ಹಾಸನ

ನೀರಾವರಿ ವಿಚಾರದಲ್ಲಿ ರಾಜಕೀಯ ಸಲ್ಲ: ಶಾಸಕ ಸಿ.ಎನ್. ಬಾಲಕೃಷ್ಣ

Published On :

ಚನ್ನರಾಯಪಟ್ಟಣ: ನೀರಾವರಿ ವಿಚಾರದಲ್ಲಿ ರಾಜಕೀಯ ಬೆರಸುವುದು ಬೇಡ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಕಿವಿಮಾತು ಹೇಳಿದರು.  ಇಲ್ಲಿನ ಚೌಡೇಶ್ವರಿ ಸಮುದಾಯ ಭವನದಲ್ಲಿ ತಾಲೂಕು ಕಚೇರಿ ಇತ್ತೀಚೆಗೆ ಆಯೋಜಿಸಿದ್ದ ಹಿರೀಸಾವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಟ್ಟದ ರೈತರ ಪಹಣಿ ತಿದ್ದುಪಡಿ ಮತ್ತು ಖಾತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನನಗೆ ಶಾಸಕ ಸ್ಥಾನ ಕೊಟ್ಟ ತಾಲೂಕಿನ ಅಭಿವೃದ್ಧಿಗೆ ಮೊದಲ ಆದ್ಯತೆ. ಶಾಸಕಾಂಗ ಮತ್ತು ಕಾರ್ಯಾಂಗ ಒಂದು ನಾಣ್ಯದ ಎರಡು ಮುಖಗಳಿದಂತೆ. ರೈತರಿಗೆ ಕಂದಾಯ ಇಲಾಖೆಯ ಸಮಸ್ಯೆಗಳು ಇರಬಾರದು ಎಂದು ತಿಳಿಸಿದರು.  ಜಿಲ್ಲಾ ಪಂಚಾಯ್ತಿ  ಅಧ್ಯಕ್ಷೆ ಅಂಬಿಕಾರಾಮಕೃಷ್ಣ ಮಾತನಾಡಿದರು. ಚನ್ನರಾಯಪಟ್ಟಣ ತಹಸೀಲ್ದಾರ್ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಖಾತೆ ಬದಲಾವಣೆಗೆ ಯಾವ ಖಾತೆಗೆ ಯಾವ ದಾಖಲೆಗಳನ್ನು ರೈತರು ಕೊಡಬೇಕು ಎಂಬ ಮಾಹಿತಿ ನೀಡಿದರು. ಹಾಸಜ ಜಿಲ್ಲೆ ಉಪ ವಿಭಾಗಾಧಿಕಾರಿ ಶರತ್ ಅಧ್ಯಕ್ಷತೆ ವಹಿಸಿದ್ದರು. ಹಿರೀಸಾವೆ ಗ್ರಾಮ ಪಂಚಾಯ್ತಿ ಅಧ್ಯಕ್ಚೆ ಮೀನಾಕ್ಷಿ ಶ್ರೀಧರ್, ಉಪಾಧ್ಯಕ್ಷೆ ಜಯಲಕ್ಷ್ಮಿರಮೇಶ್, ತಾಪಂ ಮಾಜಿ ಸದಸ್ಯ ಎಚ್.ಜಿ. ರಾಮಕೃಷ್ಣ, ಎವ್.ವಿ. ಕೃಷ್ಣೇಗೌಡ, ಬಿ.ಆರ್. ಯೋಗೇಶ್, ಎಚ್.ಬಿ. ಮಹೇಶ್, ಮೋಹನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

'ಓದುವ ಹವ್ಯಾಸದಿಂದ ಜ್ಞಾನವೃದ್ಧಿ'
ಕ.ಪ್ರ.ವಾರ್ತೆ ಹೊಳೆನರಸೀಪುರ ನ.18

ಪುಸ್ತಕಗಳನ್ನು ಓದುವ ಹವ್ಯಾಸದಿಂದ ಮನುಷ್ಯನ ಬುದ್ದಿ ಚುರುಕಾಗುವುದರ ಜತೆಗೆ ಪ್ರಾಪಂಚಿಕ ಜ್ಞಾನ ವೃದ್ಧಿಯಾಗಲಿದೆ ಎಂದು ಕಥೆಗಾರ ಕೌಂಡಿನ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಗ್ರಂಥಾಯಲಯದಲ್ಲಿ ಇತ್ತೀಚೆಗೆ  ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಯುವಕರಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ ಇದು ಆಘಾತಕಾರಿ ವಿಷಯವೆಂದು ಬಣ್ಣಿಸಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಓದುವ ಹವ್ಯಾಸದಿಂದ ಹಿಮ್ಮುಖಗೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ವಿಷಯಗಳನ್ನು ಗ್ರಹಿಸುವ ಶಕ್ತಿಯೂ ಕುಸಿದು ಬುದ್ಧಿ ಕೌಶಲ್ಯಕ್ಕೆ ಮಂಕು ಕವಿಯುತ್ತಿದೆ  ಎಂದು ವಿಷಾದಿಸಿದರು.
ಗ್ರಂಥಾಲಯದಲ್ಲಿ ಇರುವ ಪುಸ್ತಕಗಳು ಮತ್ತು ಗ್ರಂಥಗಳು ನಮ್ಮ ಶಾಲಾ ಕಾಲೇಜಿನ ವಿಚಾರಗಳಿಗೂ ಸಹಕಾರಿ ಆಗಲಿದೆ. ಪ್ರತಿಯೊಬ್ಬರು ಓದುವ ಅಭಿರುಚಿ ಬೆಳೆಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳು ಬೇರೆಲ್ಲು ದೊರಕಲು ಸಾಧ್ಯವಿಲ್ಲ. ಇಂತಹ ಪುಸ್ತಕಗಳ ಓದಿನಿಂದ ತಾವು ತಿಳಿದ ವಿಷಯಗಳನ್ನು ನಮ್ಮ ಅಕ್ಕಪಕ್ಕದಲ್ಲಿರುವವರಿಗೆ ತಿಳಿಸಿ ಅವರಲ್ಲಿಯೂ ಸಹ ಓದುವ ಅಭಿರುಚಿ ಬೆಳಸಬೇಕೆಂದು ಕಿವಿಮಾತು ಹೇಳಿದರು.
ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕ ಎಂ.ಸಿ.ಕುಮಾರಸ್ವಾಮಿ, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾಮಂಜುನಾಥ್, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ  ಬಾ.ರಾ.ಸುಬ್ಬರಾಯ, ಸಾಹಿತಿ ಗುಂಜೇವು ಅಣ್ಣಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.  ಗ್ರಂಥಪಾಲಕ ಜಯಲಿಂಗಪ್ಪ ನಿರೂಪಿಸಿದರು. ಕುಮಾರಿ ಗಾಯತ್ರಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.