ಸಾಮಾಜಿಕ ಪರಿವರ್ತನೆಗೆ ನಾಟಕ ಸಹಕಾರಿ: ಎಚ್.ಎಂ.ವಿಶ್ವನಾಥ್
ಕ.ಪ್ರ.ವಾರ್ತೆ ಜಾವಗಲ್ ನ.19
ನಾಟಕಗಳು ಮನರಂಜನೆಯ ಜೊತೆಗೆ ಸಾಮಾಜಿಕ ಪರಿವರ್ತನೆಗೆ ಸಹಕಾರಿಯಾಗಿವೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಹೇಳಿದರು. ಇಲ್ಲಿನ ಬಾಂಧವ್ಯ ಲೋಕ ಹಾಗೂ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಜಾವಗಲ್ ಘಟಕ ಸಹಯೋಗದಲ್ಲಿ ಬಯಲುರಂಗಮಂದಿರದಲ್ಲಿ ಏರ್ಪಡಿಸಿದ್ದ 2013 ಗ್ರಾಮೀಣ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ನಾಟಕದ ಮೂಲಕ ಜನರ ಬದುಕಿಗೆ ಹೊಸ ರೂಪ ಕೊಡುವುದರ ಜೊತೆಗೆ ಮೌಢ್ಯತೆ, ಕಂದಾಚಾರ, ಅನಕ್ಷರತೆ, ರಾಜಕೀಯ ಅಸ್ಥಿರತೆ ದೂರ ಮಾಡಬಹುದಾಗಿದೆ ಎಂದರು.
ನೈಜ ಬದುಕಿನ ಸರಿ ತಪ್ಪುಗಳಿಗೆ ನಾಟಕ ಬೆಳಕು ಚೆಲ್ಲುತ್ತದೆ. ಸಮಾಜದಲ್ಲಿಂದು ಅಪನಂಬಿಕೆ, ಜಾತಿಸಂಘರ್ಷ, ಮೌಢ್ಯಗಳಿಂದ ಮೃಗಗಳಾಗಿದ್ದು, ಇದನು ಸರಿಪಡಿಸಲು ನಾಟಕಗಳು ಪ್ರಭಾವ ಬೀರುತ್ತವೆ ಎಂದು ತಿಳಿಸಿದರು. ಗ್ರಾಮೀಣ ನಾಟಕೋತ್ಸವವನು ಚಲನಚಿತ್ರ ನಿರ್ದೇಶಕ ಹಾಗೂ ರಾಷ್ಟ್ರೀಯ ವನ್ಯಜೀವಿ ಛಾಯಚಿತ್ರಗ್ರಾಹಕ ಕೆ.ಶಿವರುದ್ರಯ್ಯ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ನಾಟಕಗಳು ಗ್ರಾಮೀಣ ಕಲಾವಿದರನು ಪ್ರೋತ್ಸ್ಸಾಹಿಸಿ, ಮನರಂಜನೆಯ ಜೊತೆಗೆ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳ ಪರಿಸ್ಥಿತಿಯನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ದೂರದರ್ಶನ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ರಂಗಭೂಮಿ ನಲುಗಿ ಹೋಗಿದ್ದು, ಹಳ್ಳಿಗಳಲ್ಲೂ ನಾಟಕ ಕಲೆ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಎಚ್.ಜಿ.ರೇವಣ್ಣ ಮಾತನಾಡಿ, ಸಮಾಜದ ಪರಿವರ್ತನೆಗೆ ನಾಟಕವು ಒಂದು ಸಾಧನವಾಗಿದೆ ಎಂದರು. ಸಾಹಿತಿ ಚಟಹಳ್ಳಿ ಮಹೇಶ್ ಮಾತನಾಡಿ ಸಮಾಜದಲ್ಲಿನ ಮೌಢ್ಯತೆ ತೊಳೆದು ಶೈಕ್ಷಣಿಕ ಕೊರತೆ, ರಾಜಕೀಯ ಅಸ್ಥಿರತೆ, ಮೇಲು-ಕೀಳು ಭಾವನೆಯನು ದೂರಮಾಡಿ ಸಮಾಜದಲ್ಲಿ ಸಮಾನತೆಯಿಂದ ಸಹಬಾಳ್ವೆ ನಡೆಸಲು ಶ್ರಮಿಸಿದ ಸಿರಿಗೆರೆ ಹಿರಿಯ ಸ್ವಾಮೀಜಿ ಶಿವಕುಮಾರ ಸ್ವಾಮೀಜಿಯವರ ಬದುಕಿನ ಕುರಿತು ಮಹಾಬೆಳಕು ನಾಟಕ ರಚಿಸಲಾಗಿದೆ ಎಂದು ನುಡಿದರು. ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಲಕ್ಷ್ಮೀಪತಿ ಕೋಲಾರ್ ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಪ್ರಸನಕುಮಾರ್, ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಿ.ಬಿ.ಕುಮಾರ್ ಮಾತನಾಡಿದರು.
ಎಪಿಎಂಸಿ ನಿರ್ದೇಶಕ ಕೆ.ಸಿ. ನಾಗರಾಜು ಹಳೇಬೀಡು ಮಂಜಣ್ಣ, ಜಿ.ಎಂ.ಚಂದ್ರೇಶೇಖರ್, ಜೆ.ಆರ್.ಇಂದ್ರೇಶ್, ಅನಿಲ್ಕುಮಾರ್, ಕೃಷ್ಣಮೂರ್ತಿ ಇದ್ದರು. ಡಾ.ರಾಜಶೇಖರ್ ಹನುಮಲಿ ರಚಿಸಿ ವೈಡಿ ಬದಾಮಿ ನಿರ್ದೇಶನದ ಮಹಾಬೆಳಕು ನಾಟಕವನು ಶಿವಸಂಚಾರ ತಂಡದ ಕಲಾವಿದರು ಉತ್ತಮವಾಗಿ ಅಭಿನಯಿಸಿದರು. ನಾಗರಾಜ್ ಸಂಗೀತ ಸಂಯೋಜನೆ, ರಂಗವಿನ್ಯಾಸ, ಹಾಗೂ ವಸ್ತ್ರವಿನ್ಯಾಸ ಅತ್ಯುತ್ತಮವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

