ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ತುರ್ತುಸಭೆ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ನ. 16
ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಶನಿವಾರ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಮಂಜುನಾಥ್ ತುರ್ತು ಸಭೆ ಕರೆದಿದ್ದರು.
ಪಟ್ಟಣದಲ್ಲಿ ಕಳೆದು 20 ವರ್ಷಗಳಿಂದ ಗೋಮಾಂಸ ಅಂಗಡಿಯನ್ನು ತೆರೆದಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಇಷ್ಟು ದಿನ ನಡೆಸಿಕೊಂಡು ಬಂದಿವೆ. ಈ ಸ್ಥಳದಲ್ಲಿ ಗ್ರಾಮದೇವತೆ ವಳಗೇರಮ್ಮ ಅನೇಕ ದೇವಾಲಯವಿದ್ದು, ಶಾಲೆ ಹಾಗೂ ಪಟ್ಟಣದಿಂದ ಬಾಗೂರು ರಸ್ತೆಯ ಮುಖ್ಯ ಬೀದಿಗಳಾಗಿದ್ದು ಈ ಸ್ಥಳಗಳಲ್ಲಿ ಮಾರಾಟ ಮಾಡುವುದು ಸರಿಯಲ್ಲ ಎಂದು ಪುರಸಭಾ ಅಧ್ಯಕ್ಷರಿಗೆ ಈ ಅಂಗಡಿಗಳನ್ನು ತೆರವುಗೊಳಿಸಲು ನಾಲ್ಕು ತಿಂಗಳ ಹಿಂದೆ ಪುರಸಭೆ ಅಧಿಕಾರಿಗೆ ಅರ್ಜಿ ನೀಡಿದ್ದು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದರೆ ಶುಕ್ರವಾರ ಮೊಹರಂ ಕಡೆ ದಿನದಂದು ಪುರಸಭಾ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಗಳು ಸ್ಥಳಕ್ಕೆ ತೆರಳಲು ಕಾರಣವೇನು ಎಂದು ಸದಸ್ಯ ಅನ್ಸರ್ಬೇಗ್ ಅಧ್ಯಕ್ಷರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ನನಗೆ ಹಾಗೂ ಪುರಸಭಾ ಕಚೇರಿಗೆ ನಗರ ಠಾಣೆಯಿಂದ ದೂರು ಬಂದಿದ್ದು ಎಷ್ಟು ಜನ ತಮ್ಮ ಪುರಸಭೆಯಲ್ಲಿ ಗೋಮಾಂಸದ ಅಂಗಡಿ ತೆರೆಯಲು ಪರವಾನಗಿಯನ್ನು ಪಡೆದುಕೊಂಡಿದ್ದಾರೆ, ಅಕ್ರಮವಾಗಿ ಎಷ್ಟು ಅಂಗಡಿಗಳಿವೆ ಎಂಬ ಮಾಹಿತಿಯನ್ನು ತುರ್ತಾಗಿ ತಿಳಿಸಬೇಕೆಂಬ ಪತ್ರ ಬಂದಿರುವ ಮೇರೆಗೆ ಸ್ಥಳ ಪರಿಶೀಲನೆಗೆ ಪುರಸಭೆ ಅಧಿಕಾರಿಗಳು ಮತ್ತು ನಾವು ಸ್ಥಳಕ್ಕೆ ಭೇಟಿ ನೀಡಿದೆವು ಎಂದರು. ಕೂಡಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ಮಾಡಿದವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಪುರಸಭಾ ಸದಸ್ಯ ಶಶಿಧರ್ ಒತ್ತಾಯಿಸಿದರು. ಪುರಸಭಾ ಸದಸ್ಯ ನಾಗರಾಜ್, ಗೋಪಾಲಕೃಷ್ಣ, ನವೀನ್, ಮಂಜುನಾಥ್, ಪ್ರವೀಣ್ಕುಮಾರ್ ಈ ವಿಚಾರವಾಗಿ ರಾಜಕೀಯ ಮಾಡದೇ ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಎಲ್ಲಾ ಸದಸ್ಯರು ನಗರ ಠಾಣೆಗೆ ದೂರು ನಿಡೋಣ ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜೆ.ಸುರೇಶ್, ಉಪಾಧ್ಯಕ್ಷೆ ಗೀತಾದಿನೇಶ್, ದೇವಯ್ಯ ಇದ್ದರು.
ನೌಕರರ ಧರಣಿ
ಚನ್ನರಾಯಪಟ್ಟಣ: ಪುರಸಭಾ ಮುಖ್ಯಾಧಿಕಾರಿ ಮೇಲೆ ಹಲ್ಲೆ ಖಂಡಿಸಿ ಶನಿವಾರ ಪುರಸಭಾ ನೌಕರರು 2 ಗಂಟೆಗಳ ಕಾಲ ಕಚೇರಿ ಎದುರು ಧರಣಿ ನಡೆಸಿದರು. ಪೌರ ಕಾರ್ಮಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ ಎಂದಿನಂತೆ ಪಟ್ಟಣದಲ್ಲಿ ಸ್ವಚ್ಚತೆ ಕುಡಿಯುವ ನೀರು ಇತ್ಯಾದಿ ಕಾರ್ಯವನ್ನು ನೌಕರರು ನೆರವೇರಿಸಿದ್ದು ಹಲ್ಲೆ ಮಾಡಿದವರನ್ನು ಕೂಡಲೆ ಬಂಧಿಸದಿದ್ದರೆ ಸೋಮವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಯಾವುದೇ ಕೆಲಸ ನಿರ್ವಹಿಸದೆ ಧರಣಿ ಕೂರಲಾಗುವುದು ಎಂದು ಎಚ್ಚರಿಸಿದರು. ಎಲ್ಲಾ ತಾಲೂಕಿನ ಪೌರನೌಕರರ ಸಂಘದ ಅಧ್ಯಕ್ಷರು ಒಟ್ಟಾರೆ ಸೇರಿ ತಹಸಿಲ್ದಾರ್ ಡಾ.ಎಚ್.ಎಲ್.ನಾಗರಾಜ್ ಹಾಗೂ ನಗರ ಠಾಣೆಗೆ ದೂರು ಸಲ್ಲಿಸಿದರು.
ನೌಕರರಾದ ವೆಂಕಟೇಶ್, ಜಯರಾಂ, ಶಾರದಮ್ಮ, ಕಿಟ್ಟಣ್ಣ, ಪ್ರಸಾದಿ, ವೆಂಕಟೇಶ್, ಪಾಪಣ್ಣ, ನಾಗೇಶ್, ಮಂಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

