ಹಾಸನ

ಎಪಿಎಂಸಿ ಧೋರಣೆ ಖಂಡಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಬೇಲೂರು ನ.18
ರೈತರ ಮಾರುಕಟ್ಟೆ ಬಗ್ಗೆ ಎಪಿಎಂಸಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದು,  ಕೋಟ್ಯಂತರ ರುಪಾಯಿ ಆದಾಯ ಸೋರಿಕೆಯಾಗುತ್ತಿದ್ದರೂ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ತಾಲೂಕು ರೈತ ಸಂಘದ ಮುಖಂಡರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸೋಮವಾರ ಪ್ರವಾಸಿ ಮಂದಿರದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಹೊರಟು ಎಪಿಎಂಪಿಸಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಿದರಲ್ಲದೆ ಬೀಗ ಹಾಕಲುಮುಂದಾದರು.
ರೈತಸಂಘದ ಸಂಘಟನಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ವರ್ತಕರೊಂದಿಗೆ ಶಾಮೀಲಾಗಿ ಹಳೆ ತೂಕದ ಯಂತ್ರ ಬಳಸಲು ಪ್ರೋತ್ಸಾಹ ನೀಡಿ ಎಪಿಎಂಸಿಗೆ ಕೋಟ್ಯಾಂತರು ರು. ಆದಾಯ ತಪ್ಪಿಸುತ್ತಿದ್ದಾರೆ.  
ಹಳೆಯಂತ್ರವನ್ನು ಬಳಸಿಕೊಂಡು ತೂಕದಲ್ಲಿ ಮೋಸ ಮಾಡುತ್ತಿರುವುದು ಒಂದು ದಂಧೆಯಾಗಿ ಪರಿಣಮಿಸಿದ್ದು,  ಇದರಿಂದ ಎಪಿಎಂಸಿಗೆ ಕೋಟ್ಯಾಂತರು ರು ನಷ್ಟವಾಗುತ್ತಿದೆ. 1 ವಾರದ ಹಿಂದೆಯೇ ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕುವ ಬಗ್ಗೆ ಪತ್ರಿಕಾ ಹೇಳಿಕೆ ಹಾಗೂ ಕರಪತ್ರ ಮುದ್ರಿಸಿ ಪ್ರಚಾರ ಪಡಿಸಿದ್ದರೂ ಇಂದು ಬೇಕಂತಲೇ ಎಪಿಎಂಸಿ ಅಧ್ಯಕ್ಷರು, ಆಡಳಿತ ಮಂಡಳಿಯವರು ಹಾಗೂ ಅಧಿಕಾರಿಗಳು ನಾಪತ್ತೆಯಾಗಿದ್ದು, ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.  ರೈತಸಂಘದ ಕಾರ್ಯದರ್ಶಿ ಭೋಗಮಲ್ಲೇಶ್ ಮಾತನಾಡಿದರು. ಸ್ಥಳದಲ್ಲಿದ್ದ ತಹಸೀಲ್ದಾರ್ ಜಗದೀಶ್ ಮಾತನಾಡಿ, ಕಾನೂನು ಬಿಟ್ಟು ಹೋರಾಟ ಮಾಡುವ ಬೆದರಿಕೆ ಒಡ್ಡುವದು ತಪ್ಪಾಗಿದ್ದು, ಯಾವುದೇ ಹೋರಾಟ ಕಾನೂನಿ ಚೌಕಟ್ಟನ್ನು ಮೀರದಂತೆ ಇರಬೇಕು. ವರ್ತಕರ ಹಾಗೂ ಎಪಿಎಂಸಿ ಸಮಿತಿಯ ಸಭೆ ಕರೆದು ರೈತ ಸಂಘದ ಮುಖ್ಯ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ನೀರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ  ಬಸವೇಗೌಡ, ಪುಪ್ಪೇಗೌಡ, ಪದ್ಮಪ್ರಭು, ವಿರೂಪಾಕ್ಷ, ಅಣ್ಣೇಗೌಡ. ಪ್ರಗತಿಪರ ಸಂಘಟನೆ ಅಧ್ಯಕ್ಷ ಕೆ.ಸುದರ್ಶನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.