ಇಂದು ಶನೇಶ್ವರ ಬ್ರಹ್ಮ ರಥೋತ್ಸವ
ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಜಂಬೂರು ಗ್ರಾಮದಲ್ಲಿ ನ.27 ರಂದು ಮಧ್ಯಾಹ್ನ 2ಕ್ಕೆ ಶನೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ. ರಂಭಾಪುರಿ ಶಾಖಾಪುರವರ್ಗ ಹಿರೇಮಠ ನುಗ್ಗೇಹಳ್ಳಿಯ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಆಲ್ಬೂರು ಶನಿದೇವರ ಮಠದ ನರಸಿಂಹಸ್ವಾಮೀಜಿ ದಿವ್ಯ ಸಮ್ಮುಖದಲ್ಲಿಬೆಳಿಗ್ಗೆ 9ಕ್ಕೆ ಜಂಬೂರು ಗ್ರಾಮದ ಶನೇಶ್ವರಸ್ವಾಮಿ, ಕೋಟೆಮಾರಮ್ಮದೇವಿ, ಹಾರೋಸೋಮನಹಳ್ಳಿ ಗ್ರಾಮದ ಸಂಪಿಗೆ ಮಾರಮ್ಮದೇವಿ, ಹುಲಿಕೆರೆ ಗ್ರಾಮದ ಆಲದಮರದಮ್ಮದೇವಿ. ಅತ್ತಿಹಳ್ಳಿ ಗ್ರಾಮದ ಚಿಕ್ಕಮ್ಮದೇವಿ, ಸಿದ್ದರಹಟ್ಟಿ ಗ್ರಾಮದ ದೊಡ್ಡಮ್ಮದೇವಿ, ಹೊನ್ನಮಾರನಹಳ್ಳಿ ಗ್ರಾಮದ ಕ್ಯಾಲಮ್ಮದೇವಿ (ಲಕ್ಷ್ಮೀದೇವಿ), ಬೂವನಹಳ್ಳಿ ವಡ್ಡರಹಟ್ಟಿ ಗ್ರಾಮದ ಚೌಡೇಶ್ವರಿದೇವಿ, ಕಾರೇಕೆರೆ ಗ್ರಾಮದ ದ್ಯಾವಮ್ಮದೇವಿ, ಹೆಬ್ಬಳಲು ಗ್ರಾಮದ ಹೆಬ್ಬಾಳಮ್ಮದೇವಿ, ತಾವರೆಕೆರೆ ಗ್ರಾಮದ ದೊಡ್ಡಮ್ಮದೇವಿ, ನುಗ್ಗೇಹಳ್ಳಿ ಗ್ರಾಮದ ನುಗ್ಗೇಹಳ್ಳಿ ಅಮ್ಮದೇವಿ ದೇವರ ಉತ್ಸವದೊಂದಿಗೆ, ಊರಿನ ರಾಜಬೀದಿಗಳಲ್ಲಿ ಕಳಸ ಉತ್ಸವ, ಸೋಮನ ಕುಣಿತ ಮತ್ತು ದನಕರುಗಳೊಂದಿಗೆ ಆರತಿ ಮೆರವಣಿಗೆ. ಜಂಬೂರು, ಹೆಬ್ಬಳಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಕಳಸ ಉತ್ಸವ ಏರ್ಪಡಿಸಲಾಗಿದೆ. ತುಮಕೂರು ರವೀಶ್ ತಂಡದಿಂದ ವೀರಭದ್ರ ಕುಣಿತ, ನಂದೀಧ್ವಜ ಕುಣಿತ ವೀರಶೈವ ಸೇವಾ ಸಂಘ, ನುಗ್ಗೇಹಳ್ಳಿ ಇವರಿಂದ , ಹೊಸದುರ್ಗದ ಎನ್.ಜಿ. ಲೋಕೇಶ್, ಮಲ್ಲೇಶ್ವರ ಯುವಕ ಸಂಘದವರಿಂದ ವೀರಗಾಸೆ, ಡೊಳ್ಳುಕುಣಿತ ಮತ್ತು ಪೂಜಾ ಕುಣಿತ ಇರುತ್ತದೆ. ಸಂಜೆ 6 ರಿಂದ 7 ಗಂಟೆವರೆಗೆ ಸ್ವಾಮಿಯವರಿಗೆ ಉಯ್ಯಾಲೆ ಉತ್ಸವ, ರಾತ್ರಿ 7ರಿಂದ ಶನೇಶ್ವರಸ್ವಾಮಿ ಹಾಗೂ ಕೋಟೆ ಮಾರಮ್ಮನವರಿಗೆ ಪಲ್ಲಕ್ಕಿ ಉತ್ಸವ, ರಾತ್ರಿ 9.30ಕ್ಕೆ ವಿರೂಪಾಕ್ಷಿಪುರದ ಶನಿದೇವರ ಸಂಘದವರಿಂದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಎಂಬ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ
ಹಾರನಹಳ್ಳಿ: ಗೀಜಿಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು. ತಾಪಂ ಕಾರ್ಯನಿರ್ವಾಹಣಾಧಿಕಾರಿ ಟಿ.ಎನ್.ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಉದ್ಯೋಗ ಖಾತ್ರಿ ಯೋಜನೆಯಡಿ ನಾನಾ ಕಾಮಗಾರಿಗಳು ನಡೆದಿದ್ದು, ಈ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಕ್ಷೇಪಣೆಗಳಿದ್ದರೆ ಗ್ರಾಮಸಭೆಯಲ್ಲಿ ಮುಕ್ತವಾಗಿ ಚರ್ಚಿಸಲು ಅವಕಾಶವಿದೆ ಎಂದರು.ಗೀಜಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೈ.ಆರ್.ನಾಗರಾಜ್ ಮಾತನಾಡಿ, ನಾನಾ ಇಲಾಖೆಯ ಅನುದಾನಗಳು ಸಮರ್ಪಕವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫಲಾನುಭವಿಗಳಿಗೆ ತಲುಪಬೇಕಾದರೆ ಅಧಿಕಾರಿಗಳ ಸಹಕಾರ ಅತಿ ಮುಖ್ಯವೆಂದರು.ಖಾತ್ರಿ ಯೋಜನೆಯ ಅನುಷ್ಠಾನಾಧಿಕಾರಿ ಲಕ್ಷ್ಮಿಕಾಂತ್, ಗೀಜಿಹಳ್ಳಿ ಗ್ರಾಪಂ ಉಪಾಧ್ಯಕ್ಷೆ ವನಜಾಕ್ಷಮ್ಮ, ಸಾವಿತ್ರಮ್ಮ, ಜವರಣ್ಣ, ರುದ್ರೇಶ್, ಕರಿಸಿದ್ದಪ್ಪ, ಧರ್ಮಣ್ಣ, ಶೇಖರಣ್ಣ, ಶಿಕ್ಷಕರು ಪಂಚಾಯ್ತಿ ಸಿಬ್ಬಂದಿ ನಾನಾ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದರು.
ಕನಕ ಜಯಂತಿ
ರಾಮನಾಥಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಕನಕದಾಸರ 526ನೇ ಜಯಂತ್ಯೋತ್ಸವವನ್ನು ಶ್ರದ್ಧೆಯಿಂದ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಮಂಜು, ಕನಕದಾಸರು ರಚಿಸಿರುವ ಕೀರ್ತನೆಗಳು ನೂರಾರು ವರ್ಷ ಕಳೆದರೂ ಇಂದಿನ ಸಮಾಜಕ್ಕೆ ಪೂರಕವಾಗಿವೆ. ಮಾನವ ಜೀವನ ಅತ್ಯಮೂಲ್ಯವಾದದು ಇದನ್ನು ಮನಗಂಡು ಸತ್ಪ್ರಜೆಗಳಾಗಿ ಬಾಳೋಣ ಎಂದು ಆಶಿಸಿದರು.ಸಹಾಯಕ ಪ್ರಾಧ್ಯಾಪಕ ಡಾ.ಯೋಗೇಶ್ ಪ್ರಧಾನ ಭಾಷಣ ಮಾಡಿದರು.ತಹಸೀಲ್ದಾರ್ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ,ಇಒ ಶಿವರಾಮ್, ತಾ. ಕುರುಬರ ಸಂಘದ ಅಧ್ಯಕ್ಷ ತಿಪ್ಪೇಗೌಡ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ. ಮಲ್ಲೇಶ್, ಕಂಬೇಗೌಡರು, ಮರಿಗೌಡ, ಯೋಗೇಶ್, ಆಟೋ ರಾಜಣ್ಣ, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಶೇಷೇಗೌಡ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

