲ್ಲಿ ನೀಡಿರುವ ಸ್ಥಳದಲ್ಲೇ  ಸಣ್ಣದೊಂದು ಮನೆ ಮಾಡಿಕೊಂಡು ಕೂಲಿ ಮಾಡಿಕೊಂಡು ಜೀವಿಸುತ್ತಿದ್ದಾರೆ. ಕಣ್ಣು ಕಾಣದ ಕಾರಣ ಕೆಲಸಮಾಡಲು ಸಾಧ್ಯವಿಲ್ಲ. ಅಲ್ಲದೆ  ಅನಾರೋಗ್ಯಕ್ಕೆ ತುತ್ತಾಗಿರುವ ಮಗಳನ್ನು ನೊಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತನಗೆ ಇಚ್ಛಾಮರಣ ನೀಡ ಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಮೆಹಮೂದ್, ಕಣು ್ಣ ಕಾಣುತ್ತಿದ್ದ ಸಂದರ್ಭದಲ್ಲಿ ಪುಟ್‌ಪಾತ್‌ನಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿದ್ದೆ. ಈಗ ದೃಷ್ಟಿ ಹೀನತೆಯಿಂದ ಮನೆ ಬಿಟ್ಟು ಹೊರಹೋಗುವುದು ಕಷ್ಟಕರವಾಗಿದೆ. ಮೈಯಲ್ಲಿ ಮೂಡಿರುವ ಹುಣ್ಣಿನಿಂದಾಗಿ ನನ್ನೊಂದಿಗೆ ಬೆರೆಯಲು ಇತರರು ಅಸಹ್ಯಪಡುತ್ತಾರೆ.
  ನನ್ನ ಈ ಸ್ಥಿತಿ ಹಾಗೂ ಮಗಳ ಅನಾರೋಗ್ಯದಿಂದ ಬಂಧು-ಬಾಂಧವರು ದೂರವಾಗಿದ್ದಾರೆ. ನಾನು ಮರಣಿಸಿದರೆ ಮಗಳನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದ್ದರಿಂದ ನಮ್ಮಿಬ್ಬರಿಗೆ ದಯಾ ಮರಣ ನೀಡುವಂತೆ ವಿನಂತಿಸಿ ಕೊಂಡಿರುವುದಾಗಿ ತಿಳಿಸಿದ್ದಾರೆ.

ಮಾಹಿತಿ ಕೇಂದ್ರ ಇಂದು ಆರಂಭ
ಹಾಸನ:
ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಹಾಸನದಲ್ಲಿ  ಮಾಹಿತಿ ಕೇಂದ್ರ 15 ರಿಂದ  ಪ್ರಾರಂಭವಾಗುತ್ತಿದೆ ಎಂದು ಮಾರ್ಕೆಟಿಂಗ್ ಮುಖ್ಯಸ್ಥ ಆರ್. ಅಶೋಕ್ ಅವರು ತಿಳಿಸಿದ್ದಾರೆ.   ಮೈಸೂರು ಆಸ್ಪತ್ರೆಯ ತಜ್ಞ ವೈದ್ಯರು ನಿಯಮಿತವಾಗಿ ಪ್ರತಿ ವಾರ ಹಾಸನದ ಮಾಹಿತಿ ಕೇಂದ್ರಕ್ಕೆ  ಭೇಟಿ ನೀಡುತ್ತಾರೆ. ಇದರಿಂದ ಹಾಸನದ ನಿವಾಸಿಗಳು ಮೈಸೂರು ತಜ್ಞ ವೈದ್ಯರೊಂದಿಗೆ ಸಮಾಲೋಚನೆಯನ್ನು  ತಮ್ಮ ಊರಿನಲ್ಲೇ  ಪಡೆಯಬಹುದು.    ನೂತನ ಮಾಹಿತಿ ಕೇಂದ್ರವು ಹಾಸನದ ಶಂಕರಮಠ ರಸ್ತೆಯ ಆರ್‌ಕೆ ಆರ್ಕೆಡ್‌ನಲ್ಲಿ ಪ್ರಾರಂಭವಾಗಲಿದೆ.  ಹೆಚ್ಚಿನ ಮಾಹಿತಿಗಾಗಿ ಮೊ. 9620325258 ಸಂಪರ್ಕಿಸಲು  ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.