'ಕನಕ ಎಲ್ಲಾ ಸಮುದಾಯದಹಿತ ಬಯಸಿದ ಸಂತ ಶ್ರೇಷ್ಠ'
ಹೊಳೆನರಸೀಪುರ: ಕನಕದಾಸರು ಎಲ್ಲಾ ವರ್ಗ ಮತ್ತು ಸಮುದಾಯಗಳ ಹಿತವನು ಸಮಾನ ರೀತಿಯಲ್ಲಿ ಬಯಸಿದ ಸಂತ ಶ್ರೇಷ್ಠರಾಗಿದ್ದು, ಅವರ ತತ್ವ ಮತ್ತು ಆದರ್ಶಗಳು ಎಲ್ಲಕಾಲಕ್ಕೂ ಮಾರ್ಗದರ್ಶಿಯಾಗಿವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ತಾಲೂಕು ಕುರುಬರ ಸಂಘದ ಸಹಕಾರದೊಂದಿಗೆ ಬುಧವಾರ ನಡೆದ ಕನಕದಾಸರ 525 ನೇ ಜಯಂತಿ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರ ವ್ಯಕ್ತಿತ್ವವನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮರಸ್ಯವನು ಮೆರೆಯಬೇಕಿದೆ ಎಂದು ಹೇಳಿದರು.
ಕನಕದಾಸರ ತತ್ವಾದರ್ಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ದಾಸವಾಣಿಯ ಅರ್ಥವನು ಎಲ್ಲ ಸಮುದಾಯಗಳು ಪಾಲಿಸಬೇಕಾದ ಅವಶ್ಯಕತೆ ಇದೆ ಎಂದ ಅವರು, ಕನಕದಾಸರ ಇಡೀ ನಾಡಿನ ಎಲ್ಲ ಸಮುದಾಯಗಳ ಸಮಾನತೆಯ ಪ್ರತಿನಿಧಿಯಾಗಿದ್ದಾರೆ ಎಂದರು.
ನಿವೃತ್ತ ಜಿಲ್ಲಾಧಿಕಾರಿ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಸ್.ಪುಟ್ಟಸ್ವಾಮಿ ಮಾತನಾಡಿ, ಕನಕದಾಸರು ಹುಟ್ಟಿದ್ದು ಕುರುಬ ಸಮುದಾಯದಲ್ಲಾದರೂ, ಅವರ ತತ್ವಗಳು, ಸಾಮಾಜಿಕ ಕಳಕಳಿ ಹಾಗೂ ಸಮಾನತೆಯ ಪರಿಕಲ್ಪನೆಗಳು ಎಲ್ಲ ಸಮುದಾಯಗಳಿಗೂ ಮಾದರಿಯಾಗಿದೆ ಎಂದರಲ್ಲದೇ, ಜಾತಿ ವ್ಯವಸ್ಥೆಯನು ಹೊರದೂಡಿ ಜಾತ್ಯತೀತ ವ್ಯಕ್ತಿಯಾಗಿ ರೂಪಿತವಾದವರು ಕನಕದಾಸರು ಎಂದು ಹೇಳಿದರು.
ಸಮಾನತೆಯ ಸಮಾಜ ನಿರ್ಮಾಣದ ಕನಸು ಕಂಡ ಕನಕದಾಸರ ಸಮಾನತೆಯ ನಾಡು ಇಂದಿಗೂ ಜಾರಿಗೊಳ್ಳದೆ, ಜಾತಿ ವ್ಯವಸ್ಥೆಯು ಇಂದಿಗೂ ಬೃಹದಾಕಾರವಾಗಿ ನಿಂತಿರುವುದು ಶೋಚನೀಯ ಎಂದ ಅವರು, ಅಹಂಕಾರವನು ಹೋಗಲಾಡಿಸಿ ಭಕ್ತಿಮಾರ್ಗದಿಂದ ಮುಕ್ತಿ ಮಾರ್ಗದೆಡೆಗೆ ಸಾಗುವ ದಾರಿಯನು ತೋರಿದ ದಾರ್ಶನಿಕ ಕನಕದಾಸರು ಎಂದು ನುಡಿದರು.
ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್.ಸರೋಜಿನಿದೇವಿ, ಸೇವಾ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ರಂಗರಾಜು ಹಾಗೂ ಸರ್ಕಾರಿ ಸೇವೆ ಮತ್ತು ಕಲೆ ರಂಗಭೂಮಿ ಸೇವೆಗಾಗಿ ಕಂದಾಯ ಇಲಾಖೆಯ ಶಿರಸ್ತೇದಾರ್ ಉಲಿವಾಲ ಮೋಹನ್‌ಕುಮಾರ್ ಅವರನು ಸನ್ಮಾನಿಸಲಾಯಿತು. ಕಿತ್ತೂರು ಚೆನಮ್ಮ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಹರಿಕಥಾ ವಿದ್ವಾನ್ ಶ್ರೀಕೃಷ್ಣ ಪ್ರಧಾನ ಭಾಷಣ ಮಾಡಿದರು.
ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ, ತಾಪಂ ಅಧ್ಯಕ್ಷೆ ಪುಷ್ಪಾಗೌಡೇಗೌಡ, ಉಪಾಧ್ಯಕ್ಷ ನಂಜುಂಡಪ್ಪ, ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ, ತಾಪಂ ಇಓ ತಮ್ಮಣ್ಣಗೌಡ, ಕನಕ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಹೊನಿಕೊಪ್ಪಲು ಮಂಜೇಗೌಡ, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಎಂ.ವಿ.ದಾಶರಥಿ, ಯಶೋಧಕೃಷ್ಣೇಗೌಡ, ಭಾಗ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

