ಅದಾಲತ್ನಲ್ಲಿ 6176 ಪ್ರಕರಣ ಇತ್ಯರ್ಥ
ಕ.ಪ್ರ.ವಾರ್ತೆ ಹಾಸನ ನ.27
ಇತ್ತೀಚೆಗೆ ಏರ್ಪಡಿಸಿದ್ದ ಮೆಗಾ ಲೋಕ್ ಅದಾಲತ್ನಲ್ಲಿ ರಾಜೀ ಸಂಧಾನದ ಮೂಲಕ 6176 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್. ಸೋಮಶೇಖರ್ ತಿಳಿಸಿದ್ದಾರೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಃಆಔಖಆ) ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ 2013ರ ಆಗಸ್ಟ್ 1ರಿಂದ ನ.23ರವರೆಗೆ ಮೆಗಾ ಲೋಕ್ ಅದಾಲತ್ ಅನ್ನು ಆಯೋಜಿಸಿ, ರಾಜೀ ಸಂಧಾನದ ಮೂಲಕ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿರುವ ಸಿವಿಲ್, ಕ್ರಿಮಿನಲ್ ಮತ್ತು ಕೌಟುಂಬಿಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
23 ಕೌಟುಂಬಿಕ ಪ್ರಕರಣ: ನ.23ರಂದು ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 793 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಮೆಗಾ ಲೋಕ್ ಅದಾಲತ್ನಲ್ಲಿ 488 ಅಪಘಾತ ಪ್ರಕರಣಗಳು, 23 ಕೌಟುಂಬಿಕ ಪ್ರಕರಣಗಳು, 699 ಸಿವಿಲ್ ಪ್ರಕರಣಗಳು, 641 ಒಡಂಬಡಿಕೆ ಮಾಡಿಕೊಳ್ಳಬಹುದಾದ ಪ್ರಕರಣಗಳು, 619 ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆ್ಯಕ್ಟ್ ಪ್ರಕರಣಗಳು, 3445 ಇತರೆ ಕ್ರಿಮಿನಲ್ ಪ್ರಕರಣಗಳು, 43 ಜೀವನಾಂಶ ಪ್ರಕರಣಗಳು, 3 ಜೀವನಾಂಶ ಪರಿಷ್ಕರಣ ಪ್ರಕರಣಗಳು, 215 ಪ್ರಿಲಿಟಿಗೇಷನ್ ಪ್ರಕರಣಗಳು ಇತ್ಯರ್ಥಗೊಂಡು 488 ಎಂವಿಸಿ ಪ್ರಕರಣಗಳಲ್ಲಿ ಒಟ್ಟು 6,43,03,300 ಪರಿಹಾರ ನೀಡಲಾಗಿದೆ ಎಂದಿದ್ದಾರೆ.
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲದೆ ಪ್ರಿಲಿಟಿಗೇಷನ್ ಲೋಕ್ ಅದಾಲತ್ ಮೂಲಕ ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಬ್ಯಾಂಕಿನ ಅಧಿಕಾರಿಗಳ ಸಭೆ ನಡೆಸಿ, ಬ್ಯಾಂಕುಗಳಿಂದ ಹಣ ವಸೂಲಿಗಾಗಿ ನ್ಯಾಯಾಲಯಕ್ಕೆ ದಾಖಲು ಆಗುವಂತಹ ವ್ಯಾಜ್ಯಗಳನ್ನು ಗುರುತಿಸಿ, ಅವುಗಳನ್ನು ನ್ಯಾಯಾಲಯಕ್ಕೆ ದಾಖಲು ಮಾಡದೇ ಯಾವುದೇ ನ್ಯಾಯಾಲಯದ ಶುಲ್ಕ ಹಾಗೂ ಖರ್ಚನ್ನು ಪಾವತಿ ಮಾಡದೇ ನೇರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಾಸನ ಇಲ್ಲಿಗೆ ಕರೆಸಿಕೊಂಡು ನಮ್ಮ ಪ್ರಾಧಿಕಾರದ ವತಿಯಿಂದ ಕಕ್ಷಿಗಾರರಿಗೆ ನೋಟಿಸನ್ನು ನೀಡಿ, ಬ್ಯಾಂಕ್ ಅಧಿಕಾರಿಗಳು ಮತ್ತು ಕಕ್ಷಿಗಾರರನ್ನು ಬರಮಾಡಿಕೊಂಡು ನ್ಯಾಯಾಧೀಶರ ಸಮ್ಮುಖದಲ್ಲಿ ಸದರಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿತು.
ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಅನುಕೂಲ: ನೂರಾರು ಜನರು ಈ ವಿಶೇಷ ಲೋಕ್ ಅದಾಲತ್ಗೆ ಆಗಮಿಸಿ ತಮ್ಮ ಮೇಲೆ ಇರುವ ಸಾಲದ ಬಗ್ಗೆ ಸ್ವತಃ ಚರ್ಚೆ ನಡೆಸಿ ಶೇ.30ರಿಂದ 50ರಷ್ಟು ರಿಯಾಯಿತಿ ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಾಲಗಳನ್ನು ಕಂತು ಮೂಲಕ ಮರುಪಾವತಿ ಮಾಡಲು ಒಪ್ಪಿ ವ್ಯಾಜ್ಯ ಬಗೆಹರಿಸಿಕೊಂಡಿದ್ದಾರೆ. ಈ ಪ್ರಿಲಿಟಿಗೇಷನ್ ಲೋಕ್ ಅದಾಲತ್ ಮೂಲಕ ಜಿಲ್ಲೆಯಲ್ಲಿ ಒಟ್ಟು 215 ವ್ಯಾಜ್ಯಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಒಂದು ಪ್ರಕರಣದಲ್ಲಿ 16 ಲಕ್ಷ ಸಾಲವನ್ನು 11 ಲಕ್ಷ ಬ್ಯಾಂಕಿನವರು ಇತ್ಯರ್ಥ ಮಾಡಿಕೊಂಡಿದ್ದು ಅದನ್ನು ಪಡೆದುಕೊಂಡ ಫಲಾನುಭವಿ ತುಂಬಾ ಹರ್ಷದಿಂದ ಒಪ್ಪಿಕೊಂಡು ಈ ರೀತಿಯ ಪ್ರಿಲಿಟಿಗೇಷನ್ ಪ್ರಕರಣಗಳು ಆದಷ್ಟು ನಡೆದಲ್ಲಿ ರೈತರು ಮತ್ತು ಇತರ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವುದೆಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಭಿನಂದನೆ: ಮೆಗಾ ಲೋಕ್ ಅದಾಲತ್ನಲ್ಲಿ ಶೀಘ್ರಗತಿಯಲ್ಲಿ ಕೇಸುಗಳು ಇತ್ಯರ್ಥವಾಗಿದ್ದು, ಎರಡೂ ಕಕ್ಷಿಗಾರರ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ಇನ್ನು ಮುಂದೆ ಸೌಹಾರ್ದ ರೀತಿಯಲ್ಲಿ ನಡೆದುಕೊಂಡು ಹೋಗುವಂತೆ ಕೇಸುಗಳನ್ನು ಇತ್ಯರ್ಥ ಮಾಡಿದ್ದು ಈ ಮೆಗಾ ಲೋಕ್ ಅದಾಲತ್ ಈ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ನ್ಯಾಯಾಧೀಶರಿಗೆ, ವಕೀಲರು ಮತ್ತು ಕಕ್ಷಿಗಾರರಿಗೆ, ನ್ಯಾಯಾಂಗ ಇಲಾಖೆಯ ಸಿಬ್ಬಂದಿಗೆ, ವಿವಿಧ ಸಂಸ್ಥೆಗಳಿಗೆ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹುತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ನ್ಯಾಯಾಧೀಶರ ಅವಿರತ ಪರಿಶ್ರಮದಿಂದಾಗಿ ಹೆಚ್ಚು ಕೇಸುಗಳನ್ನು ತೀರ್ಮಾನ ಮಾಡಲು ಸಹಕಾರಿಯಾಗಿದೆ ಎಂದರು. ಈ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕಾರಿಯಾದ ಪ್ರತಿಯೊಬ್ಬ ಕಕ್ಷಿಗಾರರು ತಮ್ಮ ಮಧ್ಯ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು ರಾಜಿಯಾಗಲು ಮುಂದೆ ಬಂದು ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಹಾಗೂ ಸಿಜಿಎಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುಸ್ತಫ ಹುಸೇನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

