ಹಾಸನ

ಅಸಮಾನತೆ ತೊಲಗಿಸಲು ಶ್ರಮಿಸಿದ ದಾಸವರೇಣ್ಯ

Published On :

ಕ.ಪ್ರ.ವಾರ್ತೆ ಆಲೂರು ನ. 20
ಮಾನವ ಕುಲವೆಲ್ಲಾ ಒಂದೇ ಮೇಲು ಕೀಳೆಂಬ ಭಾವನೆ ತೊಲಗಿಸಲು ಅಸಮಾನತೆಯನ್ನು ತೊಡೆದು ಹಾಕಲು 526 ವರ್ಷಗಳ ಹಿಂದೆಯೇ ಶ್ರಮಿಸಿದ ದಾಸವರೇಣ್ಯ ಕನಕದಾಸರು ಮಹಾನ್ ವ್ಯಕ್ತಿಯೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯಿಂದ ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಬುಧವಾರ ನಡೆದ ಕನಕ ದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ನಾವೆಲ್ಲಾ ಒಂದೇ ಎನ್ನುವ ನುಡಿ ಮೊಳಗಬೇಕು, ಪರಸ್ಪರ ಕೀಳರಿಮೆ ತೊಲಗಿದಾಗ ಮಾತ್ರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆಯೆಂದ ಅವರು, ಕನಕದಾಸರು ತೋರಿದ ಹಾದಿಯಲ್ಲಿ ನಡೆದರೆ ಅದುವೇ ಅವರಿಗೆ ಸಲ್ಲುವ ಗೌರವವೆಂದರು.
ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಮೂಢ ನಂಬಿಕೆ ಹಾಗು ಅಸ್ಪೃಷ್ಯತೆಯನ್ನು ತೊಡೆದು ಹಾಕಲು ಶ್ರಮಿಸಿದ ಕನಕದಾಸರ ನೆನಪು ಇನ್ನೂ ಹಸಿಯಾಗಿದೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಮೂಢ ನಂಬಿಕೆ ಕಂದಾಚಾರಗಳನ್ನು ನೂರಾರು ವರ್ಷಗಳ ಹಿಂದೆಯೇ ಮನಗಂಡು ಅವನ್ನು ಹತ್ತಿಕ್ಕಲು ಪ್ರಯತ್ನಿಸಿದ ಕ್ರಾಂತಿಕಾರಿ ಕನಕದಾಸರು ಎಂದ ಅವರು, ಕನಕನ ಕಿಂಡಿ ಕ್ರಾಂತಿಯ ಕಿಂಡಿ ಈ ಕ್ರಾಂತಿಯನ್ನು ಮುಂದುವರೆಸುವ ಅಗತ್ಯವಿದೆ ಎಂದು ಹೇಳಿದರು.
ನಿವೃತ್ತ ಬಿಇಒ ಎಂ.ಬಿ.ವಿಜಯಕಾಂತ್, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಹಾಸನ ಡಯಟ್ ಹಿರಿಯ ಉಪನ್ಯಾಸಕ ಎನ್.ಕೆ.ಶಿವರಾಜ್ ಮಾತನಾಡಿದರು. ತಾಪಂ ಅಧ್ಯಕ್ಷೆ ಯಶೋಧ ಹರೀಶ್, ತಹಸೀಲ್ದಾರ್ ಶಾರದಾಂಬ, ತಾಪಂ ಮಾಜಿ ಸದಸ್ಯ ಸುಬ್ಬಶೆಟ್ಟಿ, ಪಪಂ ಸದಸ್ಯರು, ಕುರುಬ ಸಂಘದ ಅಧ್ಯಕ್ಷ ಚಿಕ್ಕೇಗೌಡ, ಶಂಕರಾಚಾರ್, ಜಿಪಂ ಎಇಇ ಶಿವಕುಮಾರ್ ಹಾಜರಿದ್ದರು. ಈ ಸಂದರ್ಭದಲ್ಲಿ ಪದವಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕ ಹಲ್ಕುರೇಗೌಡ ಮತ್ತು ನಿವೃತ್ತ ಕೃಷಿ ಅಧಿಕಾರಿ ಬೀರೇಗೌಡರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.