ಹಾಸನ

ಮೂಡಿಗೆರೆಯಲ್ಲಿ ಡಿ.7, 8 ರಂದು ಕೃಷಿ ಮೇಳ

Published On :

ಹಾಸನ: ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ  ಮೂಡಿಗೆರೆಯಲ್ಲಿ ಡಿ.7 ಮತ್ತು 8 ರಂದು ಕೃಷಿ ಮೇಳ ಏರ್ಪಡಿಸಲಾಗಿದೆ.
ಮೇಳದಲ್ಲಿ ಅಭಿವೃದ್ಧಿಪಡಿಸಿದ ತಳಿಗಳು ಹಾಗೂ ನೂತನ ಬೇಸಾಯ ತಾಂತ್ರಿಕತೆ, ಸಮಗ್ರ ಪೀಡೆ ನಿರ್ವಹಣೆ, ತೋಟಗಾರಿಕಾ ಬೆಳೆಗಳಾದ ಸಪೋಟಾ, ರಬ್ಬರ್, ಕಾಫಿ ಬೆಳೆಗಳ ಬಗ್ಗೆ ಮಾಹಿತಿ, ಕ್ಷೇತ್ರ ಭೇಟಿ ವೀಕ್ಷಣೆ ಏರ್ಪಡಿಸಲಾಗಿದೆ.  ವಿಜ್ಞಾನಿಗಳು ಪ್ರಗತಿಪರ ರೈತರೊಂದಿಗೆ ಕೃಷಿ ಸಂಬಂಧಿ ಸಮಸ್ಯೆಗಳ ಕುರಿತು ಚರ್ಚಿಸಬಹುದು, ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಬಹುದಾಗಿದೆ.  ಕೃಷಿ ಮೇಳದ ಪ್ರಯೋಜನ ಪಡೆಯಲು ಮಡಿಕೇರಿ, ಹಾಸನ  ಜಿಲ್ಲೆಗಳ ತಾಲೂಕುಗಳಿಗೆ ಸೇರಿದ ರೈತ, ರೈತ ಮಹಿಳೆಯರು ಭಾಗವಹಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.