ಮತ್ತಿಗೂಡು ಶಿಬಿರಕ್ಕೆ ಒಂಟಿ ಸಲಗ
ಕ.ಪ್ರ.ವಾರ್ತೆ ಆಲೂರು ನ.26
ಐದು ದಿನಗಳ ಕಾರ್ಯಾಚರಣೆ ನಡೆಸಿ ಹರಸಾಹಸ ಮಾಡಿ ಕೊನೆಗೂ ಸೆರೆ ಹಿಡಿದ ಒಂಟಿ ಸಲಗವನ್ನು ಮಂಗಳವಾರ ಕೊಡಗಿನ ತಿತಿಮತಿ ಅರಣ್ಯ ಪ್ರದೇಶದಲ್ಲಿ ಇರುವ ಮತ್ತಿಗೂಡು ಆನೆ ಶಿಬಿರಕ್ಕೆ ಸಾಗಿಸಲಾಯಿತು.
ಕಳೆದ ಐದು ದಿನಗಳ ಅವಿರತ ಪರಿಶ್ರಮದಲ್ಲಿ ಆಲೂರು-ಸಕಲೇಶಪುರ ತಾಲೂಕಿನ ಗಡಿ ಭಾಗವಾದ ಕೆರೋಡಿ ಬಳಿಯ ಮರಡಿಕೆರೆಯ ಸಮೀಪ ಸೋಮವಾರ ಮಧ್ಯಾಹ್ನ 12.30ರಲ್ಲಿ ಸೆರೆ ಹಿಡಿದು ಶಿವನಹಳ್ಳಿ-ಕೂಡಿಗೆ ಬಳಿಯ ದೊಡ್ಡ ಆಲದ ಮರದಲ್ಲಿ ಕಳೆದ ರಾತ್ರಿ ಒಂಟಿ ಸಲಗವನ್ನು ಬಂಧಿಸಲಾಗಿತ್ತು. ಇಡೀ ರಾತ್ರೀ ದಣಿದಿದ್ದ ಆನೆಗೆ ವಿಶ್ರಾಂತಿ ನೀಡಿ, ಮಂಗಳವಾರ ಬೆಳಗ್ಗೆ ಮರದ ಪಕ್ಕದಲ್ಲಿಯೇ ಗುಂಡಿಯನ್ನು ತೋಡಿ ಅಲ್ಲಿ ಲಾರಿಯನ್ನು ನಿಲ್ಲಿಸಿ ಕಾಡಾನೆಯನ್ನು ದಾರಿಗೆ ತುಂಬಲು ಅರಣ್ಯಾಧಿಕಾರಿಗಳು ಪರದಾಡಬೇಕಾಯಿತು.
ಕಾಡಿದ ಕಾಡಾನೆ: ಕಾಡಾನೆ ಲಾರಿಗೆ ಹಿಮ್ಮುಖವಾಗಿ ಹೋಗಲು ನಿರಾಕರಿಸಿ ಹಿಂದೇಟು ಹಾಕ ತೊಡಗಿತು ಹಾಗೂ ಸಾಕಾನೆಗಳ ಮೇಲೆ ದಾಳಿಗೆ ಮುಂದಾಗುತ್ತಿತ್ತು. ನಂತರ ಸಾಕಾನೆಗಳಲ್ಲಿ ಅತ್ಯಂತ ಬಲಿಷ್ಠವಾದ ಅಭಿಮನ್ಯು ಕಾಡಾನೆಗೆ ಗುದ್ದಿ ಲಾರಿಗೆ ತುಂಬುವಲ್ಲಿ ಯಶಸ್ವಿಯಾಯಿತು. ಲಾರಿಯಲ್ಲಿ ತುಂಬಿದ ಆನೆಯ ನಾಲ್ಕು ಕಾಲುಗಳನ್ನು ಕಟ್ಟಿಹಾಕಿ ಆನೆಯ ಕುತ್ತಿಗೆಗೆ ಸಹ ಬಲವಾದ ಸರಪಳಿ ಹಾಕಿ ಆನೆಗೆ ಯಾವುದೇ ಕಾರಣಕ್ಕೆ ಜಗ್ಗದಂತೆ ಕಟ್ಟಿಹಾಲಾಯಿತು.
ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗುರಿಕಾರರಾದ ಹೊನ್ನವಳ್ಳಿ ವೆಂಕಟೇಶ್, ಅಕ್ರಂ, ವೈದ್ಯ ಚಟ್ಟಿಯಪ್ಪ, ನಾಗರಾಜ್, ಉಮಾಶಂಕರ್, ಕರಂಬಾಯ್, ವಸಂತ್, ಅಭಿಮಾನ್ ಹಾಗೂ ಮಾವುತರು, ಕಾವಾಡಿಗರಿಗೆ ಏಲಕ್ಕಿ ಹಾರವನ್ನು ಹಾಕಿ ಇಲಾಖೆಯವತಿಯಿಂದ ಸನ್ಮಾನಿಸಲಾಯಿತು. ನಂತರ ಆನೆಯನ್ನು ಲಾರಿಯಲ್ಲಿ ಸಾಗಿಸಲಾಯಿತು.
ಈ ಸಂದರ್ಭದಲ್ಲಿ ಆಪಾರಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು, ಆನೆ ಸಾಗಾಣಿಕೆ ಕಾರ್ಯವನ್ನು ವೀಕ್ಷಿಸಿದರು. ನಂತರ ಹಲವಾರು ಮಂದಿ ವಾಹನಗಳಲ್ಲಿ ಆನೆಯನ್ನುಸಾಗಿಸುತ್ತಿದ್ದ ಲಾರಿಯನ್ನು ಕೊಡಗಿನವರೂ ಹಿಂಬಾಲಿಸಿಕೊಂಡು ಹೋದರು.
ಕಣ್ಣೊರೆಸುವ ತಂತ್ರ
ಜಿಲ್ಲಾ ಪಂಚಾಯ್ತಿ ಸದಸ್ಯ ಪುರುಷೋತ್ತಮ ಮಾತನಾಡಿ, ಕಾರ್ಯಾಚರಣೆ ಐದು ದಿನಗಳವರೆಗೂ ವಿಸ್ತರಣೆಗೊಂಡಿದ್ದರಿಂದ ಅರಣ್ಯ ಇಲಾಖೆಯವರು ಜನರನ್ನು ಬಲಿ ತೆಗೆದುಕೊಂಡ ದೊಡ್ಡ ಕಾಡಾನೆ ಐದನೇ ದಿನವು ಸಿಗದ ಕಾರಣ ಯಾವುದೋ ಮರಿಯಾನೆಯನ್ನು ಹಿಡಿದು, ಜನರ ಕಣ್ಣೋರೆಸುವ ತಂತ್ರ ಮಾಡಿದ್ದಾರೆ. ಈಗ ಸೆರೆ ಹಿಡಿಯಲಾಗುವುದಾಗಿ ಹೇಳಿದ ಆನೆಯು ಅತ್ಯಂತ ದೊಡ್ಡದಾಗಿದ್ದು, ಉದ್ದನೆಯ ಕೋರೆಯನ್ನು ಹೊಂದಿದ್ದು, ಬಲಿಷ್ಟವಾಗಿದೆ ಹಾಗೂ 35 ಕ್ಕೂ ಹೆಚ್ಚು ವರ್ಷ ವಯಸಾಗಿದೆ. ಆದರೆ ಅರಣ್ಯ ಇಲಾಖೆಯವರು ದೊಡ್ಡ ಆನೆ ಸಿಗದ ಕಾರಣ ಗುಂಪಿನಲ್ಲಿದ್ದ ಮರಿಯನ್ನು ಸೆರೆ ಹಿಡಿದ್ದಾರೆ. ಇದರಿಂದ ಈ ಸುತ್ತಮುತ್ತಲಿನ ಬಾಗ ಜನರ ಭಯ ಕಡಿಮೆಯಾಗಲು ಸಾಧ್ಯವಿಲ್ಲ.
ಅಪಾಯಕಾರಿ ಆನೆ ಹಿಡಿಯಬೇಕಿತ್ತು
ಪರಿಸರವಾದಿ ಎಚ್.ಪಿ.ಮೋಹನ್ ಮಾತನಾಡಿ, ಅರಣ್ಯ ಸಚಿವರು ಆನೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಈ ಭಾಗದ ಸಮಸ್ಯೆಗಳನ್ನು ಅರಿತುಕೊಂಡು ಹೋಗಿ ಅತ್ಯಂತ ತ್ವರಿತವಾಗಿ ಆನೆ ಹಿಡಿಯಲು ಆದೇಶ ಹೊರಡಿಸಿದ್ದಾರೆ. ಅಲ್ಲದೆ ವೈಜ್ಞಾನಿಕ ರೀತಿಯಲ್ಲಿ ಬೆಳೆ ಪರಿಹಾರವನ್ನು ಶೀಘ್ರ ನೀಡುವುದಾಗಿ ಭರವಸೆ ನೀಡಿದ್ದಾರೆ. ಒಂದು ಆನೆಯನ್ನು ಹಿಡಿದಿರುವುದು ಈ ಭಾಗದ ಜನರ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ. 2 ಆನೆಗಳನ್ನು ಹಿಡಿಯುತ್ತಾರೆ ಎಂದು ಮೌಖಿಕವಾಗಿ ಹೇಳುತ್ತಿದ್ದರೆವರೆತು ಮೊದಲಿಗೆ ಒಂದು ಆನೆ ಹಿಡಿಯಲು ಆದೇಶ ಹೊರಡಿಸಲಾಗಿತ್ತು. ಈಗ ಸೆರೆ ಹಿಡಿದರುವ ಕಾಡಾನೆಯ ಜೊತೆಗೆ ಅತ್ಯಂತ ಅಪಾಯಕಾರಿ ಮಕ್ನಾ ಆನೆಯನ್ನು ಸೆರೆ ಹಿಡಿದ್ದರೆ ಈ ಭಾಗದ ಜನರು ನಿಟ್ಟೂಸಿರುವ ಬಿಡುವಂತಾಗುತ್ತಿತ್ತು.
ಈ ಆನೆ ಹಿಡಿಯುವ ಸಂದರ್ಭದಲ್ಲಿ ಅರವಳಿಗೆ ಮದ್ದು ನೀಡುವಲ್ಲಿ ಹಲವು ಭಾರಿ ಗುರಿ ತಪ್ಪಿದ ಕಾರಣ ಅರವಳಿಗೆ ಮದ್ದು ಮುಗಿದು ಹೋಗಿದ್ದು, ಈಗ ಆನೆ ಹಿಡಿಯುವ ಕಾರ್ಯವನ್ನು ಸ್ಥಗಿತಗೊಳಿಸಿರುವುದುಕ್ಕೆ ಕಾರಣವಾಗಿರಬಹುದು. ಮಕ್ನಾ ಆನೆಯೊಂದಿಗೆ ಎಲ್ಲಾ ಆನೆಗಳನ್ನು ಹಿಡಿಯುವ ಆದೇಶವಾದಾಗ ಮಾತ್ರ ಈ ಭಾಗದ ಎಲ್ಲರಿಗೂ ಸಮಾಧನವಾಗುತ್ತಿದೆ ಎಂದರು. ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ನರಹಂತಕ ಕಾಡಾನೆಯನ್ನು ಹಿಡಿದಿರುವುದು ಸ್ವಲ್ಪಮಟ್ಟಿನ ಸಮಾಧಾನ ತಂದಿದೆ.
ಕಣ್ಣೊರೆಸುವ ತಂತ್ರ
ಜಿಲ್ಲಾ ಪಂಚಾಯ್ತಿ ಸದಸ್ಯ ಪುರುಷೋತ್ತಮ ಮಾತನಾಡಿ, ಕಾರ್ಯಾಚರಣೆ ಐದು ದಿನಗಳವರೆಗೂ ವಿಸ್ತರಣೆಗೊಂಡಿದ್ದರಿಂದ ಅರಣ್ಯ ಇಲಾಖೆಯವರು ಜನರನ್ನು ಬಲಿ ತೆಗೆದುಕೊಂಡ ದೊಡ್ಡ ಕಾಡಾನೆ ಐದನೇ ದಿನವು ಸಿಗದ ಕಾರಣ ಯಾವುದೋ ಮರಿಯಾನೆಯನ್ನು ಹಿಡಿದು, ಜನರ ಕಣ್ಣೋರೆಸುವ ತಂತ್ರ ಮಾಡಿದ್ದಾರೆ. ಈಗ ಸೆರೆ ಹಿಡಿಯಲಾಗುವುದಾಗಿ ಹೇಳಿದ ಆನೆಯು ಅತ್ಯಂತ ದೊಡ್ಡದಾಗಿದ್ದು, ಉದ್ದನೆಯ ಕೋರೆಯನ್ನು ಹೊಂದಿದ್ದು, ಬಲಿಷ್ಟವಾಗಿದೆ ಹಾಗೂ 35 ಕ್ಕೂ ಹೆಚ್ಚು ವರ್ಷ ವಯಸಾಗಿದೆ. ಆದರೆ ಅರಣ್ಯ ಇಲಾಖೆಯವರು ದೊಡ್ಡ ಆನೆ ಸಿಗದ ಕಾರಣ ಗುಂಪಿನಲ್ಲಿದ್ದ ಮರಿಯನ್ನು ಸೆರೆ ಹಿಡಿದ್ದಾರೆ. ಇದರಿಂದ ಈ ಸುತ್ತಮುತ್ತಲಿನ ಬಾಗ ಜನರ ಭಯ ಕಡಿಮೆಯಾಗಲು ಸಾಧ್ಯವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

