ಚಿತ್ರ ಬರೆಯುವ ಸ್ಪರ್ಧೆ ಇಂದು
ಚನ್ನರಾಯಪಟ್ಟಣ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಿರ್ಮಲ ಕಾನ್ವೆಂಟ್ನಲ್ಲಿ ನ.17ರಂದು ಬೆಳಗ್ಗೆ 10.30 ಕ್ಕೆ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬರೆಯುವ ಸ್ಪರ್ಧೆ ನಡೆಯಲಿದೆ. ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಉದ್ಘಾಟಿಸುವರು. ಅಧ್ಯಕ್ಷತೆ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಚ್. ಎಂ. ಗೌಡಯ್ಯ ವಹಿಸುವರು. ಅತಿಥಿಗಳಾಗಿ ಚಿತ್ರಕಲಾ ಶಿಕ್ಷಕ ಶಿವಶಂಕರಪ್ಪ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಸಿ.ಎಸ್.ನವೀನ್ ಇತರರುಭಾಗವಹಿಸುವರು.
ಅಂಗನವಾಡಿಯಲ್ಲಿ ಅಕ್ಕಿ, ಬೇಳೆ ಕಳವು
ಸಕಲೇಶಪುರ: ತಾಲೂಕಿನ ಕೆಳಗಳಲೇ ಗ್ರಾಮದ ಅಂಗನವಾಡಿಯಲ್ಲಿ ಇತ್ತೀಚೆಗೆ ಕಳ್ಳತನ ನಡೆದಿದೆ. ಅಂಗನವಾಡಿ ಹಿಂಬದಿಯ ಕಿಟಕಿ ಸರಳುಗಳನ್ನು ಮುರಿದು ಬೆಡ್ಶೀಟ್, ಪಾತ್ರೆಗಳು, ಅಕ್ಕಿ, ಬೇಳೆ ಕಾಳುಗಳನ್ನು ಕಳವು ಮಾಡಲಾಗಿದೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಯುವತಿ ಅಪಹರಣ
ಜಾವಗಲ್: ಇಲ್ಲಿನ ಜನತಾ ಬಡಾವಣೆಯ ಸೀಮಾಭಾನು (19) ಎಂಬ ಯುವತಿಯನ್ನು ಇತ್ತೀಚೆಗೆ ಅಪಹರಿಸಿರುವ ಬಗ್ಗೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ಸೀಮಾಭಾನು ಮನೆಯಲ್ಲಿದ್ದ ವೇಳೆ ಅದೇ ಬಡಾವಣೆಯ ನಿವಾಸಿಗಳಿಬ್ಬರು ಮೋಟಾರ್ ಸೈಕಲ್ನಲ್ಲಿ ಬಂದು ಸೀಮಾಭಾನುರನ್ನು ಬಲವಂತವಾಗಿ ಕೂರಿಸಿಕೊಂಡು ಅಪಹರಿಸಿಕೊಂಡು ಹೋಗಿದ್ದಾರೆ. ಬಾಣಾವರದವರೆಗೂ ಹಿಂಬಾಲಿಸಿಕೊಂಡು ಹೋದರೂ ಸಿಗದೆ ಹಾಗೂ ಎಲ್ಲಾ ಕಡೆ ಹುಡುಕಿ ಎಲ್ಲೂ ಸಿಗದೆ ಮಂಗಳವಾರ ತಡವಾಗಿ ಹುಡುಗಿಯ ಅಣ್ಣ ರಫೀಕ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಜೂಜಾಟ: 9 ಬಂಧನ, ನಗದು ವಶ
ಆಲೂರು: ಅಕ್ರಮವಾಗಿ ಜೂಜಾಡುತ್ತಿದ್ದ 9 ಮಂದಿಯನ್ನು ಬಂಧಿಸಿದ್ದು, 9,220 ರು.ಗಳನ್ನು ವಶಪಡಿಸಿಕೊಂಡಿರುವ ಘಟನೆ ಆಲೂರಿನಲ್ಲಿ ಶುಕ್ರವಾರ ನಡೆದಿದೆ. ಪಟ್ಟಣದ ಯುವರಾಜ (24), ನಜೀಂ (25), ಹಳೇ ಸಂತೇಬೀದಿಯ ಲೋಹಿತ (21), ಕೊನೆಪೇಟೆ ಆನಂದ (24), ಹಳೇಸಂತೇಬೀದಿಯ ವಿಕಾಸ್ (23), ಆಶಾ ಬಡಾವಣೆಯ ಕಾಂತರಾಜ (24), ಹುಣಸವಳ್ಳಿಯ ಪ್ರಕಾಶ (34), ಆಶಾ ಬಡಾವಣೆಯ ಸಂತೋಷ್ (25) ಮತ್ತು ದೇವಸ್ಥಾನ ಹಿಂಭಾಗದ ಯುವರಾಜ (34) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 9,220 ರು.ನಗದು ವಶಪಡಿಸಿಕೊಂಡಿದ್ದಾರೆ. ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆ ಭರವಸೆ ಈಡೇರಿಸಲು ಶಕ್ತಿಮೀರಿ ಶ್ರಮ: ಶಾಸಕ ಕುಮಾರಸ್ವಾಮಿ
ಸಕಲೇಶಪುರ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲು ಶಕ್ತಿಮೀರಿ ಶ್ರಮಿಸುತ್ತಿರುವುದಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ. ತಾಲೂಕಿನ ಬೈಕೆರೆ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡನಾಗರ ಗ್ರಾಮಸ್ಥರು ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು ಈ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದ್ದರು. ಆದರಂತೆ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ 7 ಲಕ್ಷ ರು. ವೆಚ್ಚದಲ್ಲಿ ತೆರದಬಾವಿ ಹಾಗೂ ಮೋಟರ್ ವ್ಯವಸ್ಥೆಮಾಡಲಾಗಿದೆ. ಗ್ರಾಮದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ 4 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

