ದ್ವೇಷ ರಾಜಕಾರಣಕ್ಕೆ ತೆಂಗು ಬೆಳೆಗಾರ ಬಲಿಪಶು
ಅರಸೀಕೆರೆ: ಸತತ ಬರದಿಂದ ಕಂಗೆಟ್ಟಿರುವ ಅರಸೀಕೆರೆ ತಾಲೂಕಿನ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಈ ಸಂಬಂಧ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿವಿಧ ಗ್ರಾಮಗಳ ಮುಖಂಡರು ಆರೋಪಿಸಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್.ಸಿ.ನಾಗರಾಜು, ಉಪಾಧ್ಯಕ್ಷರಾದ ಲತಾಕಾಂತರಾಜು, ಲಕ್ಷ್ಮೀ ಧನಂಜಯ, ಕೆ.ಸತೀಶ್, ಕೆ.ಎಸ್.ಸತೀಶ್, ದಿಬ್ಬೂರು ಚೌಡಪ್ಪ, ದಾದಾಪಿರ್ ಸಾತನಗೆರೆ, ಜೆಡಿಎಸ್ ಮುಖಂಡ ಧನಂಜಯ್ ಕುಮಾರ್ ಮತ್ತಿತರರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ವಿರುದ್ಧವೂ ದೂರಿದ್ದಾರೆ.
ರಾಜಕೀಯ ದುರುದ್ದೇಶ: ಅರಸೀಕರೆ ತಾಲೂಕನ್ನು ಬರ ಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ. ಈ ದುರುದ್ದೇಶಕ್ಕೆ ಇದೀಗ ಲಕ್ಷಾಂತರ ತೆಂಗಿನ ಮರಗಳು ಬಲಿಯಾಗುತ್ತಿದ್ದು, ಅದನ್ನೇ ನಂಬಿದ ತೆಂಗು ಬೆಳೆಗಾರರು ಬಲಿಯಾಗುವ ದಿನಗಳು ದೂರವಿಲ್ಲ ಎಂದು ಆರೋಪಿಸಿದ್ದಾರೆ. ತೆಂಗಿನ ಮರಗಳ ಸುಳಿ ಬೀಳುತ್ತಿರುವುದನ್ನು ಪರಿಶೀಲಿಸಲಿಕ್ಕಾಗಿ ಕೇಂದ್ರ ತಜ್ಞರ ತಂಡ ಆಗಮಿಸಿದ್ದ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಅನೇಕ ರೈತ ಮುಖಂಡರು ತಂಡಕ್ಕೆ ವಾಸ್ತವಾಂಶ ಪರಿಚಯ ಮಾಡಿಕೊಟ್ಟಿದ್ದರೂ ಅರಸೀಕೆರೆಯನ್ನು ಬರಪೀಡಿತ ಜಿಲ್ಲೆಗಳ ಪಟ್ಟಿಯಿಂದ ಕೈಬಿಟ್ಟಿದೆಯೆಂದರೆ ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

