ಕಾಡಾನೆ ಸೆರೆ ಕಾರ್ಯಾಚಾರಣೆ ಶೀಘ್ರವೇ ಆರಂಭಿಸಿ: ಎಚ್.ಕೆ.ಕುಮಾರಸ್ವಾಮಿ
ಕ.ಪ್ರ.ವಾರ್ತೆ ಹಾಸನ ನ.18
ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಕಾಡಾನೆಗಳ ಹಿಂಡು ಹಾಗೂ ಒಂಟಿ ಸಲಗಗಳ ಪುಂಡಾಟ ಮಿತಿ ಮೀರಿದ್ದು, ಸರ್ಕಾರ ತತ್ಕ್ಷಣದಿಂದಲೇ ಆನೆಗಳ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸುವಂತೆ ಶಾಸಕ ಎಚ್.ಕೆ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಹಾಸನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ರಾಜೇಂದ್ರಪುರದ ನಿವಾಸಿ ರುದ್ರಯ್ಯ (55) ಎಂಬಾತ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಈ ಭಾಗದಲ್ಲಿ ಹಿಂದೆ ಸುಮಾರು 50ಕ್ಕೂ ಹೆಚ್ಚು ಮಂದಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಆದರೆ ಇತ್ತೀಚೆಗೆ ಕಾಡಾನೆಗಳ ಪುಂಡಾಟ ಮಿತಿ ಮೀರಿದೆ. ಕಾಡಾನೆ ಹಿಂಡು ರಾಷ್ಟ್ರೀಯ ಹೆದ್ದಾರಿ 78 ರಲ್ಲಿ ಕಾಣಿಸಿಕೊಂಡ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡ ಘಟನೆಗಳು ನಡೆಯುತ್ತಿವೆ ಎಂದರು.
8 ಕಾಡಾನೆಗಳ ಹಿಂಡು: ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಮನೆಯ ತೋಟದ ಮೂಲಕ ಮುಂಜಾನೆ 4 ಗಂಟೆ ಸಮಯದಲ್ಲಿ ಹೆದ್ದಾರಿ ದಾಟಿ ಬೆಳಗೋಡು ಹೋಬಳಿಯಡೆಗೆ ಸಾಗಿದ್ದ 8 ಕಾಡಾನೆ ಹಿಂಡೆ ಸಂಜೆ 6 ಗಂಟೆಯ ಸಮಯದಲ್ಲಿ ಮತ್ತೆ ರಸ್ತೆ ದಾಟಲು ಗ್ರಾಮದ ತೋಟಗಳ ಮೂಲಕ ಹೆದ್ದಾರಿ ಸಮೀಪ ಆಗಮಿಸಿದ ಕಾಡಾನೆಗಳು ಹೆದ್ದಾರಿ ಸಮೀಪದಲ್ಲೆ ನೆಲೆ ನಿಂತಿದ್ದವು. ಆಗ ಅರಣ್ಯ ಸಿಬ್ಬಂದಿ ಕಾಡಾನೆಗಳು ಹೆದ್ದಾರಿ ದಾಟಲು ರಾಷ್ಟ್ರೀಯ ಹೆದ್ದಾರಿಯನ್ನು ಗಂಟೆಗಟ್ಟಲೆ ಬಂದ್ ಮಾಡಿದ್ದರು. ಇದರಿಂದ ತೀರಾ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು.
ತಾಲೂಕಿನ ಹೆತ್ತೂರು, ಯಸಳೂರು, ಹಾನುಬಾಳ್ ಹೋಬಳಿಯ ಎಲ್ಲಾ ಗ್ರಾಮಗಳು ಕಾಡಾನೆಗಳ ಹಾವಳಿಗೆ ತುತ್ತಾಗಿದ್ದರೆ, ಕಸಬಾ ಹೋಬಳಿಯಲ್ಲಿ ಆಗಾಗ ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿವೆ. ಆದರೆ ಬೆಳಗೋಡು ಹೋಬಳಿ ಕಾಡಾನೆ ಹಾವಳಿಯಿಂದ ಮುಕ್ತಗೊಂಡಿತ್ತು. ಆದರೆ ಭಾನುವಾರ ಕಸಬಾ ಹೋಬಳಿಯಿಂದ ಹೆದ್ದಾರಿ ದಾಟಿರುವ ಕಾಡಾನೆಗಳ ಹಿಂಡು ಬೆಳಗೋಡು ಹೋಬಳಿಗೆ ಕಾಲಿಟ್ಟಿರುವುದರಿಂದಾಗಿ ಬೆಳಗೋಡು ಹೋಬಳಿಯಲ್ಲಿ ಆತಂಕದ ವಾತವಾರಣ ಸೃಷ್ಟಿಯಾಗಿದೆ ಎಂದರು.
ಕೂಡಲೇ ಕಾರ್ಯಾಚರಣೆ ಆರಂಭಿಸಿ: ಸರ್ಕಾರ ಜನವರಿ ಅಂತ್ಯದೊಳಗೆ ಕಾಡಾನೆಗಳ ಸೆರೆಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಸರ್ಕಾರ ಜನವರಿ ವರೆಗೂ ಕಾಯ್ದೆ ತತಕ್ಷಣದಿಂದಲೇ ಕಾಡಾನೆಗಳ ಸೆರೆಯ ಕಾರ್ಯಾಚರಣೆ ಪ್ರಾರಂಭಿಸಬೇಕು. ಜೊತೆಗೆ ಬೆಳೆನಾಶಗೊಂಡಂತವಹಿಗೆ ಪರಿಹಾರವನ್ನು ಕೂಡಲೇ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

