ಹಾಸನ

'ಗಾಯತ್ರಿ ಮಂತ್ರ ಪಠಣದಿಂದ ಧೀಶಕ್ತಿ ವೃದ್ಧಿ'

Published On :

ಕ.ಪ್ರ.ವಾರ್ತೆ  ಅರಸೀಕೆರೆ  ನ.27
ಹೆಚ್ಚಿನ ವಿದ್ಯಾರ್ಜನೆಗೆ ಮುನ್ನ ಮಕ್ಕಳಿಗೆ ಬ್ರಹ್ಮೋಪದೇಶ ನೀಡಿ ಉತ್ತಮ ಸಂಸ್ಕಾರ ನೀಡಬೇಕು. ನಿಯಮಿತವಾಗಿ ನಿಷ್ಠೆಯಿಂದ ಗಾಯತ್ರಿ ಮಂತ್ರ ಪಠಣ ಮಾಡುವುದರಿಂದ ನಮ್ಮ ಧೀಶಕ್ತಿ ವೃದ್ಧಿಸಿಕೊಳ್ಳಬಹುದು ಎಂದು ಯಾಜ್ಞವಲ್ಕ್ಯ ಸಂಘದ ಅಧ್ಯಕ್ಷ ಕೆ.ವಿ. ಹಿರಿಯಣ್ಣ ನುಡಿದರು.
ಅವರು ಅರಸೀಕೆರೆ ಯಾಜ್ಞವಲ್ಕ್ಯ ಸಂಘದ ವತಿಯಿಂದ ಇತ್ತೀಚೆಗೆ ನಡೆದ 30ನೇ ವರ್ಷದ ಯಾಜ್ಞವಲ್ಕ್ಯ ಜಯಂತಿ, ಸಾಮೂಹಿಕ ಉಪನಯನ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅತಿ ಅವಶ್ಯ. ಬ್ರಾಹ್ಮಣನಾದವನಿಗೆ ಷೋಡಶ ಕರ್ಮಗಳು ಆಗಬೇಕು. ಆ ದಿಸೆಯಲ್ಲಿ ಉಪನಯನ ಪ್ರಮುಖ ಘಟ್ಟ ಎಂದು ಹೇಳಿದರು.
ಹಿರಿಯ ಪತ್ರಕರ್ತ ಡಿವಿಜಿ 125 ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಸೇತುರಾಂ ಮತ್ತು ಪತ್ರಕರ್ತರು, ಭಾರತ್ ಸೇವಾದಳದ ಜಿಲ್ಲಾ ಉಪಾಧ್ಯಕ್ಷರೂ ಆದ ಎಚ್.ಡಿ. ಸೀತಾರಾಂ ಅವರನ್ನು ಸನ್ಮಾನಿಸುತ್ತಿರುವುದು ತಮಗೆ ಹರ್ಷ ತಂದಿದೆ ಎಂದರು.
ಯಾಜ್ಞವಲ್ಕ್ಯ ಮಹರ್ಷಿಗಳ ಬಗ್ಗೆ ವಿದ್ವಾಂಸ ಪ್ರೊ. ಸತ್ಯನಾರಾಯಣ ಅವರು ವಿಶೇಷ ಉಪನ್ಯಾಸ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೇತುರಾಂ ತಾವು ಮಾಡಿದ ಅಲ್ಪ ಕಾರ್ಯಕ್ಕೆ ಗೌರವಿಸಿರುವ ಸಂಘ ಒಳ್ಳೆಯ ಕಾರ್ಯವನ್ನೂ ಮಾಡುತ್ತಿದೆ ಸಮಾಜಮುಖಿಯಾಗಿ ಚಿಂತಿಸಿ ಸಮಾಜದಲ್ಲಿ ಜನಜಾಗೃತಿಯನ್ನುಂಟು ಮಾಡುತ್ತಿದೆ. ಮಕ್ಕಳಲ್ಲಿ ಸಂಸ್ಕೃತ ಅಧ್ಯಯನಕ್ಕೆ ಸಂಘ ಪ್ರೇರಣೆ ನೀಡಲಿ ಎಂದು ಹೇಳಿದರು.
ಮೈಸೂರಿನ ಯಾಜ್ಞವಲ್ಕ್ಯ ಸಂಘದ ಅಧ್ಯಕ್ಷ ರಾಮಕೃಷ್ಣ, ಸಮಾಜದ ಗುರು ಮಾದನಹಳ್ಳಿ ನಾರಾಯಣ ಭಟ್, ಗೊಲ್ಲರಹೊಸಳ್ಳಿ ಸೀತಾರಾಮ್, ಪ್ರೊ. ಸತ್ಯನಾರಾಯಣ್, ಚಿಕ್ಕಮಗಳೂರು ಶಾಮಣ್ಣ, ರಾಮಚಂದ್ರ ಶಾಸ್ತ್ರಿ ಹಾಗೂ ಅನಂತರಾಮ ಶಾಸ್ತ್ರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.