'ದೇಶ ಪ್ರಗತಿಯಲ್ಲಿ ಸರ್ಕಾರೇತರ ಸಂಸ್ಥೆಗಳ ಪಾತ್ರ ಬಹು ಮುಖ್ಯ'
ಹಾಸನ: ಭಾರತದಂತಹ ವಿಶಾಲವಾದ ದೇಶದಲ್ಲಿ ಪ್ರಗತಿ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ, ಇದಕ್ಕಾಗಿ ಸರ್ಕಾರೇತರ ಸಂಸ್ಥೆಗಳ ಪಾತ್ರ ಅತಿ ಮುಖ್ಯ ಎಂದು ಸಮಾಜಸೇವಕಿ ದಾಕ್ಷಾಯಿಣಿ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂಕಾಂ ವಿಭಾಗದಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹೊಳೆನರಸೀಪುರದ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ದಾಕ್ಷಾಯಿಣಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎನ್.ರೂಪ್ರಾಜ ಚಂದನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕ ಓದುವುದು ನಿಜವಾದ ಹಬ್ಬ, ಸಂಪನ್ಮೂಲ ವ್ಯಕ್ತಿಗಳ ಸೇವೆಯನ್ನು ವಿದ್ಯಾಬ್ಯಾಸಕ್ಕಾಗಿ ಬಳಸಿಕೊಳ್ಳಬೇಕೆಂದರು. ಭಾರತ ರತ್ನ ಪ್ರಶಸ್ತಿ ಪಡೆದ ಸಿ.ಎನ್.ಆರ್. ರಾವ್ ಅವರಂತಹ ಜೀವನ ಶೈಲಿಯನ್ನು ಮಾದರಿಯಾಗಿ ತೆಗೆದುಕೊಳ್ಳ ಬೇಕೆಂದರು.
ಎಂಕಾಂ ವಿಭಾಗದ ಸಂಯೋಜಕ ಡಾ.ವಿ.ರಮೇಶ್, ಯಾವುದೇ ವ್ಯಕ್ತಿಗೆ ಗೆಲವು ಒಲಿಯಬೇಕಾದರೆ ಅವನು ಹಲವು ಕೆಲಸಗಳಿಗೆ ಕೈ ಹಾಕದೆ, ಒಂದೇ ವಿಷಯವನ್ನು ಬಹಳಷ್ಟು ಶ್ರದ್ದೆಯಿಂದ ಮಾಡಬೇಕೆಂದರು. ಎಂಕಾಂ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು, ವಿಭಾಗದ ಅಧ್ಯಾಪಕ ಮಾವಿನ್ಕುಮಾರ್, ಮಧುಸೂದನ್ ಭಾಗವಹಿಸಿದ್ದರು. ಬಿಂದು ಮತ್ತು ಸಂಗಡಿಗರು ಪ್ರಾರ್ಥಿಸಿದರು. ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಡಿ.ಟಿ.ಸಿಂಚನ ನಿರೂಪಿಸಿದರು. ಬಿ.ಎನ್.ಸ್ವಾತಿ ಮತ್ತು ರುಹೀನ ಕಾರ್ಯಕ್ರಮ ಸಂಯೋಜಿಸಿದರು.
ಇಂದಿನಿಂದ ಪ್ರಾಣಾಯಾಮ ಶಿಬಿರ
ಹಾಸನ: ನಗರದ ರಂಗೋಲಿ ಹಳ್ಳದ ಬ್ರಹ್ಮಕುಮಾರಿ ಆಶ್ರಮ ರಸ್ತೆಯಲ್ಲಿರುವ ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ನ. 24 ರಿಂದ 13 ದಿನಗಳ ಕಾಲ ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ತರಬೇತಿ ಶಿಬಿರ ಆರಂಭವಾಗಲಿದೆ ಎಂದು ಕೇಂದ್ರದ ಮುಖ್ಯಸ್ಥ ಸುರೇಶ್ ಗುರೂಜಿ ತಿಳಿಸಿದ್ದಾರೆ. ಗುಣಮಟ್ಟದ ತರಬೇತಿಗಾಗಿ ಶಿಬಿರಾರ್ಥಿಗಳ ಸಂಖ್ಯೆಯನ್ನು ಮಿತಿ ಗೊಳಪಡಿಸಲಾಗಿದೆ ಎಂದಿದ್ದಾರೆ. ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುವುದು. ಮಾಹಿತಿಗಾಗಿ ದೂ 9448156105 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

