ಇಂದಿನಿಂದ ಆನೆ ಸೆರೆ ಕಾರ್ಯಾಚರಣೆ
ಕ.ಪ್ರ.ವಾರ್ತೆ ಆಲೂರು ನ. 20
ಕಳೆದ ಒಂದು ವಾರದಲ್ಲಿ ಇಬ್ಬರನು ಬಲಿ ತೆಗೆದುಕೊಂಡಿರುವ 2 ಆನೆಗಳನು ನಾಳೆಯಿಂದಲೇ ಕಾರ್ಯಾಚರಣೆ ಮೂಲಕ ಹಿಡಿಯಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.
ತಾಲೂಕಿನ ಭರತೂರು ಗ್ರಾಮದ ಬಳಿ ನಿರ್ಮಿಸಿರುವ ಆನೆ ಕ್ಯಾಂಪ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ವಾರದಲ್ಲಿ ಇಬ್ಬರನು ಬಲಿ ತೆಗೆದುಕೊಂಡಿರುವ ಮಕಾ ಹಾಗೂ ಒಂಟಿ ಸಲಗವನು ಹಿಡಿಯಲಾಗುವುದು.
ಈಗಾಗಲೇ ಈ 2 ಆನೆಗಳು ಇರುವ ಸ್ಥಳಗಳನು ಗುರುತಿಸಲಾಗಿದ್ದು, ನ.21ರಂದು ದುಬಾರೆ ಹಾಗೂ ಕೆ.ಗುಡಿ ಶಿಬಿರದಿಂದ ಬಂದಿರುವ ಅಭಿಮನ್ಯ, ಹರ್ಷ, ವಿಕ್ರಂ ಮತ್ತು ಜೈತ್ರಾ ಎಂಬ ಹೆಣ್ಣಾನೆಯ ಸಹಾಯದಿಂದ ಆನೆಗಳನು ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದರು.
ಕಾರ್ಯಾಚರಣೆ ಸಂದರ್ಭದಲ್ಲಿ ಸಾರ್ವಜನಿಕರಿಗಾಗಲೀ ಅಥವಾ ಆನೆಗಳಿಗಾಗಲೀ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ಸಂಬಂಧವಾಗಿ ಇಂದು ಸ್ಥಳವನು ಪರಿಶೀಲನೆ ನಡೆಸಲಾಯಿತು. ಈಗಾಗಲೇ ನುರಿತ ಕಾವಾಡಿಗರು, ಪಶುವೈದ್ಯರು ಹಾಗೂ 46 ಸಿಬ್ಬಂದಿಗಳಿದ್ದು, ಕಾರ್ಯಾಚರಣೆಗೆ ಬೇಕಾದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್ ಮಾತನಾಡಿ, ನುರಿತ ಗುರಿಕಾರರು ಹಾಗೂ ವೈದ್ಯರ ತಂಡ ಬರಲಿದ್ದು, ಭರತೂರು, ಮಾಗಡಿಹಳ್ಳಿ ವ್ಯಾಪ್ತಿಯ ಸುತ್ತಮುತ್ತದಲ್ಲಿ ನರಹಂತಕ ಒಂಟಿ ಸಲಗ ಹಾಗೂ ಮಕಾ ಆನೆಗಳಿದ್ದು, ಅವುಗಳನು ಹಿಡಿಯಲು ಈಗಾಗಲೇ ಎಲ್ಲಾ ವ್ಯವಸ್ಥೆಯನು ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿ ತಯಾರಾಗಿದ್ದಾರೆ. ಗುರುವಾರದಿಂದ ಕಾರ್ಯಾಚಾರಣೆ ಪ್ರಾರಂಭವಾಗುವುದಾಗಿ ಹೇಳಿದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಆನೆಗಳನು ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಿರುವುದು ಸ್ವಾಗತಾರ್ಹ.
ಎಲ್ಲಾ ಆನೆಗಳನು ಒಟ್ಟಿಗೆ ಹಿಡಿಯುವ ಬದಲು ಮೊದಲು ನರಹಂತಕ ಪುಂಡಾನೆಗಳನು ಹಿಡಿಯಬೇಕು. ನಂತರ ಶೀಘ್ರವಾಗಿ ಎಲ್ಲಾ ಆನೆಗಳನು ಹಿಡಿಯಬೇಕು. ಈಗ ಈ ನರಹಂತಕ ಆನೆಗಳು ಇರುವ ಪ್ರದೇಶಗಳಲ್ಲಿ ಅಧಿಕಾರಿಗಳು ವಾಹನದಲ್ಲಿ ಗಸ್ತು ಹಾಕಿ ಆನೆಗಳು ಜನ ಪ್ರದೇಶಕ್ಕೆ ಹೋಗದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಎಸ್ಪಿ ರವಿ ಡಿ. ಚನಣ್ಣನವರ್, ಎಡಿಸಿ ಗೋಪಾಲಕೃಷ್ಣ, ಆರ್ಎಫ್ಓ ದೇವರಾಜ್, ಐಎಎಸ್ ರಾಮಚಂದ್ರನ್, ತಹಸೀಲ್ದಾರ್ ಶಾರದಾಂಬ ಇನೂ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

