ಹಾಸನ

ಶ್ರವಣಬೆಳಗೊಳ ಜೈನ ಕ್ಷೇತ್ರಕ್ಕೆ ಸೋಂದಾ ಸ್ವಾದಿ ದಿಗಂಬರ ಮಠದ ಭಟ್ಟಾಕಲಂಕ ಸ್ವಾಮೀಜಿ ಭೇಟಿ

Published On :

ಚನ್ನರಾಯಪಟ್ಟಣ: ಉತ್ತರ ಕನ್ನಡ ಜಿಲ್ಲೆಯ ಸೋಂದಾ  ಸ್ವಾದಿ ದಿಂಗಂಬರ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಇದೇ ಪ್ರಥಮ ಬಾರಿಗೆ ಶ್ರವಣಬೆಳಗೊಳ ಜೈನ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸಕಲ ಗೌರವಗಳೊಂದಿಗೆ ಸ್ವಾಗತಿಸಲಾಯಿತು.
ಸ್ವಾಮೀಜಿ ಅವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಮಠಕ್ಕೆ ಪ್ರಥಮ ಬಾರಿಗೆ ಆಗಮಿಸುವ ಸ್ವಾಮೀಜಿ ಅವರನ್ನು ಪಲ್ಲಕ್ಕಿಯಲ್ಲಿ ಕರೆತರುವ ಪ್ರತೀತಿಯನ್ನು ಮಠ ಹೊಂದಿರುವ ಹಿನ್ನಲೆಯಲ್ಲಿ ಸ್ವಾಮೀಜಿ ಅವರನ್ನು ಜೈನ ಧರ್ಮಿಯರು ಅಡ್ಡಪಲ್ಲಕ್ಕಿಯಲ್ಲಿ ವಿವಿಧ ವಾದ್ಯಗಳೊಂದಿಗೆ ಮಠದ ಬಳಿಗೆ ಕರೆ ತಂದರು.
ಪ್ರಾಥಮಿಕ ಶಿಕ್ಷಣವನ್ನು ಕ್ಷೇತ್ರದಲ್ಲಿ ಮುಗಿಸಿ ನಂತರದಲ್ಲಿ ತಮಿಳುನಾಡಿನ ಹರಹಂತಗಿರಿಯಲ್ಲಿ ಶಿಕ್ಷಣ ಹಾಗೂ ವಿದ್ವತ್ ಪಾಂಡಿತ್ಯ ಪಡೆದು ಕಳೆದ 10ತಿಂಗಳ ಹಿಂದಷ್‌ಠೇ ಉತ್ತರ  ಕನ್ನಡ ಜಿಲ್ಲೆಯ ಸೊಂದಾ  ಸ್ವಾದಿ ದಿಂಗಂಬರ ಜೈನ ಮಠದ  ಕ್ಷೇತ್ರದ ಚಾರುಕೀರ್ತಿ ಭಟ್ಚಾರಕ ಸ್ವಾಮೀಜಿ ಅವರು ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಆನಂತರದಲ್ಲಿ ಮಠದ ವತಿಯಿಂದ ಪಾದಪೂಜೆ ನಡೆಸಿದ ನಂತರ  ಧವಲಾ ಮಹಾಧವಲ ಗ್ರಂಥಗಳು ನೀಡಿ ಗೌರವಿಸಲಾಯಿತು.  ಆತ್ಮೀಯವಾಗಿ ಆಹ್ವಾನಿಸಲಾಯಿತು.
ಸಂದರ್ಭದಲ್ಲಿ ಸನ್ಮಾನ ಸಮಾರಂಭದಲ್ಲಿ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ  ಆಶೀರ್ವಚನ ನೀಡಿ, ಪ್ರಾಚೀನ ಪರಂಪರೆ ಉಳಿಸಿ ಬೆಳಸಿಕೊಂಡು ಹೋಗುವುದರ ಜತೆಗೆ ಬಡವರಿಗೆ ಶಿಕ್ಷಣ ನೀಡುವುದು ಮಠಗಳ ಜವಬ್ದಾರಿಯಾಗಿದ್ದು, ಅವುಗಳನ್ನು ಮಠಾದೀಶರುಗಳು ಮಾಡುವತ್ತಾ ಮುಂದಾಗಬೇಕು ಎಂದು ತಿಳಿಸಿದರು.  ಇಂದು ಪಠ್ಯಪುಸ್ತಕದಲ್ಲಿನ ವಿಷಯವನ್ನು ತಿಳಿದು ಕೇವಲ ಹಣಗಳಿಸುವುದನ್ನು ಗುರಿಯಾಗಿಸುವುದರ ಜತೆ ಲೌಕಿಕ ಶಿಕ್ಷಣಕ್ಕೆ ಮಠಗಳು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ತಮಿಳುನಾಡಿನ ಹರಹಂತಗಿರಿ ಧವಲಕೀರ್ತಿ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕುಡಿವ ನೀರಿಗೆ ಪರದಾಟ: ಸಾರ್ವಜನಿಕರ ದೂರು
ಕ.ಪ್ರ.ವಾರ್ತೆ ರಾಮನಾಥಪುರ ನ.18

ಹಲವು ವರ್ಷಗಳಿಂದ ಪಟ್ಟಣದಲ್ಲಿ ಕುಡಿಯುವ ನೀರು ಶುದ್ಧೀಕರಣ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ.
ಹೀಗಾಗಿ ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಶುದ್ದ ಕುಡಿಯುವ ನೀರು ಪೂರೈಸಲು ಸಾಧ್ಯವಾಗದೆ, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.    
ಕಾವೇರಿ ನದಿ ತಟದಲ್ಲಿರುವ ಪಂಪ್‌ಹೌಸ್ ಕಟ್ಟಡ ಹಳೆಯದಾಗಿದ್ದು, ಕಟ್ಟಡದ ಸುತ್ತ ಮರ ಗೀಡ ಮಣ್ಣು ತುಂಬಿಕೊಂಡು ಕೊಚ್ಚೆ ನೀರು ಕುಡಿಯುವ ನೀರು ಸರಬರಾಜು ಅಗುತ್ತಿದೆ. ಕಾವೇರಿ ನದಿ ತಟದಲ್ಲಿ ನಿರ್ಮಿಸಿರುವ ಪಂಪ್‌ಹೌಸ್ ಕಟ್ಟಡ ಹಳೆಯದಾಗಿದ್ದು,  ಶಿಥಿಲಗೊಂಡಿದೆ. ಓಬಿರಾಯನ ಕಾಲದ ಪಂಪ್‌ಹೌಸ್‌ಗೆ ಅಳವಡಿಸಿರುವ ಮೋಟರ್‌ಗಳು ಕೂಡ ಅಗಾಗ್ಗೆ ಕೆಟ್ಟು ನಿಲ್ಲುತ್ತವೆ. ಇದನ್ನು ಸರಿಪಡಿಸಲು 3-4 ದಿನ ತೆಗೆದುಕೊಳ್ಳುತ್ತಾರೆ. ಮತ್ತೊಂದಡೆ ವಿದ್ಯುತ್ ಅಭಾವ ಅ ದಿನಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಅಹಾಕಾರ ಶುರುವಾಗುತ್ತದೆ.            
ಶುದ್ಧೀಕರಣ ಯಂತ್ರ: ರಾಮನಾಥಪುರದಲ್ಲಿ ಹಲವು ವರ್ಷಗಳಿಂದ ಪಟ್ಟಣದಲ್ಲಿ ಕುಡಿಯುವ ನೀರು ಶುದ್ದೀಕರಣ ನಿರ್ಮಾಣಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಅದು ಇನ್ನು ಕಾರ್ಯಗತವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.